ಬಾಗಲಕೋಟೆ:- ಲೋಕಸಭಾ ಸ್ಪರ್ಧಿ ಪಿ ಸಿ ಗದ್ದಿಗೌಡರ ಪರ ಮತ ಯಾಚನೆ ಮಾಡಲು ರಾಜ್ಯ ಚುನಾವಣೆಯ ರಾಜ್ಯ ಉಸ್ತುವಾರಿಗಳಾದ ಡಾ! ರಾಧಾ ಮೋಹನದಾಸ್ ಅಗರವಾಲ್ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು.
ಕೋಟೆ ನಗರಿ ಬಾಗಲಕೋಟೆ ಲೋಕಸಭಾ ಚುನಾವಣಾ ಅಖಾಡ ರಂಗೇರಿದ್ದು ಈ ಸಲದ ಚುನಾವಣೆ ತೀವ್ರ ಪೈಪೋಟಿ ನಡೆದಿದೆ. ಸತತ ಗೆಲುವಿನ ಕಿರೀಟವನ್ನೇ ಧರಿಸುತ್ತಾ ಬಂದಿರುವ ಪಿ. ಸಿ ಗದ್ದಿಗೌಡರ ಒಂದು ಕಡೆಯಾದರೆ ಇನ್ನೊಂದು ಕಡೆ ಹಾಲಿ ಸಚಿವ ಪ್ರಭಾವಿ ರಾಜಕಾರಣಿ ಸಚಿವ ಡೈನಾಮಿಕ್ ರಾಜಕಾರಣಿ ಶಿವಾನಂದ ಪಾಟೀಲರ ಮಗಳು ಸಂಯುಕ್ತ ಪಾಟೀಲ ನಡುವೆ ಜಿದ್ದಾಜ್ಜದ್ದಿ ಕಣವಾಗಿ ಅಬ್ಬರದ ಪ್ರಚಾರಗಳು ನಡೆಯುತ್ತಿವೆ.
ಬಿ ಜೆ ಪಿ ಭಧ್ರ ಕೋಟೆ ಚಿಧ್ರ ಮಾಡಲು ಕಾಂಗ್ರೆಸ್ ಪ್ರಬಲ ಹಾಲಿ ಸಚಿವರ ಮಗಳನ್ನೇ ಅಖಾಡಕ್ಕೆ ಇಳಿಸಿದ್ದು ಮಗಳನ್ನು ಗೆಲ್ಲಿಸಲು ಭರ್ಜರಿ ರಣತಂತ್ರ ರೂಪಿಸಿ ಅಖಾಡಕ್ಕೆ ಇಳಿದಿರುವ ಸಚಿವ ಶಿವಾನಂದ ಪಾಟೀಲರು ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಇದರ ನಡುವೆ ಇಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶ್ರೀ ವೀರಶೈವಕಲ್ಯಾಣ ಮಂಟಪದಲ್ಲಿ ನಡೆದ ಲೋಕಸಭಾ ಚುನಾವಣೆಯ ಬಾಗಲಕೋಟೆ ಮತಕ್ಷೇತ್ರದ ಬಿ ಜೆ ಪಿ ಅಭ್ಯರ್ಥಿ ಪಿ ಸಿ ಗದ್ದಿಗೌಡರ ಪರ ಮತಯಾಚಿಸಲು ರಾಜ್ಯ ಉಸ್ತುವಾರಿಗಳಾದ ಡಾ! ರಾಧಾ ಮೋಹನ ದಾಸ್ ಅಗಾರವಾಲ್ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಯಿತು.
ಇದೇ ಸಂದರ್ಭದಲ್ಲಿ ಶಾಸಕರುಗಳಾದ ಮಹೇಶ್ತೆಂಗಿನಕಾಯಿ, ಲೋಕಸಭಾ ಜಿಲ್ಲಾ ಸಂಚಾಲಕರಾದ ಸಿದ್ದು ಸವದಿ, ಅಭ್ಯರ್ಥಿ ಪಿ. ಸಿ. ಗದ್ದಿಗೌಡರ,, ಶಾಸಕರಾದ ಜಗದೀಶ ಗುಡಗುಂಟಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಶ್ರೀಕಾಂತ ಕುಲಕರ್ಣಿ, ಎಂ. ಕೆ. ಪಟ್ಟಣಶೆಟ್ಟಿ, ದೊಡ್ಡನಗೌಡ ಪಾಟೀಲ, ವಿಧಾನಪರಿಷತ್ ಸದಸ್ಯ ಹನಮಂತ ನಿರಾಣಿ, ಪಿ ಎಚ್
ಪೂಜಾರ, ಲೋಕಸಭಾ ಕ್ಷೇತ್ರದ ಪ್ರಭಾರಿ ಲಿಂಗರಾಜ ಪಾಟೀಲ ಬೆಳಗಾವಿ ಸಹ ಪ್ರಭಾರಿ ಬಸವರಾಜ್ ಯಂಕಂಚಿ,ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
ವರದಿ:-ರಾಜೇಶ್. ಎಸ್. ದೇಸಾಯಿ