ಹಾವೇರಿ: ಶಿಗ್ಗಾoವ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು.
ಈ ನಾಡು ಕಂಡ ಸರಳ, ಸಜ್ಜನಿಕ, ವಿಷೇಶ ಮತ್ತು ವಿಶಿಷ್ಟ ರಾಜಕಾರಣಿ, ವಿಜಾರವಾದಿ ಚಿಂತಕ ಸಮಾಜ ಸುಧಾರಕ ಹಾಗೂ ಅಹಿಂದ ರತ್ನ ಸನ್ಮಾನ್ಯ ಶ್ರೀ ಸತೀಶ ಜಾರಕಿಹೋಳಿಯವರು ಬುದ್ಧ ಬಸವ ಅಂಬೇಡ್ಕರ ರವರ ತತ್ವ-ಸಿದ್ದಾಂತ, ವಿಚಾರ ಮತ್ತು ಆದರ್ಶಗಳ ಅಡಿಯಲ್ಲಿ “ಮಾನವ ಬಂಧುತ್ವ ವೇದಿಕೆಯನ್ನು” ಹುಟ್ಟು ಹಾಕಿ, ಸಂಸ್ಥಾಪ ಅಧ್ಯಕ್ಷರಗಾಗಿದ್ದರು.
“ಮಾನವ ಬಂಧುತ್ವದ ನಡೆ-ಸಮುದಾಯಗಳ ಕಡೆ” ಎಂಬ ವಿನೂತನವಾದ ಕಾರ್ಯಕ್ರಮವನ್ನು ಶಿಗ್ಗಾಂವ ತಾಲೂಕ ಸಮಿತಿಯಿಂದ ಹಮ್ಮಿಕೊಂಡಿದ್ದು,.
ಇವತ್ತಿನಿಂದ ಈ ಕಾರ್ಯಕ್ರಮವನ್ನು ಪ್ರತಿ ಹಳ್ಳಿಗಳಲ್ಲಿ ಹಮ್ಮಿಕೊಂಡು, ಬುದ್ಧ ಬಸವ ಅಂಬೇಡ್ಕರ ರವರ ತತ್ವ-ಸಿದ್ದಾಂತ, ವಿಚಾರಗಳನ್ನು ಮತ್ತು ಆದರ್ಶಗಳನ್ನು ಪ್ರತಿ ಸಮುದಾಯದ ಜನರಿಗೆ, ಜನ ಸಾಮಾನ್ಯರಿಗೆ ತಿಳಿಸುವ ಕಾರ್ಯಕ್ರಮ ಇದಾಗಿರುತ್ತದೆ.
‘ಬುಧ್ದನ ಶಾಂತಿ ಮತ್ತು ಪ್ರೀತಿ’ ‘ಬಸವಣ್ಣನ ಕಾಯಕ ತತ್ವ’ ಮತ್ತು ‘ಅಂಬೇಡ್ಕರ ರವರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು’ ಪ್ರತಿ ಮನೆಗೆ, ಸಮುದಾಯಗಳಿಗೆ, ಸಮಾಜಕ್ಕೆ ತಿಳಿಸುವ ಮೂಲಕ ವೈಚಾರಿಕತೆ ಮತ್ತು ವೈಜ್ಞಾನಿಕ ಚಿಂತನೆಗಳತ್ತ ಜನರನ್ನು ಕರೆಯುವ ಕಾರ್ಯಕ್ರಮ ಇದಾಗಿದೆ.
ಇವತ್ತಿಗೂ ಹಳ್ಳಿಗಳ್ಳಿ ಜಾತಿ-ಧರ್ಮದ ಆಧಾರದಲ್ಲಿ ತಾರತಮ್ಯ, ಅಸ್ಪೃಶ್ಯತೆ, ಮೇಲು-ಕಿಳು, ಕೋಮುದ್ವೇಷ ಮತ್ತು ಮೂಢನಂಬಿಕೆ ಬಹಳಷ್ಟು ಇದೆ. ಸಂವಿಧಾನ ಖಾತ್ರಿಪಡಿಸುವ ಹಕ್ಕು ಹಾಗೂ ಕರ್ತವ್ಯಗಳ ಕುರಿತು ಜಾಗೃತಿ ಮೂಡಿಸಿ, ಶಾಂತಿ-ಸೌಹಾರ್ಧತೆ ಮತ್ತು ಸಮಾನತೆಯಿಂದ ಕೂಡಿರುವ ಅತ್ಯತ್ತಮ ಸಮಾಜವನ್ನು ಕಟ್ಟುವದಕ್ಕಾಗಿ ಈ ಕಾರ್ಯಕ್ರಮವನ್ನು ಪ್ರತಿ ಹಳ್ಳಿಗಳಲ್ಲಿ ಹಮ್ಮಿಕೊಳ್ಳಲಿದ್ದೇವೆ ಎಂದು ನ್ಯಾಯವಾದಿ.ಎಚ್.ಐ. ಬೆಳಗಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ವರದಿ: ರಮೇಶ್ ತಾಳಿಕೋಟಿ




