Ad imageAd image

ಸಹಕಾರಿ ಸಂಘದ ನೂತನ ನಿರ್ದೇಶಕರಿಗೆ ಸತ್ಕಾರ

Bharath Vaibhav
ಸಹಕಾರಿ ಸಂಘದ ನೂತನ ನಿರ್ದೇಶಕರಿಗೆ ಸತ್ಕಾರ
WhatsApp Group Join Now
Telegram Group Join Now

ಹುಕ್ಕೇರಿ: ಪಟ್ಟಣದ ಗುರುಶಾಂತೇಶ್ವರ ಹಿರೇಮಠದಲ್ಲಿ ಶ್ರೀಮಠದ ಪೀಠಾಧಿಪತಿ ಚಂದ್ರಶೇಖರ್ ಶಿವಾಚಾರ್ಯ ವತಿಯಿಂದ ಸಹಕಾರಿ ಸಂಘದ ನೂತನ ನಿರ್ದೇಶಕರಿಗೆ ಸತ್ಕಾರ ಸಮಾರಂಭವನ್ನು ಮಾಡಲಾಯಿತು ಶ್ರೀಗಳಿಂದ ಆಶೀರ್ವಾದ ಪಡೆದರು.

ಹುಕ್ಕೇರಿ ಪಟ್ಟಣದ ಗ್ರಾಮೀಣ ವಿದ್ಯುತ್ ಸಂಘದ ಚುನಾವಣೆಯಲ್ಲಿ ಸ್ವಾಭಿಮಾನ ಪೆನೆಲ್ ಮಾಜಿ ಸಂಸದರಾದ ರಮೇಶ್ ಕತ್ತಿ ಹಾಗೂ ಮಾಜಿ ಸಚಿವರಾದ ಎ ಬಿ ಪಾಟೀಲ ಇವರ ನೇತೃತ್ವದಲ್ಲಿ ಪೆನೇಲ್ ಒಟ್ಟು 15ದು ಸ್ಥಾನಗಳನ್ನು ಜಯಗಳಿಸಿದ್ದರು.

ಶ್ರೀಮಠದ ಪೀಠಾಧಿಪತಿಗಳಾದ ಚಂದ್ರಶೇಖರ ಶಿವಾಚಾರ್ಯ ಅವರು ಮಾತನಾಡಿದರು ಚುನಾವಣೆಯಲ್ಲಿ ನೂತನವಾಗಿ ಜಯಶಾಲಿಯಾದ ನಿರ್ದೇಶಕರಿಗೆ ಒಲಿದ ಅವಕಾಶವನ್ನು ತಾವು ಜನರ ಸೇವೆಗಾಗಿ ನಿಲ್ಲಬೇಕು ಎಂದು ಹೇಳಿದರು.

ಹುಕ್ಕೇರಿ ತಾಲೂಕದ ಜನರು ಸ್ವಾಭಿಮಾನ ಪೆನೆಲಿಗೆ ಸಹಕರಿಸಿದ್ದು ಅವರಿಗೆ ನಾನು ಚಿರಋಣಿಯಾಗಿ ಇರುತ್ತೇನೆ ನಾವು ಅವರ ಸೇವೆಗೆ ಕತ್ತಿ ಕುಟುಂಬ ಹಾಗೂ ನಾವು ಇರುತ್ತೇನೆ ಎಂದು ವಿನಯ್ ಪಾಟೀಲ್ ಅವರು ಹೇಳಿದರು.

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನೂತನವಾಗಿ ಆಯ್ಕೆಯಾದ ನಿರ್ದೇಶಕರು ಪೃಥ್ವಿ ಕತ್ತಿ, ವಿನಯ ಪಾಟೀಲ, ಸತ್ಯಪ್ಪ ನಾಯಕ, ಮಹಾವೀರ ನೀಲಜಗಿ, ಮೆಹಬೂಬಿ ನಾಯಕವಾಡಿ, ಶ್ರೀಮಂತ ಸನ್ನಾಯಿಕ, ಬಸವಣ್ಣಿ ಲಂಕಪ್ಪಗೋಳ, ಶಿವಾನಂದ ಮುಡಶಿ, ಕೆಂಪಣ್ಣ ವಾಸೇದಾರ, ಶಿವನಗೌಡ ಮದುವಾಲ, ಲಕ್ಷ್ಮಣ ಮನ್ನೋಳಿ, ಮಹದೇವ ಷಿರಸಾಗರ, ಮಂಗಲಾ ಮೂಡಲಗಿ, ಕಲಗೌಡ ಪಾಟೀಲ, ಗಜಾನನ ಕವಳಿ, ಆಯ್ಕೆ ಆದ ನೂತನ ಅಧ್ಯಕ್ಷರು ಹಾಗೂ ಗ್ರಾಮದ ಗನ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

 ವರದಿ: ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!