Ad imageAd image

ಒಳಮಿಸಲಾತಿ ಬಗ್ಗೆ ಚರ್ಚೆ ಮಾಡದ ಮಾದಿಗ ಸಮುದಾಯದ ಸಚಿವರು ಸರಕಾರದ ಗುಲಾಮರು

Bharath Vaibhav
ಒಳಮಿಸಲಾತಿ ಬಗ್ಗೆ ಚರ್ಚೆ ಮಾಡದ ಮಾದಿಗ ಸಮುದಾಯದ ಸಚಿವರು ಸರಕಾರದ ಗುಲಾಮರು
WhatsApp Group Join Now
Telegram Group Join Now

ಗೋಕಾಕ: ಒಳಮಿಸಲಾತಿ ಜಾರಿಯಾಗಬೇಕೆಂದು ಹರಿಹರದಿಂದ ಬೆಳಗಾವಿ ಮೂಲಕ ಗೋಕಾಕಕ್ಕೆ ಎಸ್,ಡಿ,ಪಿ,ಆಯ್, ರಾಜ್ಯ ಕಾರ್ಯದರ್ಶಿ ಬಾಸ್ಕರ ಪ್ರಕಾಶ ನೇತೃತ್ವದಲ್ಲಿ ಆಗಮಿಸಿದ್ದ ಒಳಮಿಸಲಾತಿಗಾಗಿ ಕ್ರಾಂತಿಕಾರಿ ರಥಯಾತ್ರೆಯನ್ನು ಗೋಕಾಕ ತಾಲೂಕಿನ ಮಾದಿಗ ಸಮಾಜದವರು ಪಾಲ್ಸ್ ರಸ್ತೆಯಲ್ಲಿರುವ ಮಾಹಾತ್ಮಾ ಗಾಂದೀಜಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮುಇಲಕ ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು.

ಈ ರಥಯಾತ್ರೆಯಲ್ಲಿ ಹುಕ್ಕೇರಿ ತಾಲೂಕಿನ ನೂರಾರು ಮಾದಿಗ ಸಮಾಜದವರು ಬೈಕ ರ್ಯಾಲಿ ಮುಖಾಂತರ ರಥಯಾತ್ರೆ ಜೊತೆಯಲ್ಲಿ ಗೋಕಾಕದ ವರೆಗೆ ಸಾಥ ನೀಡಿದರು

ಒಳಮಿಸಲಾತಿ ಕ್ರಾಂತಿಕಾರಿ ರಥಯಾತ್ರೆ ಗೋಕಾಕಕ್ಕೆ ಆಗಮಿಸಿತಿದ್ದಂತೆ ಡಾ: ಬಾಬಾಸಾಹೇಬ ಡಾ: ಅಂಬೇಡ್ಕರ ಮತ್ತು ಬಸವೇಶ್ವರ ಪುತ್ಥಳಿಗೆ ಗೋಕಾಕ ಮುಖಂಡರು ಮಾಲಾರ್ಪಣೆ ಮಾಡಿ ಬೈಕ ರ್ಯಾಲಿ ಜೊತೆಗೂಡಿ ಸಂಗೊಳ್ಳಿ ರಾಯಣ್ಣ ವೃತ್ತ, ಭಾಪನಾ ಚೌಕ, ಆದಿಜಾಂಬವ ನಗರದಲ್ಲಿ ತೆರಳುವಾಗ ಸಾರ್ವಜನಿಕರು ಹೂ ಹಾರಿಸಿ ಸ್ವಾಗತ ಮಾಡಿದರು.

ಇನ್ನು‌ ಡಾ: ಅಂಬೇಡ್ಕರ ಸಭ ಭವನದಲ್ಲಿ ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸನ್ಮಾನ ಸ್ವಿಕರಿಸಿ ಮಾತನಾಡಿದ ಎಸ್,ಡಿ,ಪಿ,ಆಯ್, ರಾಜ್ಯ ಕಾರ್ಯದರ್ಶಿ ಬಾಸ್ಕರ ಪ್ರಕಾಶ ಇವರು ಕ್ಯಾಬಿನೆಟ್ ಸಭೆಯಲ್ಲಿ ಒಳಮಿಸಲಾತಿ ಬಗ್ಗೆ ಚರ್ಚೆ ಮಾಡದ ಮಾದಿಗ ಸಮುದಾಯದ ಸಚಿವರು ನಾಲಾಯಕರು ಅವರು ನಮ್ಮ ಸಮುದಾಯದ ನಾಯಕರಲ್ಲ ಪಕ್ಷದ ಗುಲಾಮಗಿರಿಯ ನಾಯಕರು ಎಂದು ಹರಿಹಾಯ್ದರು.

ನಿಮ್ಮ ಮಕ್ಕಳ ಭವಿಷ್ಯದ ಜೊತೆ ಆಟ ಅಡುವ ಕಾಂಗ್ರೇಸ್ಸಿಗರನ್ನು ಮನೆಗೆ ಸೇರಿಸಬೇಡಿ ಅಷ್ಟೆ ಅಲ್ಲ ಮಾದಿಗ ಮತ್ತು ಮಾದರ ಎರಡು ಜಾತಿಗಳನ್ನು ಬೇರೆ ಮಾಡುವ ಹುನ್ನಾರ ಸರಕಾರ್ ಸ್ಪಷ್ಟಿ ಮಾಡಿದೆ,ನಮ್ಮ ಹಕ್ಕಿಗಾಗಿ 35 ವರ್ಷಗಳಿಂದ ಹೋರಾಟದ ಮಾಡುತ್ತಾ ಬಂದರು ನಮಗೆ ನ್ಯಾಯ ಸಿಕ್ಕಿಲ್ಲ,
ಬರುವ ಜೂನ 9 ಬೆಂಗಳೂರಲ್ಲಿ ಬೃಹತ್ತ ಸಮಾವೇಶ ಮಾಡಿ ಸರಕಾರಕ್ಕೆ ಕೊನೆಯದಾಗಿ ಎಚ್ಚರಿಕೆ ನೀಡಬೇಕಾಗಿದೆ. ಅದಕ್ಕೆ ತಾವೆಲ್ಲರೂ ಹೆಚ್ಚಿನ ಜನಸಂಖ್ಯೆಯಲ್ಲಿ ಆಗಮಿಸಬೇಕೆಂದು ಕರೆ ನೀಡಿದರು.

ಈ‌ ಸಂದರ್ಭದಲ್ಲಿ ಸ್ಥಳಿಯ ಮುಖಂಡರಾದ ಅಶೋಕ ಮೇಸ್ತ್ರಿ, ಬಸವರಾಜ ಕಾಡಾಪುರ, ಬಸವರಾಜ ಆರೆನ್ನವರ ,ರವಿ ಕಡಕೋಳ, ಕಮಲಾ ಕರೆಮನ್ನವರ ಸೇರಿದಂತೆ ಇನ್ನೂಳಿದವರು ಉಪಸ್ಥಿತರಿದ್ದರು.

ಮನೋಹರ ಮೇಗೇರಿ

WhatsApp Group Join Now
Telegram Group Join Now
Share This Article
error: Content is protected !!