ನವದೆಹಲಿ: ಕಳೆದ 13 ವರ್ಷಗಳಲ್ಲಿ ದೇಶದಲ್ಲಿ ಬಡತನ ಭಾರಿ ಕುಸಿತ ಕಂಡಿದೆ. ದೇಶದಲ್ಲಿ ಬಡವರ ಸಂಖ್ಯೆ ಶೇಕಡ 21ರಿಂದ ಶೇಕಡ 8.5ಕ್ಕೆ ಇಳಿಕೆಯಾಗಿದೆ ಎಂದು ಪ್ರಸಿದ್ಧ ಖಾಸಗಿ ಸಂಶೋಧನಾ ಸಂಸ್ಥೆ ಎನ್.ಸಿ.ಎ.ಇ.ಆರ್. ಮಾನವ ಅಭಿವೃದ್ಧಿ ಸಮೀಕ್ಷೆಯ ವರದಿ ತಿಳಿಸಿದೆ.
2011 -12ನೇ ಸಾಲಿನಲ್ಲಿ ದೇಶದಲ್ಲಿ ಬಡವರ ಸಂಖ್ಯೆ ಶೇಕಡ 21ರಷ್ಟಿತ್ತು, ಅದೀಗ ಶೇಕಡ 8.5ಕ್ಕೆ ಇಳಿಕೆಯಾಗಿದೆ.ಬಡತನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದರೂ ಸ್ವಲ್ಪ ಹೆಚ್ಚು ಕಡಿಮೆಯಾದರೆ ಮತ್ತೆ ಬಡತನಕ್ಕೆ ಜಾರುವವರ ಸಂಖ್ಯೆ ಈಗಲೂ ಗಣನೀಯ ಪ್ರಮಾಣದಲ್ಲಿದೆ ಎಂದು ಸಂಸ್ಥೆ ತಿಳಿಸಿದೆ.
ಇನ್ಫೋಸಿಸ್ ಸಂಸ್ಥಾಪಕರಲ್ಲಿ ಒಬ್ಬರಾದ ನಂದನ್ ನಿಲೇಕಣಿ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಈ ಸಂಸ್ಥೆಯ ಅರ್ಥಶಾಸ್ತ್ರಜ್ಞರು ವರದಿ ಸಿದ್ದಪಡಿಸಿದ್ದಾರೆ. ಗ್ರಾಮೀಣ ಭಾಗದಲ್ಲಿ ಬಡವರ ಸಂಖ್ಯೆ ಶೇಕಡ 24.8 ರಿಂದ ಶೇಕಡ 8.6 ಕ್ಕೆ ಇಳಿಕೆಯಾಗಿದೆ.
ನಗರ ಪ್ರದೇಶದಲ್ಲಿ ಬಡವತನದ ಪ್ರಮಾಣ ಶೇಕಡ 21ರಿಂದ ಶೇಕಡ 8.5 ಇಳಿದಿದೆ. ಆಹಾರ ಸಬ್ಸಿಡಿ ಸರ್ಕಾರಿ ನೆರವುಗಳಿಂದ ದೇಶದಲ್ಲಿ ಬಡತನ ಪ್ರಮಾಣ ಕಡಿಮೆಯಾಗಿದೆ. ಸರ್ಕಾರಗಳು ಸಾಮಾಜಿಕ ಭದ್ರತೆಗೆ ಒತ್ತು ನೀಡದಿದ್ದಲ್ಲಿ ಮತ್ತೆ ಬಡತನ ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮಾನವ ಅಭಿವೃದ್ಧಿ ಸಮೀಕ್ಷೆಯ ಆರಂಭಿಕ ಸಂಶೋಧನೆಗಳ ಆಧಾರದ ಮೇಲೆ, ತೆಂಡೂಲ್ಕರ್ ಸಮಿತಿಯು ಹಣದುಬ್ಬರ-ಹೊಂದಾಣಿಕೆಯ ಬಡತನ ರೇಖೆಯನ್ನು ಬಳಸಿಕೊಂಡು ಬಡತನದ ಹೆಡ್ ಎಣಿಕೆ ಅನುಪಾತಗಳನ್ನು ಅಂದಾಜು ಮಾಡಿದೆ. ಇದನ್ನು ಸರ್ಕಾರವು ತನ್ನ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ಬಳಸುತ್ತದೆ.
ಇದು 2017 ರ ಖರೀದಿ ಸಾಮರ್ಥ್ಯದ ಸಮಾನತೆಯನ್ನು ಬಳಸಿಕೊಂಡು ವಿಶ್ವ ಬ್ಯಾಂಕ್‌ನ $2.15 ಅಂತರಾಷ್ಟ್ರೀಯ ಬಡತನ ರೇಖೆಗಿಂತ ಕಡಿಮೆಯಾಗಿದೆ. ಮಂಗಳವಾರ ಬಿಡುಗಡೆಯಾದ ಥಿಂಕ್ ಟ್ಯಾಂಕ್ ಎನ್‌ಸಿಎಇಆರ್‌ನ ಸೋನಾಲ್ಡೆ ದೇಸಾಯಿ ನೇತೃತ್ವದ ಅರ್ಥಶಾಸ್ತ್ರಜ್ಞರ ಲೇಖನವು ಬಡತನ ಅನುಪಾತದಲ್ಲಿ ತೀವ್ರ ಕುಸಿತವನ್ನು ಅಂದಾಜು ಮಾಡಿದೆ.