Ad imageAd image
- Advertisement -  - Advertisement -  - Advertisement - 

ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಚಿವರ ಬೇಸರ

Bharath Vaibhav
ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಚಿವರ ಬೇಸರ
WhatsApp Group Join Now
Telegram Group Join Now

ಬೆಳಗಾವಿ : -ಕೆಲವರ ಹಿಡನ್‌ ಅಜೆಂಡಾಗಳೇ ಆರ್ಥಿಕ ಸಂಕಷ್ಟಕ್ಕೆ ಕಾರಣ.ಕೆಲವರ ಹಿಡನ್‌ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ಬೇಸರ ವ್ಯಕ್ತಪಡಿಸಿದರು.

ಬೆಳಗಾವಿ ನಗರ ಪಾಲಿಕೆ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ಕುರಿತಂತೆ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಇದಕ್ಕೆ ಅಧಿಕಾರಿಗಳು ಎಷ್ಟು ಕಾರಣವೊ, ಜನಪ್ರತಿನಿಧಿಗಳು ಅಷ್ಟೇ ಕಾರಣ ಎಂದು ಸಚಿವರು ಹೇಳಿದರು.

ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ಜನರು ಸಂಕಷ್ಟ ಸಿಲುಕಿದ್ದು, ಒಬ್ಬರ ಮೇಲೆ ಬೊಟ್ಟು ಮಾಡಿ ತೋರಿಸೋಕೆ ಬರೋದಿಲ್ಲ ಎಂದು ಹೇಳಿದರು.

ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಹಾಗೂ ನಗರದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಿಸ್ವಾರ್ಥತೆಯಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ನಾವೆಲ್ಲ ರಾಜಕಾರಣ ಮಾಡಿದರೆ ಬೆಳಗಾವಿಯನ್ನ ಸ್ವರ್ಗ ಮಾಡಬಹುದು. ಹಿಡನ್ ಅಜೆಂಡಾಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಸೋರುತ್ತಿದೆ ಎಂದು ಸಚಿವರು ಬೇಸರ ವ್ಯಕ್ತಪಡಿಸಿದರು.

ಬೆಳಗಾವಿಯನ್ನು ರಾಜ್ಯದ ಅತಿದೊಡ್ಡ ಜಿಲ್ಲೆ, ಎರಡನೇ ರಾಜಧಾನಿ ಅಂತಾ ಹೆಮ್ಮೆಯಿಂದ ಹೇಳ್ತೀವಿ. ಬೆಳಗಾವಿ ತಾಲೂಕು ಉಡುಪಿ ಜಿಲ್ಲೆಗಿಂತ ದೊಡ್ಡದು. ಬೆಳಗಾವಿ ತಾಲೂಕಿನಲ್ಲಿ ಏಂಟೂವರೆ ಲಕ್ಷ ಜನಸಂಖ್ಯೆ ಇದ್ದರೆ, ಉಡುಪಿ ಜಿಲ್ಲೆ 9 ಲಕ್ಷ ಜನ ಸಂಖ್ಯೆ ಹೊಂದಿದೆ. ಇಂತಹ ದೊಡ್ಡ ಪಾಲಿಕೆ ಹೀಗಾಗೋಕೆ ಹಿಡನ್ ಅಜೆಂಡಾಗಳೇ ಕಾರಣ ಎಂದು ಬೆಳಗಾವಿ ತಾಲೂಕಿನ ಹಿರೇವಾಗೇವಾಡಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.

* ದ್ವೇಷ ರಾಜಕಾರಣ ಆರೋಪ ಸುಳ್ಳು  ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಒಡೆತನದ ಸಕ್ಕರೆ ಕಾರ್ಖಾನೆಗೆ ಕಬ್ಬು ಅರೆಯಲು ಕರ್ನಾಟಕ ಪರಿಸರ ಮಂಡಳಿ ಅನುಮತಿ ನಿರಾಕರಿಸಿದ್ದಕ್ಕೆ ದ್ವೇಷ ರಾಜಕೀಯ ಕಾರಣವಲ್ಲ. ಸರ್ಕಾರ ಕಾನೂನು ಪ್ರಕಾರ ಕ್ರಮ ಕೈಗೊಂಡಿದೆ. ದ್ವೇಷ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಲಿ, ನಾನಾಗಲಿ ದ್ವೇಷ ರಾಜಕೀಯ ಮಾಡುತ್ತಿಲ್ಲ. ರಾಜಕೀಯ ಲಾಭಕ್ಕಾಗಿ ಸರ್ಕಾರದ ಮೇಲೆ ಇಲ್ಲದ ಸಲ್ಲದ ಆರೋಪ ಮಾಡಲಾಗುತ್ತಿದೆ ಎಂದು ಹೇಳಿದರು.

ಬಿಜೆಪಿ- ಜೆಡಿಎಸ್‌ ನಾಯಕರ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸಾರಥ್ಯದಲ್ಲಿ ಆಗಸ್ಟ್‌ 31 ರಂದು ಸಚಿವರು, ಶಾಸಕರಿಂದ ರಾಜಭವನ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ವರದಿ :-ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!