Ad imageAd image

ತಾಯಿ , ಮಕ್ಕಳ ಆಸ್ಪತ್ರೆ ಸುಮಾರು 28 ಕೋಟಿ ರೂಪಾಯಿದಲ್ಲಿ ನಿರ್ಮಿಸಲಾಗಿದ್ದು ಇನ್ನು ಉದ್ಘಾಟಿಸದೆ ಪಾಳು ಬಿದ್ದಿದೆ

Bharath Vaibhav
ತಾಯಿ , ಮಕ್ಕಳ ಆಸ್ಪತ್ರೆ ಸುಮಾರು 28 ಕೋಟಿ ರೂಪಾಯಿದಲ್ಲಿ ನಿರ್ಮಿಸಲಾಗಿದ್ದು ಇನ್ನು ಉದ್ಘಾಟಿಸದೆ ಪಾಳು ಬಿದ್ದಿದೆ
WhatsApp Group Join Now
Telegram Group Join Now

ಚಿಕ್ಕೋಡಿ :- ಸುಮಾರು 28 ಕೋಟಿಗಳ ವೆಚ್ಚದಲ್ಲಿ, ನಿರ್ಮಾಣವಾದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಇನ್ನೂ ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದೆ,ಇದನ್ನು ಶೀಘ್ರದಲ್ಲಿ ಆರಂಭಿಸಬೇಕೆಂದು, ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ.

ಚಿಕ್ಕೋಡಿ ಪಟ್ಟಣದ ಹೊರವಲಯದಲ್ಲಿ ಸುಮಾರು 28 ಕೋಟಿಗೂ ಹೆಚ್ಚು ವೆಚ್ಚ ಮಾಡಿ ಕಟ್ಟಿಸಲಾದ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯು ನಿರ್ಮಾಣಗೊಂಡು ವರ್ಷಗಳೇ ಕಳೆದಿವೆ, ಅದು ಉದ್ಘಾಟನೆಗೊಳ್ಳದೆ ಪಾಳು ಬಿದ್ದಿದೆ, ಇದನ್ನು ಕೂಡಲೇ ಆರಂಭಿಸಬೇಕೆಂದು, ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಸಂಜು ಬಡಿಗೇರ ಇವರ ನೇತೃತ್ವದಲ್ಲಿ, ಮಾನ್ಯ ತಹಶೀಲ್ದಾರ ಚಿಕ್ಕೋಡಿ ಇವರ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಲಾಯಿತು

ಈ ಸಂಧರ್ಭದಲ್ಲಿ ಮಾತನಾಡಿದ ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ, ಜನರ ತೆರಿಗೆ ಹಣದಿಂದ ಕಟ್ಟಿಸಿದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಬಡ ಜನರಿಗೆ ಸೇವೆ ನೀಡಬೇಕಿತ್ತು ಆದರೆ ಕೆಲವು ಆರೋಗ್ಯ ಇಲಾಖೆಯ ಅಧಿಕಾರಿಗಳ ಒಳಸಂಚಿನಿಂದ ಉದ್ಘಾಟನೆಗೊಳ್ಳದೆ ಇರುವುದು ಖಂಡನೀಯ, ಸಾರ್ವಜನಿಕ ಆಸ್ಪತ್ರೆಯ ಕೆಲ ಸಿಬ್ಬಂದಿಗಳು ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸುತ್ತಿರುವುದರಿಂದ, ಬಡ ರೋಗಿಗಳಿಗೆ ಸರಕಾರದ ಯೋಜನೆಗಳು ದೊರೆಯದೇ ವಂಚಿತರಾಗುತ್ತಿದ್ದಾರೆ, ಕರವೇ ಸಂಘನೆಯ ಮುಖಂಡರಾದ ಸಂಜು ಬಡಿಗೇರ ಮಾತನಾಡಿ,

ಈ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗದೇ ಇದ್ದ ಕಾರಣ ಬಡ ಜನರು ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 50-60 ಸಾವಿರ ಬಿಲ್ ತುಂಬುವ ಪರಿಸ್ಥಿತಿ ಎದುರಾಗುತ್ತಿದೆ, ಬಡವರು ಎಲ್ಲಿಂದ ಹಣ ತರಬೇಕು, ಕೂಡಲೇ ಈ ಆಸ್ಪತ್ರೆ ಉದ್ಘಾಟನೆಗೊಂಡು, ಬಡ ಜನರ ಸೇವೆಗಾಗಿ ಸಿದ್ಧವಾಗಬೇಕು, ಇಲ್ಲವಾದರೆ ಸಾರ್ವಜನಿಕ ಆಸ್ಪತ್ರೆಯ ಎದುರಿಗೆ ಉಗ್ರ ಹೋರಾಟ ಮಾಡಲಾಗುವುದು, ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಈ ಸಂಧರ್ಭದಲ್ಲಿ ರುದ್ರಯ್ಯಾ ಹಿರೇಮಠ, ಅಮೂಲ ನಾವಿ, ಬಸವರಾಜ ಸಾಜನೆ, ರಫೀಕ ಪಠಾಣ, ಖಾನಪ್ಪಾ ಬಾಡಕರ, ಮಹೇಶ ಕಾಂಬಳೆ, ಅಪ್ಪಾಸಾಹೇಬ ಹಿರೇಕೊಡಿ, ರಾಮಾ ನೇಜ, ಮಂಜು ಮುಡಸೆ, ರಮೇಶ ಕರ್ನೂರೆ, ಸೌರಭ ಹಿರೇಮಠ, ಸತ್ಯಪ್ಪಾ ಕಾಂಬಳೆ, ದುಂಡಪ್ಪಾ ಬಡಿಗೇರ ಹಾಗೂ ಇತರ ಕರವೇ ಹೋರಾಟಗಾರರು ಉಪಸ್ಥಿತರಿದ್ದರು.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!