ಹುನಗುಂದ:-ಅಧ್ಯಕ್ಷರು ಹಾಗೂ ಸದಸ್ಯರು ಬೇಜಾರು.ತಡವಾಗಿ ಬಂದ ಪಿಡಿಯೋ ಶೋಭಾ. ಹುನಗುಂದ ತಾಲೂಕಿನ ರಕ್ಕಸಗಿ ಗ್ರಾಮ ಪಂಚಾಯಿತಿ ಕಚೇರಿ ಯವರು ನಿನ್ನೆ ಡಂಗುರ ಸಾರಿ ನಾಳೆ ಬೆಳಿಗ್ಗೆ 11 ಗಂಟೆಗೆ ಗ್ರಾಮ ಸಭೆ ಹಮ್ಮಿಕೊಳ್ಳಲಾಗಿದೆ.
ಗ್ರಾಮಸ್ಥರು ರೈತರ ಭವನಕ್ಕೆ ಅಗಮಿಸಲು ಸೂಚಿದ್ದರು, ಇಂದು ಅದೇ ಪ್ರಕಾರ ಅಧ್ಯಕ್ಷರು, ಸದಸ್ಯರು, ಗ್ರಾಮಸ್ಥರು ಬೆಳಿಗ್ಗೆ 11 ಗಂಟೆಯಿಂದ 12-30 ರವರಿಗೆ ಕಾದು ಕಾದು ಸುಸ್ತಾದರು, ನಂತರ ಬಂದ ಪಿಡಿಯೋ ರವರು ಕಾರಣಾಂತರಗಳಿಂದ ಸಭೆ ಮುಂದೂಡಲಾಗಿದೆ ಎಂದು ಸಾರ್ವಜನಿಕರಿಗೆ ಸೂಚನಪತ್ರ ನೀಡಿದ್ದಾರೆ, ಅಧಿಕಾರಿಗಳ ಈ ನಡೆಯಿಂದ
ಸಾರ್ವಜನಿಕರು ಗೋಣಗುತ್ತಾ ಮನೆ ನಡೆದರು,
ವರದಿ:- ದಾವಲ್ ಸೇಡಂ