
ಬೆಳಗಾವಿ: ಗಡಿ ಉಸ್ತುವಾರಿ ಸಚಿವರು ಹಾಗೂ ರಾಜ್ಯ ಕಾನೂನು ಮತ್ತು ಪ್ರವಾಸೋದ್ಯಮ ಖಾತೆಯ ಸಚಿವರಾದ ಶ್ರೀ ಎಚ್.ಕೆ. ಪಾಟೀಲ್ ಅವರು ಇಂದು ಗಡಿ ಉಸ್ತುವಾರಿ ಸಚಿವರಾಗಿ ಮೊದಲ ಬಾರಿ ಬೆಳಗಾವಿಗೆ ಆಗಮಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಕನ್ನಡ ಪರ ಸಂಘಟನೆಗಳ ಜೊತೆಗೆ ಸಚಿವರ ಸಭೆಯಲ್ಲಿ ಕ.ರ.ವೇ. ಹೋರಾಟಗಾರರು ಉಪಸ್ಥಿತರಿದ್ದರು.
ಜಿಲ್ಲಾಧ್ಯಕ್ಷರಾದ ದೀಪಕಗುಡಗನಟ್ಟಿ ಅವರು ಮಾತನಾಡಿದರು.. ಸನ್ಮಾನ್ಯ ಹೆಚ್.ಕೆ.ಪಾಟೀಲ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ಮಾಡಿದ ರಾಜ್ಯ ಸರ್ಕಾರವನ್ನು ವಂದಿಸಿ,ಬೆಳಗಾವಿ ಗಡಿ ಕನ್ನಡಿಗರ ಅಹವಾಲು ಕೇಳಲು ಬೆಳಗಾವಿಗೆ ಬಂದಿದ್ದ ಅವರನ್ನು ಕರವೇ ಬೆಳಗಾವಿ ಜಿಲ್ಲಾ ಘಟಕದ ಪರವಾಗಿ ಅಭಿನಂದನೆಗಳನ್ನು ತಿಳಿಸಿ ಅವಕಾಶ ಮಾಡಿಕೊಟ್ಟ ಬೆಳಗಾವಿ ಜಿಲ್ಲಾಡಳಿತಕ್ಕೆ ತುಂಬು ಹೃದಯದ ಧನ್ಯವಾದಗಳುನ್ನು ತಿಳಿಸಿದ ಕನ್ನಡ ಪರ ಹೋರಾಟಗಾರರು.
ವರದಿ: ರಾಜು ಮುಂಡೆ




