Ad imageAd image

ಸೇಡಂ ಕೃಷಿ ಮಾರುಕಟ್ಟೆ ಪ್ರಾಂಗಣದ ಸಿಸಿ ರಸ್ತೆ ಕಾಮಗಾರಿ ಕೆಲಸಕ್ಕೆ ಉದ್ಘಾಟನೆ ಮಾಡಿದ ವೈದ್ಯಕೀಯ ಸಚಿವರು.

Bharath Vaibhav
ಸೇಡಂ ಕೃಷಿ ಮಾರುಕಟ್ಟೆ ಪ್ರಾಂಗಣದ ಸಿಸಿ ರಸ್ತೆ ಕಾಮಗಾರಿ ಕೆಲಸಕ್ಕೆ ಉದ್ಘಾಟನೆ ಮಾಡಿದ ವೈದ್ಯಕೀಯ ಸಚಿವರು.
WhatsApp Group Join Now
Telegram Group Join Now

ಸೇಡಂ:- ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ 2023-24 ನೇ ಸಾಲಿನ R.I.D.F-29 ರ ಯೋಜನೆಯಡಿ ಮಂಜೂರಾದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಸಿ.ಸಿ ರಸ್ತೆ (ಡ್ರೇನ್) ನಿರ್ಮಾಣ ಕಾಮಗಾರಿ (2 ಕೋಟಿ‌ 31 ಲಕ್ಷ ರೂ)ಭೂಮಿ ಪೂಜೆಯನ್ನು ಸ್ಥಳೀಯ ಶಾಸಕರು ಹಾಗೂ ವೈದ್ಯಕೀಯ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ಅವರು ನೆರವೇರಿಸಿದರು.

ನಗರದ ಕೃಷಿ ಮಾರುಕಟ್ಟೆಗಳು ಸಮಗ್ರ ಅಭಿವೃದ್ಧಿ ಕಾಣುವ ಉದ್ದೇಶದಿಂದ ವಿವಿಧ ಯೋಜನೆಗಳಲ್ಲಿ ಕಾಮಗಾರಿಗಳ ನೀಲಿ ನಕ್ಷೆ ಹಾಕಿಕೊಳ್ಳಲಾಗಿದೆ.

ಬರುವ ದಿನಗಳಲ್ಲಿ ಮತ್ತಷ್ಟು ಕಾಮಗಾರಿಗಳ ರೂಪಿಸುವಲ್ಲಿ ಕೃಷಿ ಮಾರುಕಟ್ಟೆಯನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶವಿದೆ ಎಂದು ಈ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಕೃಷಿ ಅಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!