ಬೆಂಗಳೂರು: ತಾಯಿಯೇ ಇಬ್ಬರು ಮಕ್ಕಳ ಕೊಲೆ ಮಾಡಿದ ಹೃದಯ ವಿದ್ರಾವಕ ಘಟನೆ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
9 ವರ್ಷದ ಪುತ್ರಿ ಮತ್ತು 7 ವರ್ಷದ ಮಗನ ಕೊಲೆ ಮಾಡಲಾಗಿದೆ. ದಿಂಬಿನಿಂದ ಉಸಿರುಗಟ್ಟಿಸಿ ಇಬ್ಬರು ಮಕ್ಕಳನ್ನು ತಾಯಿ ಕೊಲೆ ಮಾಡಿದ್ದಾಳೆ.ಸ್ಥಳಕ್ಕೆ ಜಾಲಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದ್ದು, ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.