Ad imageAd image

ದಿ. ನೆಕ್ಕಲಕೂಡಿ ಮಾಣಿಕ್ಯಮ್ಮ ದಿ. ನೆಕ್ಕಲಕೂಡಿ ಶೇಷಗಿರಿ ರಾವ್ ಇವರುಗಳ ಸವಿನೆನಪಿನ ಮಹಾಪ್ರಸಾದ.

Bharath Vaibhav
ದಿ. ನೆಕ್ಕಲಕೂಡಿ ಮಾಣಿಕ್ಯಮ್ಮ ದಿ. ನೆಕ್ಕಲಕೂಡಿ ಶೇಷಗಿರಿ ರಾವ್ ಇವರುಗಳ ಸವಿನೆನಪಿನ ಮಹಾಪ್ರಸಾದ.
WhatsApp Group Join Now
Telegram Group Join Now

ಸಿಂಧನೂರು: ತಾಲೂಕಿನ ಸತ್ಯವತಿ ಕ್ಯಾಂಪಿನ ನೆಕ್ಕಲಕೂಡಿ ಕುಟುಂಬದ ದಿ. ನೆಕ್ಕಲಕೂಡಿ ಮಾಣಿಕ್ಯಮ್ಮ ದಿ. ನೆಕ್ಕಲಕೂಡಿ ಶೇಷಗಿರಿ ರಾವ್ ಇವರುಗಳ ಸವಿನೆನಪಿನ ಮಹಾಪ್ರಸಾದ.

ಸಿಂಧನೂರು ತಾಲೂಕಿನ ಸತ್ಯವತಿ ಕ್ಯಾಂಪಿನ ನೆಕ್ಕಲಕೂಡಿ ಕುಟುಂಬದ ದಿ. ನೆಕ್ಕಲಕೂಡಿ ಮಾಣಿಕ್ಯಮ್ಮ ದಿ. ನೆಕ್ಕಲಕೂಡಿ ಶೇಷಗಿರಿ ರಾವ್ ಇವರುಗಳ ಸವಿನೆನಪಿಗಾಗಿ ಅಮಾವಾಸ್ಯೆಯ ನಿ ಥ್ಮಿತ್ಯ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಮಸ್ಯೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ವಿವಿಧ ಬಗೆಯ ಮಹಾಪ್ರಸಾದ ಸೇವೆ ಅರ್ಥಪೂರ್ಣವಾಗಿ ನೆರವೇರಿತು.

ಈ ಕಾರ್ಯಕ್ರಮದಲ್ಲಿ ನಕ್ಕಲ ಕೂಡಿ ಕುಟುಂಬದ ಹಿರಿಯರಾದ ಭುಜಂಗ ರಾವ್ ಮಂಗಾ ದೇವಿ ಈ ದಂಪತಿಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಿ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಭಾವಚಿತ್ರವನ್ನು ನೆನಪಿನ ಕಾಣಿಕೆಯಾಗಿ ವಿತರಿಸಲಾಯಿತು. ಈ ಸಮಯದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಮಾತನಾಡಿ ಸಿಂಧನೂರು ತಾಲೂಕಿನ ಸತ್ಯವತಿ ಕ್ಯಾಂಪಿನ ನೆಕ್ಕಲಕೂಡಿ ಕುಟುಂಬವು ತಮ್ಮ ಮನೆಯ ಯಾವುದೇ ಕಾರ್ಯಕ್ರಮಗಳನ್ನು ಸಹ ಕಾರುಣ್ಯ ಆಶ್ರಮವು ಕೂಡ ನಮ್ಮ ಸ್ವಂತ ಕುಟುಂಬ ಎನ್ನುವ ಭಾವನೆಯನ್ನು ಇಟ್ಟುಕೊಂಡು ಕುಟುಂಬದ ಎಲ್ಲಾ ಆಶ್ರಯದಾತರುಗಳ ಮಧ್ಯೆ ನೆರವೇರಿಸುತ್ತಿರುವುದು ಅರ್ಥಪೂರ್ಣವಾಗಿದೆ.

ಇಂತಹ ಕರುಣೆಯ ಮನಸ್ಸುಗಳು ಕಾರುಣ್ಯ ಕುಟುಂಬದಲ್ಲಿರುವ ಎಲ್ಲಾ ಹಿರಿಯ ಜೀವಿಗಳನ್ನು ತಂದೆ ತಾಯಿಗಳ ಸಮಾನರು ಮತ್ತು ವಯಸ್ಕರ ಬುದ್ಧಿಮಾಂದ್ಯರು ಸಹೋದರ ಸಹೋದರಿಯರು ಎನ್ನುವ ಭಾವನೆಯನ್ನು ದಾನಿಗಳು ಹೃದಯದಲ್ಲಿಟ್ಟುಕೊಂಡಿರುವುದು ನಮ್ಮ ಕರುನಾಡಿನ ಕರುಣಾಮಯಿ ಸಂಸ್ಕೃತಿಯನ್ನು ಮಾನವ ಧರ್ಮಕ್ಕೆ ತೋರಿಸಿಕೊಟ್ಟಂತಾಗಿದೆ.

ಕಾರುಣ್ಯ ಆಶ್ರಮಕ್ಕೆ ಸಹಾಯ ಸಹಕಾರ ಮಾಡುತ್ತಿರುವ ನಿಸ್ವಾರ್ಥ ಮನಸ್ಸುಗಳೇ ಕಾರುಣ್ಯ ಕುಟುಂಬದ ಯಜಮಾನರುಗಳು ನಮ್ಮ ಸಿಂಧನೂರು ತಾಲೂಕಿನ ನೆಕ್ಕಲ ಕೂಡಿ ಕುಟುಂಬ ಆಶ್ರಮದಲ್ಲಿನ ಎಲ್ಲಾ ಆಶ್ರಯದಾತರುಗಳನ್ನು ” ನೀವೆಲ್ಲರೂ ನಮ್ಮವರೇ” ಎನ್ನುವ ಪ್ರೀತಿ ಕೊಟ್ಟಿರುವ ಈ ಕುಟುಂಬಕ್ಕೆ ಸಕಲ ದೇವಾನುದೇವತೆಗಳ ಆಶೀರ್ವಾದವಿರಲಿ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದೇವೆ. ಎಂದು ಮಾತನಾಡಿ ನೆಕ್ಕಲಕೂಡಿ ಕುಟುಂಬದ ಎಲ್ಲಾ ಗುರುಹಿರಿಯರಿಗೆ ಅಭಿನಂದನೆಗಳನ್ನು ಅರ್ಪಿಸಿದರು.

ಈ ಕಾರ್ಯಕ್ರಮದಲ್ಲಿ ಹೇಮಾವತಿ ಗಂ.ರಾಘವೇಂದ್ರ ರಾವ್ ನೆಕ್ಕಲಕೂಡಿ. ಪುಷ್ಪಾವತಿ ಗಂ. ದಿ. ರಂಗಾರಾವ್ ಅತ್ತಂಟಿ. ಮಂಗಾ ದೇವಿ ನೆಕ್ಕಲಕೂಡಿ. ಭುಜಂಗ ರಾವ್ ನೆಕ್ಕಲಕೂಡಿ. ನಾಗ ಸತ್ಯವತಿ ನೆಕ್ಕಲಕೂಡಿ. ಶೇಷಗಿರಿ ರಾವ್ ನೆಕ್ಕಲಕೂಡಿ. ಹಲ್ಲಾ ಸಾಬ್ ಸತ್ಯವತಿ ಕ್ಯಾಂಪ್. ಹಾಗೂ ಶ್ರೀಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಶರಣಮ್ಮ.ಸಿದ್ದಯ್ಯ ಸ್ವಾಮಿ. ಮರಿಯಪ್ಪ ಶರಣು ಸ್ವಾಮಿ ಬಸವ ಸ್ವಾಮಿ ಮತ್ತು ನೆಕ್ಕಲ ಕೂಡಿ ಕುಟುಂಬದ ಬಂಧು-ಬಳಗ ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!