ಬೆಳಗಾವಿ: ಮೂರು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ನವವಿವಾಹಿತೆ ನೇಣಿಗೆ ಕೊರಳೊಡ್ಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ನಡೆದಿದೆ.
25 ವರ್ಷದ ರಮ್ಯಶ್ರೀ ಹಂಪನ್ನವರ್ ಆತ್ಮಹತ್ಯೆಗೆ ಶರಣಾದ ಮಹಿಳೆ. ರಮ್ಯಶ್ರೀಗೆ ಇದು ಎರಡನೇ ಮದುವೆಯಾಗಿತ್ತು ಎನ್ನಲಾಗಿದೆ.
ನಾಲ್ಕು ವರ್ಷಗಳ ಹಿಂದೆ ಮೊದಲ ಪತಿಯಿಂದ ಬೇರೆಯಾಗಿದ್ದ ರಮ್ಯಶ್ರೀ, ಮೂರು ತಿಂಗಳ ಹಿಂದಷ್ಟೆ ಮತ್ತೊಂದು ವಿವಾಹವಾಗಿದ್ದಳು. ಇದೀಗ ಏಕಾಏಕಿ ನೇಣಿಗೆ ಕೊರಳೊಡ್ಡಿದ್ದಾಳೆ.
ನೇಣುಬಿಗಿದ ಸ್ಥಿತಿಯಲ್ಲಿ ರಮ್ಯಶ್ರೀ ಶವ ಪತ್ತೆಯಾಗಿದೆ. ಅನಾರೋಗ್ಯ ಕಾರಣದಿಂದ ಸಾವಿಗೆ ಶರಣಾಗಿರುವ ಶಣ್ಕೆ ವ್ಯಕ್ತವಾಗಿದೆ. ಪತ್ನಿ ಆತ್ಮಹತ್ಯೆ ಬೆನ್ನಲ್ಲೇ ಪತಿ ಬಸವರಾಜ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ವಿಷ ಸೇವಿಸಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.