Ad imageAd image

ನವಾಬರು ಭೂಮಿಯನ್ನು ಮೆಕ್ಕಾದಿಂದ ತಂದು ಕೊಟ್ರಾ : ಮುತಾಲಿಕ್

Bharath Vaibhav
ನವಾಬರು ಭೂಮಿಯನ್ನು ಮೆಕ್ಕಾದಿಂದ ತಂದು ಕೊಟ್ರಾ : ಮುತಾಲಿಕ್
WhatsApp Group Join Now
Telegram Group Join Now

ವಿಜಯನಗರ : ನವಾಬರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಅಕ್ರಮಣ ಮಾಡಿಕೊಂಡಿದ್ದ ನಮ್ಮದೇ ಭೂಮಿಯನ್ನು ಮಠಕ್ಕೆ ನೀಡಿದ್ದಾರೆ ಎಂದು ಸಿಎಂ ಇಬ್ರಾಹಿಂಗೆ ಶ್ರೀರಾಮ ಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಸ್ಲಾಂಗೆ ಇರುವುದು 1,500 ವರ್ಷಗಳ ಇತಿಹಾಸ ಮಾತ್ರ.ಅದಕ್ಕೂ ಮುಂಚೆ ಪ್ರಪಂಚದಲ್ಲೇ ಇಸ್ಲಾಂ ಇರಲಿಲ್ಲ. ಆಕ್ರಮಣ, ಯುದ್ಧದಿಂದ ಇಸ್ಲಾಂ 57 ರಾಷ್ಟ್ರಗಳಿಗೆ ವಿಸ್ತರಿಸಿದೆ.

ಅದೇ ರೀತಿ ನವಾಬರು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ನೀಡಿರುವ ಭೂಮಿಯನ್ನು ಮಕ್ಕಾ, ಮದೀನಾ, ಇರಾಕ್, ಇರಾನ್‌ನಿಂದ ತಂದು ಕೊಟ್ಟಿದ್ದಲ್ಲ ಎಂದು ಹೇಳಿದರು.

ವಕ್ಫ್‌ ಮಂಡಳಿಯು ದೇಶದ ಬಡ ಮುಸ್ಲಿಮರಿಗೆ ಭೂಮಿ, ಶಿಕ್ಷಣ, ಉದ್ಯೋಗ ನೀಡುವ ಆಶಯ ಹೊಂದಿಲ್ಲ. ದೇಶದ 9.40 ಲಕ್ಷ ಎಕರೆ ಭೂಮಿಯನ್ನು ಕಬಳಿಸಿ, ಜನಸಂಖ್ಯೆ ಹೆಚ್ಚಳದ ಮೂಲಕ ಭಾರತದಲ್ಲೂ ಇಸ್ಲಾಂ ಪ್ರತಿಷ್ಠಾಪನೆ ಮಾಡುವುದು ಅದರ ಉದ್ದೇಶವಾಗಿದೆ ಎಂದು ಕಿಡಿಕಾರಿದರು.

ವಕ್ಫ್‌ ಮಂಡಳಿಗೆ ಸುಪ್ರೀಂ ಕೋರ್ಟ್‌ಗೂ ಮೀರಿದ ಪರಮಾಧಿಕಾರ ನೀಡುವ ಮೂಲಕ ಕಾಂಗ್ರೆಸ್ ಪಕ್ಷ ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡಲು ಹೊರಟಿದೆ.

ವಕ್ಸ್ ಮಂಡಳಿಗೆ ಸಂವಿಧಾನ ಮೀರಿದ ಹಕ್ಕುಗಳನ್ನು ನೀಡಿದ್ದರಿಂದ ದೇಶಕ್ಕೆ ಗಂಡಾಂತರ ಬಂದಿದೆ. ಕಾಂಗ್ರೆಸ್ ಪಕ್ಷ ಮುಸ್ಲಿಮರ ತುಷ್ಟಿಕರಣದ ಮೂಲಕ ದೇಶದ್ರೋಹಿ ಕೆಲಸ ಮಾಡಿದೆ ಎಂದು ಗು ಡುಗಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!