ಸವದತ್ತಿ : ಬೆಳಗಾವಿ ತಲೆ ಮೇಲೆ ಕಲ್ಲುಎತ್ತಿಹಾಕಿ ವ್ಯಕ್ತಿಯೋರ್ವನ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ನಡೆದಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ APMC ಆವರಣದಲ್ಲಿ ಇರುವ ರೇಣುಕಾದೇವಿ ಟ್ರಾನ್ಸಪೋರ್ಟ್ ಕಂಪನಿಯ ವೇ ಬ್ರಿಡ್ಜ್ ಹತ್ತಿರ ವ್ಯಕ್ತಿಯ ಕೊಲೆ ಮಾಡಲಾಗಿದೆ. ಹತ್ಯೆಯಾಗಿರುವ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಸ್ಥಳಕ್ಕೆ ಸವದತ್ತಿ ಪೊಲೀಸ್ ಠಾಣೆಯ ಸಿಪಿಐ ಧರ್ಮಾಕರ್ ಧರ್ಮಟ್ಟಿ, ಪಿಎಸ್ಐ ಬನ್ನೂರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವರದಿ : ರಾಜು ಮುಂಡೆ




