ಗೋವಾ : ಮದುವೆಯಾಗುವ ಆಸೆಯಿಂದ ಬೆಂಗಳೂರಿನಿಂದ ಗೋವಾಕ್ಕೆ ಬಂದಿದ್ದ ಪ್ರೇಮಿಗಳಿಬ್ಬರ ನಡುವೆ ಸಣ್ಣ ಮನಸ್ತಾಪ ಉಂಟಾಗಿದ್ದ ಯುವಕ ತನ್ನ ಗೆಳತಿಯನ್ನು ಕೊಂದು ಕಾಡಿನಲ್ಲಿ ಬಿಸಾಕಿ ಹೋಗಿರುವ ಘಟನೆ ದಕ್ಷಿಣ ಗೋವಾ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತ ದುರ್ದೈವಿಯನ್ನು ಉತ್ತರ ಬೆಂಗಳೂರಿನ 22 ವರ್ಷದ ರೋಶ್ನಿ ಮೋಸೆಸ್ ಎಂ, ಎಂದು ಗುರುತಿಸಲಾಗಿದೆ. ರೋಶ್ನಿ ಕಳೆದ ಕೆಲ ಸಮಯದಿಂದ ಅದೇ ಪ್ರದೇಶದ ಸಂಜಯ್ ಕೆವಿನ್ ಎಂ ಎಂಬಾತನನ್ನು ಪ್ರೀತಿಸುತ್ತಿದ್ದಳು. ಅಲ್ಲದೇ ಇಬ್ಬರು ಕೂಡ ಮದುವೆಯಾಗಲೇಬೇಕು ಎಂದು ನಿರ್ಧರಿಸಿದ್ದರು.
ಆದರೆ ಪ್ರೀತಿಗೆ ಮನೆಯಲ್ಲಿ ಒಪ್ಪುವುದಿಲ್ಲ ಎಂದು ತಿಳಿದು ಆರೋಪಿ ಸಂಜಯ್ ಜೊತೆಗೂಡಿ ಗೋವಾಕ್ಕೆ ಓಡಿಹೋಗಿದ್ದಾರೆ. ಇದೀಗ ಕೆಲ ದಿನಗಳ ಬಳಿಕ ಇಬ್ಬರ ನಡುವೆ ಯಾವುದೇ ವಿಷಯಕ್ಕೆ ಮನಸ್ತಾಪ ಉಂಟಾಗಿದೆ. ಇದರಿಂದ ಇಬ್ಬರ ನಡುವೆ ಗಲಾಟೆಯಾಗಿದೆ.
ಗಲಾಟೆ ಅತಿರೇಕಕ್ಕೆ ತೆರಳಿದಾಗ ಸಿಟ್ಟಾದ ಸಂಜಯ್ ತನ್ನ ಪ್ರೇಯಸಿಯಾದ ರೋಶ್ನಿಯನ್ನು ಕತ್ತು ಸೀಳಿ ಕೊಲೆ ಮಾಡಿ ಪ್ರತಾಪ್ ನಗರದ ಅರಣ್ಯ ಪ್ರದೇಶದಲ್ಲಿ ಹಾಕಿದ್ದ.. ಇದೀಗ ಯುವತಿಯ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದ್ದು, ದಕ್ಷಿಣ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಕೊಲೆ ಪ್ರಕರಣದ ಜಾಡು ಹಿಡಿದು ಹೊರಟ ಪೊಲೀಸರಿಗೆ ಮೃತದೇಹ ಪತ್ತೆಯಾದ 24 ಗಂಟೆಯ ಒಳಗೆ ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯ ಬಳಿಕ ಆರೋಪಿ ತನ್ನ ತಪ್ಪೊಪ್ಪಿಕೊಂಡಿದ್ದಾನೆ.




