ನವದೆಹಲಿ: ದೇಶದಲ್ಲಿ ಪೆಟ್ರೋಲ್ ಬಂಕ್ ಗಳ ಸಂಖ್ಯೆ ಒಂದು ಲಕ್ಷ ದಾಟಿದೆ. ವಿಶ್ವದಲ್ಲೇ ಮೂರನೇ ಸ್ಥಾನ ಹೊಂದಿದೆ.
ದೇಶದಲ್ಲಿ ಸದ್ಯ 1,00,266 ಪೆಟ್ರೋಲ್ ಬಂಕ್ ಗಳಿವೆ. ಈ ಮೂಲಕ ಭಾರತ ವಿಶ್ವದಲ್ಲಿಯೇ ಮೂರನೇ ದೊಡ್ಡ ಇಂಧನ ಜಾಲ ಹೊಂದಿದ ದೇಶವಾಗಿದೆ.
ಅಮೆರಿಕ(1,96,643), ಚೀನಾ(1,15,228) ಮೊದಲ ಎರಡು ಸ್ಥಾನಗಳಲ್ಲಿವೆ.2015 ರ ನಂತರ ವಾಹನ ಖರೀದಿ ಪ್ರಮಾಣ ನಿರಂತರ ಹೆಚ್ಚಳವಾಗುತ್ತಿದ್ದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದೇಶ ವ್ಯಾಪಿ ಗ್ರಾಮೀಣ ಮತ್ತು ಹೆದ್ದಾರಿಗಳ ಬಳಿ ಪೆಟ್ರೋಲ್ ಬಂಕ್ ಗಳ ಸ್ಥಾಪನೆಗೆ ಮುಂದಾಗಿದ್ದು, ಸಂಖ್ಯೆಗಳ ಹೆಚ್ಚಳಕ್ಕೆ ಕಾರಣವಾಗಿದೆ.
2015ರಲ್ಲಿ ದೇಶದಲ್ಲಿ 50,451 ಪೆಟ್ರೋಲ್ ಬಂಕ್ ಗಳು ಇದ್ದವು. ಪ್ರಸ್ತುತ ಶೇಕಡ 90ರಷ್ಟು ಪೆಟ್ರೋಲ್ ಬಂಕ್ ಗಳು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ನಿಯಂತ್ರಣದಲ್ಲಿ ಇವೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ 41,664 ಪೆಟ್ರೋಲ್ ಬಂಕ್ ಗಗಳನ್ನು ಹೊಂದಿದೆ. ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ 24,605, ಹೆಚ್.ಪಿ.ಸಿ.ಎಲ್. 24,418 ಬಂಕ್ ಗಳನ್ನು ಹೊಂದಿದೆ. ಖಾಸಗಿ ವಲಯದ ಬಂಕ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ನಯಾರಾ ಎನರ್ಜಿ 6921, ರಿಲಯನ್ಸ್ ಇಂಡಸ್ಟ್ರೀಸ್ 2114, ಬಿಪಿ ಶೆಲ್ 346 ಬಂಕುಗಳನ್ನು ಹೊಂದಿದೆ.




