Ad imageAd image

ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಸಡಗರದಿಂದ ಸಲ್ಲಿಸಿದ ಮುಸ್ಲಿಂ ಬಾಂಧವರು

Bharath Vaibhav
ರಂಜಾನ್ ಹಬ್ಬದ ಸಾಮೂಹಿಕ ಪ್ರಾರ್ಥನೆಯನ್ನು ಸಡಗರದಿಂದ ಸಲ್ಲಿಸಿದ ಮುಸ್ಲಿಂ ಬಾಂಧವರು
WhatsApp Group Join Now
Telegram Group Join Now

ಚಾಮರಾಜನಗರ: ಒಂದು ತಿಂಗಳ ಸತತ ಉಪವಾಸಗಳನ್ನು ಇದ್ದು ಇಂದು ರಂಜಾನ್ ಹಬ್ಬ ಆಚರಿಸುವ ಮೂಲಕ ಉಪವಾಸಗಳಿಗೆ ತೆರೆ ಹಾಕುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಲಾಯಿತು..

ಈ ಸಂಧರ್ಭ ಗುರುಗಳು ಉಪವಾಸ ತಿಂಗಳ ಮಹತ್ವ ತಿಳಿಸುತ ಉಪವಾಸ ಆಚರಿಸುವ ಮುಖ್ಯಉದ್ದೇಶ ನಮ್ಮ ಮನಸ್ಥಿತಿ ಬದಲಾವಣೆ ಮಾಡುವುದು ಮತ್ತು ನಮ್ಮಲ್ಲಿ ಪರಿವರ್ತನೆ ತರುವುದು.

ನಮ್ಮ ನಡೆಯನ್ನು ಉತ್ತಮ ಮಟ್ಟದಲ್ಲಿ ಉನ್ನತಿಕರಿಸಿ ಎಲ್ಲರೊಂದಿಗೆ ಸಹನತೆ,
ಪ್ರೀತಿ, ವಿಶ್ವಾಸದಿಂದ ಜೀವನ ಸಾಗಿಸುವ ಮೂಲಕ
ಸಮಾಜಕ್ಕೆ ಒಳ್ಳೆಯ ಸಂದೇಶ ತಲುಪಿಸುವ ಕೆಲಸ ಮಾಡಬೇಕು.

ಮುಸ್ಲಿಂ ಬಾಂಧವರು ಪರಸ್ಪರವಾಗಿ ಪ್ರೀತಿ ವಿಶ್ವಾಸಕ್ಕೆ ಆಧ್ಯತೆ ನೀಡುವುದರ ಮೂಲಕ ಇತರರಿಗೆ ಮಾದರಿ ಯಾಗ ಬೇಕು ಎಂದು ಉಪದೇಶ ನೀಡಿದರು.

ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯ ಶಾಸಕ ಸಿ ಪುಟ್ಟರಂಗಶೆಟ್ಟಿ ಅವರು ಆಗಮಿಸಿ ಮುಸ್ಲಿಂ ಬಾಂಧವರನ್ನು ರಂಜಾನ್ ಹಬ್ಬದ ಶುಭಾಶಯಗಳು ಕೊರಿದರು ಅವರನ್ನು ಈದ್ಗಾ ನಿರ್ವಹಣ ಸಮಿತಿಯ ವತಿಯಿಂದ ಗೌರವಿಸಲಾಯಿತು ಮತ್ತು ಈದ್ಗಾ ಅಭಿವೃದ್ಧಿ ಸಮಿತಿ ಅವರು ಇನ್ನು ಹೆಚ್ಚಿನ ಅನುದಾನ ಮಂಜೂರು ಮಾಡಿಕೊಡಲು ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಇನ್ನು ಹೆಚ್ಚಿನ ಅನುದಾನ ಮಂಜೂರು ಮಾಡಿಕೊಡಲು ಆಶ್ವಾಸನೆ ನೀಡಿದ ಶಾಸಕರು…

ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಅಧ್ಯಕ್ಷ ಅಕ್ರಮ ಪಾಶ. ಕಾರ್ಯದರ್ಶಿ ಆಸೀಫ್ ಉಲ್ಲಾ. ನಯಾಜ್ ಅಹ್ಮದ್. ಮಹಮ್ಮದ್ ಜಾವೀದ್. ಸೇರಿದಂತೆ ಇನ್ನೀತರರು ಸದಸ್ಯರುಗಳು ಭಾಗಿಯಾಗಿದ್ದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
Share This Article
error: Content is protected !!