ಬೆಳಗಾವಿ : ಕೆಟ್ಟ ಮಕ್ಕಳು ಇರಬಹುದು ಆದರೆ ದುಷ್ಟ ತಾಯಿಯು ಇರಲ್ಲ ಎಂಬ ಮಾತಿಗೆ ಇಲ್ಲೋರ್ವ ತಾಯಿ ಕಳಂಕವಾಗಿದ್ದಾಳೆ.
ತನ್ನ ಎರಡು ತಿಂಗಳ ಹಸುಗೂಸನ್ನೇ ಕೆರೆಗೆ ಎಸೆದು ಹೆತ್ತ ತಾಯಿಯೇ ಕೊಲ್ಲಲು ಯತ್ನಿಸಿರುವ ಅಮಾನವೀಯ ಘಟನೆ ಬೆಳಗಾವಿಯ ಕಣಬರಗಿ ಕೆರೆಯಲ್ಲಿ ನಡೆದಿದೆ.
ಕಟುಕಿ ತಾಯಿ ಮಗುವನ್ನು ಇಂದು ಮಧ್ಯಾಹ್ನ ಕೆರೆಗೆ ಎಸೆಯುವಾಗ ನೋಡಿದ ಸ್ಥಳೀಯರು ಕೂಡಲೇ ಕೆರೆಯಿಂದ ಮಗುವನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಮಹಿಳೆಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಂಧಿತ ಆರೋಪಿ ತಾಯಿ 35 ವರ್ಷದ ಶಾಂತಾ ಕರವಿನಕುಪ್ಪಿ ಎಂದು ತಿಳಿದುಬಂದಿದೆ. ಮಗುವಿಗೆ ಫಿಡ್ಸ್ ರೋಗ ಇತ್ತು. ಚಿಕಿತ್ಸೆ ಕೊಡಿಸಿದ್ದರೂ ಗುಣವಾಗಲಿಲ್ಲ ಎಂದು ಶಾಂತಾ ಪೊಲೀಸರ ಬಳಿ ಹೇಳಿಕೆ ನೀಡಿದ್ದಾಳೆ.
ಅತ್ತ ಸೆಲ್ಫೀ ತೆಗೆದುಕೊಳ್ಳುವಾಗ ಕೈಜಾರಿ ಮಗು ಕೆರೆಗೆ ಬಿದ್ದಿದೆ ಅಂತಾ ಥಳಿಸಿದ್ದ ಜನರ ಬಳಿ ಕಾರಣ ಕೊಟ್ಟಿದ್ದಾಳಂತೆ. ಸದ್ಯ ಮಾಳಮಾರುತಿ ಪೊಲೀಸರಿಂದ ಮಗುವಿನ ತಾಯಿ ಶಾಂತಾಳ ವಿಚಾರಣೆ ನಡೆಯುತ್ತಿದೆ.