ಚಿಟಗುಪ್ಪ :ತಾಲೂಕಿನ ನಿರ್ಣಾ ಗ್ರಾಮದ ಪ್ರಮುಖ ರಸ್ತೆಯಲ್ಲಿನ ಜಮೀನನೊಂದನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡ ಮಾಹಿತಿ ಹಿನ್ನೆಲೆಯಲ್ಲಿ ತಾಲೂಕು ದಂಡಾಧಿಕಾರಿ ಮಂಜುನಾಥ ಪಂಚಾಳ ನೇತೃತ್ವದಲ್ಲಿ ಒತ್ತುವರಿ ಸ್ಥಳವನ್ನು ತೆರವುಗೊಳಿಸಲಾಯಿತು.
ಈ ಭೂಮಿಯೂ ಬಹಳಷ್ಟು ಬೆಲೆ ಬಾಳುವಂತಿದ್ದು ಅನಧಿಕೃತವಾಗಿ ಒತ್ತುವರಿಯಾಗಿತ್ತು.ಸುಮಾರು ಒಂದೂವರಿ ಎಕ್ಕರೆ ಭೂಮಿಯನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದರು. ಮಂಗಳವಾರ ಬೆಳಗ್ಗೆ ತಹಸೀಲ್ದಾರ್ ಮಂಜುನಾಥ ಪಂಚಾಳ ಅವರ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಸರ್ಕಾರದ ಜಮೀನು ವಶಕ್ಕೆ ಪಡೆಯಲಾಯಿತು.
ಬಳಿಕ ತಹಸೀಲ್ದಾರ್ ಮಂಜುನಾಥ ಪಂಚಾಳ ಮಾತನಾಡಿ,ಇದು ಸರ್ಕಾರಿ ಜಮೀನಾಗಿದ್ದು ತಿಳಿದೊ ತಿಳಿಯದೋ ಈ ಭೂಮಿ ಒತ್ತುವರಿ ಮಾಡಿದ್ದು ತಪ್ಪು.ಇಲ್ಲಿ ಸರ್ಕಾರದ ಕಚೇರಿ ನಿರ್ಮಿಸಲು ಭೂಮಿಯನ್ನು ಕಾಯ್ದಿರಿಸಲಾಗಿದ್ದು,ಇದಕ್ಕೆ ದಾಖಲೆಗಳು ಇವೆ.ಕಾರಣ ಒತ್ತುವರಿ ಭೂಮಿ ಯನ್ನು ಬಿಟ್ಟುಕೊಡುವಂತೆ ಮನವಿ ಮಾಡಿದರು.
ಈ ಸಮಯದಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದರು.ಸಮರ್ಪಕ ದಾಖಲೆಯಿಲ್ಲದ ಕಾರಣ ಸರಕಾರಿ ಜಮೀನನನ್ನು ಸರಕಾರದ ಅಧೀನಕ್ಕೆ ನೀಡುವಂತೆ ತಿಳಿಸಿದರು.
ಕಳೆದ 20 ವರ್ಷಗಳಿಂದ ಈ ಜಾಗದಲ್ಲಿ ನಾವು ರಾಷ್ಟ್ರೀಯ ಹಬ್ಬಗಳು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ. ಭೂಮಿ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದೇವೆ. ಈಗ ಒಮ್ಮೆಲೇ ಭೂಮಿ ತೆರವುಗೊಳಿಸಲಾಗಿದೆ, ಇದು ಖಂಡನಾರ್ಹ,ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಮಧ್ಯೆ ಪ್ರವೇಶಿಸಬೇಕು ಎಂದು ನಿರ್ಣಾ ಗ್ರಾಮದ ಯುವ ಮುಖಂಡ ಅಬ್ದುಲ ಖದೀರ ಲಷ್ಕರಿ ಒತ್ತಾಯಿಸಿರು.
ವರದಿ:ಸಜೀಶ ಲಂಬುನೋರ




