ನವದೆಹಲಿ : RSS ತನ್ನ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ಹಿಂದಿದ್ದ ತನ್ನ ಕಚೇರಿ ಸ್ಥಳದಲ್ಲೇ ಹೊಸ ಕಚೇರಿ ಸಂಕೀರ್ಣವನ್ನು ನಿರ್ಮಿಸಿದೆ.
3.75 ಎಕರೆ ಜಾಗದಲ್ಲಿ ಹದಿಮೂರು ಅಂತಸ್ತಿನ ಮೂರು ಕಟ್ಟಡಗಳು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪ್ರಾಚೀನ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, ಇದು ಒಟ್ಟು 300 ಕೊಠಡಿಗಳನ್ನು ಒಳಗೊಂಡಿವೆ.
ಹಿಂದುತ್ವದ ಬಗ್ಗೆ ಒಲವು ಹೊಂದಿರುವ 75 ಸಾವಿರಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಲಾದ ₹150 ಕೋಟಿ ದೇಣಿಗೆ ಮೊತ್ತದಲ್ಲಿ, ಎಂಟು ವರ್ಷದ ಅವಧಿಯಲ್ಲಿ ಈ ಸಂಕೀರ್ಣವನ್ನು ನಿರ್ಮಿಸಲಾಗಿದೆ. ಆಕರ್ಷಕ ಕಟ್ಟಡ ಹಲವು ವಿಶೇಷತೆಗಳಿಂದ ಕೂಡಿದೆ.300 ಕೊಠಡಿ, 5 ಬೆಡ್ ನ ಹಾಸ್ಪಿಟಲ್ , ಲೈಬ್ರರಿ ಸೇರಿದಂತೆ ಮುಂತಾದ ಸೇವೆಗಳು ಈ ಕಟ್ಟಡದಲ್ಲಿದೆ.
ದೆಹಲಿ ಘಟಕವನ್ನು ಫೆ. 19ರಂದು ‘ಕಾರ್ಯಕರ್ತರ ಸಮ್ಮೇಳನ’ದಲ್ಲಿ ಸರಸಂಘ ಚಾಲಕ ಮೋಹನ್ ಭಾಗವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.