Ad imageAd image

ನೂತನ ಕೊರವಂಜೇಶ್ವರಿ ಮೂರ್ತಿ ಪ್ರತಿಷ್ಠಾಪನೆ

Bharath Vaibhav
ನೂತನ ಕೊರವಂಜೇಶ್ವರಿ ಮೂರ್ತಿ ಪ್ರತಿಷ್ಠಾಪನೆ
WhatsApp Group Join Now
Telegram Group Join Now

ಕಾಳಗಿ: ತಾಲೂಕಿನ ಸುಕ್ಷೇತ್ರ ಕೊರವಿ ಗ್ರಾಮದಲ್ಲಿ ಶುಕ್ರವಾರ, ನೂತನವಾಗಿ ನಿರ್ಮಿಸಿದ ಶ್ರೀ ಕೊರವಂಜೇಶ್ವರಿ ದೇವಿ ದೇವಸ್ಥಾನದಲ್ಲಿ ದೇವಿಯ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು, ದಿನಾಂಕ 25/05 / 2025 ರಿಂದ 30/05/2025 ರವರೆಗೆ ಪ್ರತಿದಿನ ದೇವಿಯ ವೈಭವದೊಂದಿಗೆ ರಾತ್ರಿ ಪುರಾಣ ಪ್ರವಚನ ಮತ್ತು ದಾಸೋಹ ಮಾಡಲಾಯಿತು.

ಶುಕ್ರವಾರದಂದು ಅವಾಹಿತ ಪೂಜೆ, ಕಲಾ ಹೋಮ, ಏಕಾಷತಿ ಕಳಸ ಅಭಿಷೇಕಾ,ಮದ್ಯಾಹ್ನ 12:26 ಕ್ಕೆ ಕೊರವಂಜೇಶ್ವರಿ ದೇವಿಯ ಮೂರ್ತಿ ಪ್ರತಿಷ್ಠಾಪನೆ, ನಂತರ ಶ್ರೀ ಷ, ಬ್ರ, ಡಾ ಚೆನ್ನವೀರ ಶಿವಾಚಾರ್ಯರ ಅಮೃತ ಹಸ್ತದಿಂದ ಕಳಸಾರೋಹಣ ಕಾರ್ಯಕ್ರಮ ಸಾಯಂಕಾಲ 6ಗಂಟೆಗೆ ಜರುಗಿತು, ಪೂಜ್ಯ ಮಾತೆ ಡಾ ದಾಕ್ಷಾಯಿಣಿ ಎಸ್ ಅಪ್ಪ, ಚೆರಪರ್ಸನ್ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ ಕಲಬುರಗಿಯವರು ಸುಕ್ಷೇತ್ರ ಕೊರವಿ ಗ್ರಾಮದಲ್ಲಿ ನೆಲಸಿರುವ ಶ್ರೀ ಕೊರವಂಜೇಶ್ವರಿ ದೇವಿಯ ಕುರಿತು ಮಾತನಾಡಿದ್ದರು.

ಈ ಸಂಧರ್ಭದಲ್ಲಿ :ಶ್ರೀ ಮು, ನಿ, ಪ್ರ,ಸ್ವ, ಗುರುಪಾದಲಿಂಗ ಶಿವಯೋಗಿಗಳು ಮುತ್ತ್ಯಾನ ಬಬಲಾದ,ಶ್ರೀ ಮು, ನಿ, ಪ್ರ,ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು ವಿರಕ್ತಮಠ ಭರತನೂರು,ಶ್ರೀ ಷ, ಬ್ರ, ಬಸವಲಿಂಗ ಶಿವಾಚಾರ್ಯರು ಶ್ರೀ ರೇವಣಸಿದ್ದೇಶ್ವರ ಹಿರೇಮಠ ಕೋಡ್ಲಿ, ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ 9ನೇ ಮಹದಾಸೋಹ ಪೀಠಧಿಪತಿಗಳು ಶರಣಬಸವೇಶ್ವರ ಸಂಸ್ಥಾನ ಕಲಬುರಗಿ, ಪೂಜ್ಯ ವಿಠ್ಠಲ್ ಮಹಾರಾಜರು ಶ್ರೀ ಕಾಳಿಕಾದೇವಿ ಆಶ್ರಮ ದೊಡ್ಡ ತಾಂಡಾ ಕೊರವಿ,ಕೊರವಂಜೇಶ್ವರಿ ದೇವಿಯ ಟ್ರಸ್ಟ್ ಅಧ್ಯಕ್ಷರಾದ ಸತೀಷಚಂದ್ರ ಎಸ್ ಪಾಟೀಲ್, ಹಾಗೂ ಉಪಾಧ್ಯಕ್ಷರಾದ ರವಿರಾಜ ಎಸ್ ಕೊರವಿ, ಮತ್ತು ಮುಖ್ಯ ಅತಿಥಿಯಾಗಿ ಅವಿನಾಶ ಜಾಧವ ಶಾಸಕರು ಚಿಂಚೋಳಿ, ಹಾಗೂ ಜಗದೇವ ಗುತ್ತೇದಾರ ವಿಧಾನಸಭಾ ಸದಸ್ಯರು ಹಾಗೂ ಅಧ್ಯಕ್ಷರು ಕೆಪಿಪಿ ಸಿ, ಮತ್ತು ಸುಭಾಷ್ ರಾಠೋಡ್ ಉಪಾಧ್ಯಕ್ಷರು ಕೆಪಿಸಿಸಿ ಬೆಂಗಳೂರು, ಚೆನ್ನಬಸಪ್ಪ ಪಾಟೀಲ್, ಚಂದ್ರಶೇಖರ ಹರಸೂರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಕೋಡ್ಲಿ,ರವಿರಾಜ ಕೊರವಿ ಕೂಲಿ ಸಮಾಜದ ಜಿಲ್ಲಾ ಅಧ್ಯಕ್ಷರು ಕಲಬುರಗಿ,ಸುನಂದಾ ರವಿರಾಜ ಕೊರವಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು, ರಾಜಣ್ಣ ಕೊರವಿ ಮಹಾನಗರ ಪಾಲಿಕೆ ಸದಸ್ಯರು ಹುಬ್ಬಳ್ಳಿ, ಗೌತಮ್ ವೈ ಪಾಟೀಲ್ ಡಿಸಿಸಿ ಬ್ಯಾಂಕ್ ನಿರ್ದೇಶಕರು ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಕಲಬುರಗಿ, ಅಂಬರ ಜಾಧವ ಗುತ್ತಿಗೆದಾರ ಕೊರವಿ ತಾಂಡಾ,ಸತೀಶ್ ಪಾಟೀಲ್, ಸಂಗಮೇಶ ಪಾಟೀಲ್, ಕವಿರಾಜ ಗ್ರಾಮ ಪಂಚಾಯತ್ ಸದಸ್ಯರು ಹಲಚೇರಾ,ಅಂಬಿಕಾ ಶಂಕರ್ ಗ್ರಾಮ ಪಂಚಾಯತ್ ಸದಸ್ಯರು ಹಲಚೇರಾ, ಉಮರಾವ್ ಮಾನಕರ್, ದೇವೀಂದ್ರಪ್ಪ ಪಾಟೀಲ್, ಸುಭಾಷ್ ಶೀಲವಂತ ನಿರೂಪಿಸಿದರು , ಹಣಮಂತ ಶೀಲವಂತ ವಂದಿಸಿದರು,

ಬಾಬುರಾವ ಗೋಡಿ ಗುತ್ತಿಗೆದಾರ, ಗ್ರಾಮದ ಹಿರಿಯರು ಮಹಿಳೆಯರು, ಯುವಕರು ಸಕಲ ಸದ್ಭಾಕ್ತರು ಹಾಲಕೂಡ ಶ್ರೀಗಳ ಆಶೀರ್ವಾದ ಪಡೆದುಕೊಂಡು ಧರ್ಮ ಸಭೆಯಲ್ಲಿ ಪಾಲ್ಗೊಂಡಿದ್ದರು.

ವರದಿ : ಹಣಮಂತ ಕುಡಹಳ್ಳಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!