ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದ ಸ್ವಾಮಿ ನಿಧನರಾಗಿದ್ದಾರೆಂಬ ಸುದ್ದಿ ಹರಿದಾಡುತ್ತಿದೆ. ಅತ್ಯಾಚಾರ ಆರೋಪ ಎದುರಿಸುತ್ತಿರುವ ಆರೋಪಿ ನಿತ್ಯಾನಂದನಿಗಾಗಿ ಒಂದೆಡೆ ಪೊಲೀಸರು ಹುಟುಕಾಟ ನಡೆಸುತ್ತಿರುವಾಗಲೇ ಇಂಥದ್ದೊಂದು ಸುದ್ದಿ ವೈರಲ್ ಆಗಿದೆ.
ನಿತ್ಯಾನಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದು, ಅವರ ಸೋದರ ಅಳಿಯ ಸುಂದರೇಶ್ವರನ್ ಈ ಕುರಿತು ಹೇಳಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆದರೆ ಅಧಿಕೃತವಾಗಿ ಯಾವ ಮಾಹಿತಿಯೂ ಹೊರಬಿದ್ದಿಲ್ಲ ಎನ್ನಲಾಗಿದ್ದು ಇದನ್ನು ನಿತ್ಯಾನಂದನ ಆಪ್ತ ಮೂಲಗಳು ಅಲ್ಲಗಳೆದಿವೆ.
ನಿತ್ಯಾನಂದ ಹೇಗೆ ಮೃತಪಟ್ಟರು? ಅವರು ಮೃತಪಟ್ಟಿದ್ದಾರೆಯೇ? ಹೀಗೆ ಹಲವು ಪ್ರಶ್ನೆಗಳಿಗೆ ಇನ್ನೂ ಯಾವುದೇ ನಿಖರ ಮಾಹಿತಿ ಸಿಕ್ಕಿಲ್ಲ.