ಹುಬ್ಬಳ್ಳಿ:-ಪ್ರಿಯಕರನೊಂದಿಗೆ ಬಂದ ಯುವತಿಗೆ ಆಕೆಯ ತಾಯಿ ಹಾಗೂ ತಾಯಿ ಸಹೋದರ ಥಳಿಸಿದ ಘಟನೆ ನಗರದ ಲ್ಯಾಮಿಂಗ್ಟನ್ ರಸ್ತೆಯಲ್ಲಿಂದು ಬೆಳಿಗ್ಗೆ ನಡೆದಿದೆ.

ಪ್ರಿಯಕರನೊಂದಿಗೆ ಯುವತಿ ನಿಂತಿರುವುದನ್ನು ಯುವತಿ ತಾಯಿ ಮತ್ತು ತಾಯಿಯ ಸಹೋದರ ನೋಡಿ ಜಗಳ ತೆಗೆದಿದ್ದು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ.

ಪ್ರೀತಿ ಮಾಡಿದ್ದಕ್ಕೆ ರೊಚ್ಚಿಗೆದ್ದು ಜೋಡಿಗೆ ಥಳಿಸಿದ ಯುವತಿ ತಾಯಿಯ ಸಹೋದರ ಪ್ರೇಮಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದೆ.
ವರದಿ:- ಸುಧೀರ್ ಕುಲಕರ್ಣಿ




