ತುಮಕೂರು : ಜಿಲ್ಲೆ ಪಾವಗಡ ತಾಲೂಕಿನಲ್ಲಿರುವ ನಿರೀಕ್ಷಣ ಮಂದಿರದಲ್ಲಿ ಬಿಜೆಪಿ ನೂತನ ಅಧ್ಯಕ್ಷ ಆದ ಹಿನ್ನೆಲೆ ಮುಖಂಡರು ಸನ್ಮಾನ ಮಾಡಿರುತ್ತಾರೆ ಈ ವೇಳೆಯಲ್ಲಿ ಅಶೋಕ್ ಮಾತನಾಡಿ ಈ ತಾಲೂಕಿನ ಅಧ್ಯಕ್ಷರಾಗಿ ಆಯ್ಕೆ ಹಿನ್ನೆಲೆ ನಮ್ಮ ಪಕ್ಷ ನನ್ನ ಮೇಲೆ ಇಟ್ಟಿರುವ ಭರವಸೆ ನಂಬಿಕೆ ಉಳಿಸಿ ಪಕ್ಷವನ್ನು ಬಲಪಡಿಸುತ್ತೇನೆ ಮುಂಬರುವ ಯಾವುದೇ ಚುನಾವಣೆ ಎದುರಿಸುವಂತಹ ಶಕ್ತಿ ತುಂಬಿಸುತ್ತೇನೆ ಎಂದು ಹೇಳಿದರು.
ಪಾವಗಡ ತಾಲೂಕಿನಲ್ಲಿ ಬಿಜೆಪಿ ಮೂರನೇ ಹಂತದಲ್ಲಿದ್ದು ಇನ್ನು ಮುಂದೆ ಈ ತಾಲೂಕಿನ ಸ್ಥಾನವನ್ನು ಪಡೆಯುತ್ತೇವೆ ಅದರಂತೆ ಜೆಡಿಎಸ್ ಪಕ್ಷವು ಕೈಜೋಡಿಸಿ ಕೆಲಸ ಮಾಡುತ್ತೇವೆ. ಯಾವುದೇ ದ್ವೇಷ ಭಾವನೆ ಇಲ್ಲದೆ ಪಕ್ಷವನ್ನು ಬಲಪಡಿಸುತ್ತೇವೆ ಎಂದು ತಿಳಿಸಿದರು.
ಭಾಜಪ ಮುಖಂಡ ರವಿ ಮಾತನಾಡಿ ನೂತನ ಅಧ್ಯಕ್ಷರಿಗೆ ಶುಭಾಶಯ ಕೋರಿ ನಮ್ಮ ಪಕ್ಷದ ಕಾರ್ಯಕರ್ತರು ಇನ್ನು ಮುಂದೆ ನಿಷ್ಠೆಯಿಂದ ಶ್ರಮಿಸಬೇಕು ಯಾವುದೇ ಆಮಿಷಗೆ ಒಳಪಡಬಾರದು ಪಕ್ಷದ ಸಿದ್ಧಾಂತ ಪಾಲಿಸಬೇಕು ಆದರೆ ಮಾತ್ರ ಪಕ್ಷ ಬಲಪಡಿಸಲು ಸಾಧ್ಯ ನಮ್ಮ ಪಕ್ಷ ಎರಡು ವರ್ಗ ಎಂದು ಹಲವಾರು ಸಾಮಾನ್ಯರು ಮಾತನಾಡಿಕೊಳ್ಳುತ್ತಾರೆ ಅದು ಸುಳ್ಳು ಅಪಪ್ರಚಾರ. ನೂತನ ಅಧ್ಯಕ್ಷರನ್ನು ಪಾವಗಡ ಮಂಡಲ ಎಲ್ಲಾ ಪದಾಧಿಕಾರಿಗಳು ಒಪ್ಪಿಗೆಯಂತೆ ನಡೆದಿದೆ ಎಂದು ತಿಳಿಸಿದರು.
ಈ ವೇಳೆ ಜೆಡಿಎಸ್ ಪಕ್ಷದ ಯುವ ಘಟಕದ ತಾಲೂಕು ಅಧ್ಯಕ್ಷ ಮಂಜುನಾಥ್ ಚೌಧರಿ. ಜೆಡಿಎಸ್ ಪಕ್ಷದ ರೈತ ಘಟಕದ ತಾಲೂಕ ಅಧ್ಯಕ್ಷ ಗಂಗಾಧರ ನಾಯ್ಡು. ಶಾಂತಿ ಮೆಡಿಕಲ್ ದೇವರಾಜ್. ಗ್ಯಾಸ್ ಏಜೆನ್ಸಿ. ಸುರೇಂದ್ರ ಜೆಡಿಎಸ್ ಮುಖಂಡರಾದ ನರೇಶ್ ನರಸಿಂಮೂರ್ತಿ ( ಮೂರ್ತಿ) ಬಿಜೆಪಿ ಮುಖಂಡ ನಟರಾಜ ಉಮೇಶ್ ನಾಯ್ಡು ಅಂಜಪ್ಪ ಮಂಜುನಾಥ್ ಲೋಕೇಶ್ ದೇವರಾಜ್ ಇನ್ನೂ ಮುಂತಾದವರು ಉಪಸ್ಥಿದ್ದರು
ವರದಿ: ಶಿವಾನಂದ ಪಾವಗಡ




