Ad imageAd image
- Advertisement -  - Advertisement -  - Advertisement - 

ಶಿವಮೊಗ್ಗದಿಂದ ಮತ್ತೊಂದು ಮಹಾನಗರಕ್ಕೆ ಹಾರಲಿದೆ ಹೊಸ ವಿಮಾನ, ಯಾವ ಊರಿಗೆ? ಯಾವಾಗಿಂದ ಶುರು?

Bharath Vaibhav
ಶಿವಮೊಗ್ಗದಿಂದ ಮತ್ತೊಂದು ಮಹಾನಗರಕ್ಕೆ ಹಾರಲಿದೆ ಹೊಸ ವಿಮಾನ, ಯಾವ ಊರಿಗೆ? ಯಾವಾಗಿಂದ ಶುರು?
WhatsApp Group Join Now
Telegram Group Join Now

ಶಿವಮೊಗ್ಗದಿಂದ ಮತ್ತೊಂದು ಮಹಾನಗರಕ್ಕೆ ಹಾರಲಿದೆ ಹೊಸ ವಿಮಾನ, ಯಾವ ಊರಿಗೆ? ಯಾವಾಗಿಂದ ಶುರು?

 

AIRPORT NEWS :  ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್‌ಗೆ ಸ್ಪೈಸ್ ಜೆಟ್ ವಿಮಾನಯಾನ (flight) ಶುರುವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

 

*ಜಾಹೀರಾತು*

ಶಿವಮೊಗ್ಗ : ಯಾವುದೇ ರೀತಿಯಾದ ಜಾಹೀರಾತಿಗೆ ಸಂಪರ್ಕಿಸಿ.

+919019229369

+917259538444

 

ಶಿವಮೊಗ್ಗ : ರೈಲ್ವೆ ನಿಲ್ದಾಣದಲ್ಲಿ ಶನಿವಾರ ಶಿವಮೊಗ್ಗ-ಚೆನ್ನೈ ನಡುವೆ ಸ್ಪೆಷಲ್ ಎಕ್ಸ್‌ಪ್ರೆಸ್‌ ರೈಲಿಗೆ ಹಸಿರು ನಿಶಾನೆ ತೋರಿಸಿ ಮಾತನಾಡಿದ ಅವರು, ಆಗಸ್ಟ್ 15ಕ್ಕೆ ಸ್ಪೈಸ್‌ ಜೆಟ್‌ ಸಂಸ್ಥೆ ಚೆನ್ನೈ ಮತ್ತು ಹೈದರಾಬಾದ್‌ಗೆ ವಿಮಾನಯಾನ ಸೇವೆ ಆರಂಭಿಸಲಿದೆ ಎಂದರು.

 

 

ವಿಸಿಬಲಿಟಿ ಸಮಸ್ಯೆಯಿಂದ ವಿಮಾನ ಲ್ಯಾಂಡಿಂಗ್ ಸಾಧ್ಯವಾಗುತ್ತಿಲ್ಲ. ಈಗಾಗಲೇ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ಇಳಿಯಲು ದೀಪ ಅಳವಡಿಸಲಾಗಿದೆ. ಡಿಜಿಸಿಐ ಅನುಮತಿ ಸಿಕ್ಕರೆ ಭವಿಷ್ಯದಲ್ಲಿ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ಆಗಲಿದೆ ಎಂದು ತಿಳಿಸಿದರು.

 

ಶಿವಮೊಗ್ಗದಿಂದ ಈಗಾಗಲೆ ಬೆಂಗಳೂರಿಗೆ ಇಂಡಿಗೋ ವಿಮಾನ ನಿತ್ಯ ಸಂಚರಿಸುತ್ತಿದೆ. ಸ್ಟಾರ್‌ ಏರ್‌ ವಿಮಾನ ಶಿವಮೊಗ್ಗದಿಂದ ಹೈದರಾಬಾದ್‌, ತಿರುಪತಿ, ಗೋವಾಗೆ ಸಂಚರಿಸುತ್ತಿದೆ.

 

ವರದಿ:ಮಂಜುನಾಥ ರಜಪೂತ

WhatsApp Group Join Now
Telegram Group Join Now
Share This Article
error: Content is protected !!