Ad imageAd image

ಶ್ರೇಷ್ಠ ಇಂಜಿನಿಯರ್ ,ಆನಂದ್ ಬಣಗಾರ, ಎಸ್.ಕೆ ಪಾಟೀಲ್ ರನ್ನು ಹೃದಯ ಸ್ಪರ್ಶಿಯಾಗಿ ಸರ್ಕಾರಿ ಸೇವೆಯಿಂದ ಬಿಳ್ಕೊಟ್ಟ ಅಧಿಕಾರಿಗಳು, ಸಿಬ್ಬಂದಿಗಳು

Bharath Vaibhav
ಶ್ರೇಷ್ಠ ಇಂಜಿನಿಯರ್ ,ಆನಂದ್ ಬಣಗಾರ, ಎಸ್.ಕೆ ಪಾಟೀಲ್ ರನ್ನು ಹೃದಯ ಸ್ಪರ್ಶಿಯಾಗಿ ಸರ್ಕಾರಿ ಸೇವೆಯಿಂದ ಬಿಳ್ಕೊಟ್ಟ ಅಧಿಕಾರಿಗಳು, ಸಿಬ್ಬಂದಿಗಳು
WhatsApp Group Join Now
Telegram Group Join Now

ಬೆಳಗಾವಿ:-ನಿನ್ನೆ ತಾನೇ ಸರ್ಕಾರಿ ಸೇವೆಯಿಂದ ನಿವೃತ್ತರಾದ ಬೆಳಗಾವಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಬೆಳಗಾವಿಯ ಅಧೀಕ್ಷಕ ಅಭಿಯಂತರರಾಗಿದ್ದ ಶ್ರೀ ಆನಂದ್ ಬಣಗಾರ ಹಾಗೂ ರೂರಲ್ ವಾಟರ್ ಇಲಾಖೆ
ಎ. ಇ. ಇ ಹಾಗೂ ಬೆಳಗಾವಿ ತಾಲ್ಲೂಕು ಪಂಚಾಯಿತಿ ಇ. ಓ ಆಗಿ ಸೇವೆ ಸಲ್ಲಿಸುತ್ತಿದ್ದ ಶ್ರೀ ಎಸ್.ಕೆ ಪಾಟೀಲರನ್ನು ಇಲಾಖೆಗಳ ಹಿರಿಯ ಅಭಿಯಂತರರು, ಅಧಿಕಾರಿಗಳು ಹಾಗೂ ಪಿ.ಡಿ.ಓ ಗಳು, ಸಿಬ್ಬಂದಿಗಳು ಅವರಿಗೆ ಸನ್ಮಾನ ಹಾಗೂ ಸತ್ಕಾರಗಳನ್ನು ಮಾಡುವ ಮೂಲಕ ಸರ್ಕಾರಿ ಸೇವೆಯಿಂದ ಹೃದಯ ಸ್ಪರ್ಶಿಯಾಗಿ ಬಿಳ್ಕೊಟ್ಟಿದ್ದಾರೆ.

ನಿನ್ನೆ ಆಯಾ ಕಚೇರಿ ಕಾರ್ಯಾಲಯಗಳಲ್ಲಿ ಎಲ್ಲರೂ ಸೇರಿ ಸಭೆಗಳನ್ನು ಆಯೋಜನೆ ಮಾಡಿ ಸನ್ಮಾನ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿವೃತ್ತಿಯಾದ ಅಭಿಯಂತರರುಗಳು ತಮ್ಮ ಸರ್ಕಾರಿ ವೃತ್ತಿ ಜೀವನದ ಅವಧಿಯಲ್ಲಿ ನಡೆದ ಅನುಭವಗಳ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಬೆಳಗಾವಿ ಹಿರಿಯ ಇಂಜಿನಿಯರ್ ಗಳಾದ ಶಶಿಕಾಂತ ನಾಯಕ್, ಎಸ್.ಬಿ ಕೋಳಿ, ಶ್ರೀ ಮಠಪತಿ, ಶ್ರೀ ರಮೇಶ್ ಹೆಡ್ಗೆ ಹಾಗೂ ಖಾನಾಪುರೆ, ಎಸ್.ಆರ್ ಮಾಳಗಿ ಹಾಗೂ ನಿವೃತ್ತ ಹಿರಿಯ ಅಭಿಯಂತರರು ಆದ ಪವಾರ್, ಎಸ್.ಎಲ್ ಬೀಮಾನಾಯ್ಕ ಸಹಾಯಕ ನಿರ್ದೇಶಕ ಕಡೆಮನಿ, ಮೊರಬದ ಸೇರಿದಂತೆ ಎಲ್ಲಾ ಸಹಾಯಕ ಅಭಿಯಂತರರು, ಕಿರಿಯ ಅಭಿಯಂತರರು ಹಾಗೂ ಎಲ್ಲಾ ಪಿ.ಡಿ.ಓ ಗಳು , ಸಿಬ್ಬಂದಿಗಳು ಹಾಗೂ ಕುಟುಂಬವರ್ಗದವರು ಉಪಸ್ಥಿತರಿದ್ದರು. ಒಟ್ಟಾರೆ ಬೆಳಗಾವಿ ಜಿಲ್ಲಾ ಪಂಚಾಯತ್ ಕಂಡ ಶ್ರೇಷ್ಠ ಇಂಜಿನಿಯರ್ ಗಳಾದ ಆನಂದ ಬಣಗಾರ ಹಾಗೂ ಎಸ್.ಕೆ ಪಾಟೀಲರನ್ನು ಅದ್ದೂರಿಯಾಗಿ ಬೀಳ್ಕೊಡಲಾಯಿತು.

 ವರದಿ:- ಬಸವರಾಜು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!