ಕೊಪ್ಪಳ : ರಾತ್ರೋರಾತ್ರಿ ದಲಿತರ ಮನೆಗೆ ದುರುಳರು ಬೆಂಕಿ ಹಚ್ಚಿ ಅಮಾನವೀಯತೆ ಎಸಗಿರುವಂತಹ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ನಡೆದಿದೆ.
ದಲಿತ ಸಮುದಾಯದ ಮೌನೇಶ ಕೊಡಗುಂಟಿ ಮನೆಗೆ ಸವರ್ಣೀಯರು ಬೆಂಕಿ ಇಟ್ಟಿದ್ದಾರೆ ಎನ್ನಲಾಗಿದೆ.ಸ್ಥಳಕ್ಕೆ ಕೊಪ್ಪಳ ಎಸ್‌ಪಿ ರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆ ಮನೆಗೆ ಬೆಂಕಿ ಇಟ್ಟಿದ್ದಾರೆ ಎಂದು ಮೌನೇಶ್ ಆರೋಪಿಸಿದ್ದಾರೆ.
ವರದಿಗಳ ಪ್ರಕಾರ ಮಧ್ಯರಾತ್ರಿ ಸುಮಾರು 2-3 ಗಂಟೆ ಸುಮಾರಿಗೆ ಕಿಡಿಗೇಡಿಗಳು ಮೌನೇಶ್ ಅವರ ಮನೆಗೆ ಬೆಂಕಿ ಇಟ್ಟಿದ್ದಾರೆ.
ಈ ಹಿಂದೆ ಮೌನೇಶ್ ಹಾಗೂ ಸ್ಥಳೀಯ ಸವರ್ಣೀಯ ಸಮುದಾಯದವರ ನಡುವೆ ಗಲಾಟೆ ನಡೆದಿತ್ತು. ಇದರ ದ್ವೇಷದಿಂದಾಗಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.




