ಆಲಮಟ್ಟಿ :ಬಾಕಿಯಿರುವ ವಿತರಣಾ ಕಾಲುವೆಯ ಕಾಮಗಾರಿ ಮುಕ್ತಾಯಗೊಳಿಸಿ ಹಳ್ಳಿಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಲು ಆಗ್ರಹಿಸಿ ಆಹೋರಾತ್ರಿ ಧರಣಿ.”
ರಾಮಲಿಂಗೇಶ್ವರ ಮಂದಿರದಿಂದ ತಮಟೆ ಹಲಿಗೆಯನ್ನು ಬಾರಿಸುತ್ತಾ ಜನ ಹಾಗೂ ಜಾನುವಾರುಗಳಲ್ಲಿ ಒಂದಾದ ಆಕಳಿನ ಕೋಡಿಗೆ ಹಸಿರು ಶಾಲ್ ಕಟ್ಟಿ ಕೊಂಡು ಅಧಿಕಾರಿಗಳಿಗೆ ಧಿಕ್ಕಾರ ಕೂಗುತ್ತಾ ಕೆ.ಬಿ.ಜೆ.ಎನ್.ಎಲ್ ಮುಖ್ಯ ಅಭಿಯಂತರರ ಕಛೇರಿ ಬಂದ ರೈತರು.
ಆಲಮಟ್ಟಿ ಲಾಲ್‌ಬಹದ್ದೂರ್ ಶಾಸ್ತ್ರಿ ವ್ಯಾಪ್ತಿಗೆ ಬರುವ ಸಂಕನಾಳ ಶಾಖಾ ಕಾಲುವೆಯಿಂದ ನಿರ್ಮಿಸಿದ ವಿತರಣಾ ಕಾಲುವೆ ಸಂಪೂರ್ಣ ಗೊಳಿಸಬೇಕ್ ಈ ಕೂಡಲೇ ಕೆಲಸ ಕಾಮಗಾರಿಯನ್ನು ಪ್ರಾರಂಭಿಸಿಬೇಕು.
ಹೂವಿನ ಹಿಪ್ಪರಗಿ ವ್ಯಾಪ್ತಿಗೆ ಬರುವ ಕಾನ್ನಾಳ, ಕಣಕಾಲ, ಬ್ಯಾಕೋಡ, ನರಸಲಗಿ, ಸೇರಿದಂತೆ ಇನ್ನು ಕೆಲವೊಂದು ಹಳ್ಳಿಗಳಿಗೆ ವಿತರಣಾ ಕಾಲುವೆ ಮುಖಾಂತರ ನೀರು ಹರಿಸಿ ಬೇಸಿಗೆ ಸಂಧರ್ಬದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಅನುಕೂಲತೆ ಕಲ್ಪಿಸಲು ಶೀಘ್ರದಲ್ಲಿ ವಿತರಣಾ ಕಾಲುವೆಯ ಕಾಮಗಾರಿ ಮುಕ್ತಾಯಗೊಳಿಸಬೇಕೆಂದು ಆಗ್ರಹಿಸಿದರು.
ಆಲಮಟ್ಟಿಯ ಕೆ.ಬಿ.ಜೆ.ಎನ್.ಎಲ್ ಮುಖ್ಯ ಅಭಿಯಂತರರ ಕಛೇರಿ ಮುಂಭಾಗದಲ್ಲಿ ಆಹೋರಾತ್ರಿ ಧರಣಿ ಸತ್ಯಾಗ್ರಹ.
ನಾವು ಯಾವದೇ ಕಾರಣಕ್ಕೂ ಹಿಂದೆ ಸರಿಯುವ ಮಾತು ಇಲ್ಲ ನಮಗೆ ನ್ಯಾಯಬೇಕು, ಕಾನೂನು ಸೂವ್ಯವಸ್ಥೆಯನ್ನು ರೈತರ ಅದನ್ನ ಪಾಲಿಸುತ್ತೇವೆ,ಆದರೆ ಈ ದೇಶದ ಕಾನೂನನ್ನ ಹಾಳು ಮಾಡಿದ್ದು ರಾಜಕೀಯ ವ್ಯಕ್ತಿಗಳು ಹಾಗೂ ಭ್ರಷ್ಟ ಅಧಿಕಾರಿಗಳು ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿದರು.
ಅಖಂಡ ಕರ್ನಾಟಕ ರೈತ ಸಂಘದ ಬಸವನ ಬಾಗೇವಾಡಿ ತಾಲೂಕ ಅಧ್ಯಕ್ಷ ಉಮೇಶ ವಾಲಿಕಾರ ಹಾಗೂ ವಿವಿಧ ಹಳ್ಳಿ ತಾಲೂಕು ರೈತರು ಆಹೋರಾತ್ರಿ ಧರಣಿಯಲ್ಲಿ ಪಾಲಗೊಂಡಿದ್ದರು.
ವರದಿ:ಅಲಿ ಮಕಾನದಾರ