ಕಣಕುಂಬಿ: ಹೌದು ಕರ್ನಾಟಕ ರಾಜ್ಯ ಸರ್ಕಾರ ಆದಾಯದ ಬೊಕ್ಕಸಕ್ಕೆ ಪ್ರಮುಖ ಆದಾಯ ಭರಿತ ಇಲಾಖೆ ಅಬಕಾರಿ ಇಲಾಖೆ. ಬಹುಶಃ ಮತ್ತು ಭಾಗಶಃ ಅಬಕಾರಿ ಇಲಾಖೆ ಸಚಿವರು ಈ ಸ್ಟೋರಿ ನೋಡಿದ್ರೆ ಅಯ್ಯೋ ಪಾಪ ಎನ್ನುತ್ತಾರೆನೋ ಅನಿಸುತ್ತೆ.
ಅಷ್ಟಕ್ಕೂ ಬೆಳಗಾವಿ ಜಿಲ್ಲೆಯ ಅಬಕಾರಿ ಇಲಾಖೆಯ ಮೋಸ್ಟ್ ಪಾಪ್ಯುಲರ್ ಪ್ಲೇಸ್ ಅಂದ್ರೇ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಕಣಕುಂಬಿ ಹತ್ತಿರವಿರುವ ಕರ್ನಾಟಕ ರಾಜ್ಯದ ಅಬಕಾರಿ ಇಲಾಖೆ ವ್ಯಾಪ್ತಿಗೆ ಬರುವ ಸುರ್ಲಾ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಹಲವಾರು ಸಮಸ್ಯೆಗಳ ನಡುವೆಯೇ ಮೂಲ ಭೂತ ಸೌಕರ್ಯಗಳಿಲ್ಲದೇ ದಿನನಿತ್ಯ ಕೆಲಸ ಮಾಡುತ್ತಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಥೆ..ವ್ಯಥೆ.
ಮೊದಲೇ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ನೆರೆಯ ಗೋವಾ ರಾಜ್ಯಕ್ಕೆ ಹೊಂದಿಕೊಂಡಿರುವ ಈ ಅಬಕಾರಿ ಚೆಕ್ ಪೋಸ್ಟ್ ನ ಕಚೇರಿಯು ತಗಡಿನ ಶೆಡ್ ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು, ಸಮರ್ಪಕ ವಿದ್ಯುತ್ ಸುಮಸ್ಯೆ ಹಾಗೂ ಸರ್ಕಾರಿ ವಾಹನ ಇಲ್ಲದೇ ಇರುವುದು, ಶೌಚಾಲಯ ಹಾಗೂ ಸಿಬ್ಬಂದಿಗಳಿಗೆ ವಸತಿ ವ್ಯವಸ್ಥೆ ಇಲ್ಲದೇವಿರುವುದು, ಕಾಡು ಪ್ರಾಣಿಗಳ ಹಾವಳಿಗಳ ಮದ್ಯೆಯೇ ದಿನನಿತ್ಯ ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಪರಿಸ್ಥಿತಿ ತುಂಬಾ ಶೋಚನೀಯ ವಾಗಿದೆ. ಇಷ್ಟೆಲ್ಲಾ ಸಮಸ್ಯೆಗಳು ಇದ್ದರೂ ತನ್ನ ಕಷ್ಟಗಳನ್ನು ಯಾರಿಗೂ ಹೇಳಲಾಗದೇ , ಕೆಳಲಾಗದೇ ತುಂಬಾ ತೊಂದರೆಯಲ್ಲಿದ್ದಾರೆ ಇಲ್ಲಿನ ಅಬಕಾರಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು.
ಆದ್ದರಿಂದ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಭೇಟಿಕೊಟ್ಟು ಇಲ್ಲಿನ ದುಃಸ್ಥಿತಿಯ ಬಗ್ಗೆ ಸಮಗ್ರವಾಗಿ ವರದಿ ತಯಾರಿಸಿ ಕರ್ನಾಟಕ ಸರ್ಕಾರದ ಅಬಕಾರಿ ಇಲಾಖೆ ಸಚಿವರು ಆದ ಶ್ರೀ ಆರ್.ಬಿ ತಿಮ್ಮಾಪುರೆ ಅವರಿಗೆ ಕರೆ ಮಾಡಿ ಈ ಸಮಸ್ಯೆಗಳ ಬಗ್ಗೆ ಗಮನಕ್ಕೆ ತೆಗೆದುಕೊಂಡು ಬಂದು ಬೆಳಕು ಚೆಲ್ಲುವ ಕೆಲಸ ಮಾಡಿದ್ದಾರೆ. ಇನ್ನಾದ್ರೂ ಈ ಚೆಕ್ ಪೋಸ್ಟ್ ನ ದುಸ್ಥಿತಿಗೆ ಕಾಯಕಲ್ಪ ಸಿಗುವುದೇ ಎಂಬುದನ್ನು ಕಾದುನೋಡಬೇಕಿದೆ.
ವರದಿ:ಬಸವರಾಜು




