ಬೆಳಗಾವಿ : ಆಸ್ತಿಯ ವಿಚಾರಕ್ಕೆ ಸ್ವಂತ ತಮ್ಮನನ್ನೆ ಟ್ರಾಕ್ಟರ್ ಹತ್ತಿಸಿ ಕೊಲೆಗೈದ ಘಟನೆ ಬೆಳಗಾವಿ ಜಿಲ್ಲೆಯ ಎರಗಟ್ಟಿ ತಾಲೂಕಿನಲ್ಲಿ ನಡೆದಿದೆ.
ಗೋಪಾಲ್ ಬಾವಿಹಾಳ (27) ಮೃತ ದುರ್ದೈವಿ, ಕೆಲ ವರ್ಷಗಳ ಹಿಂದೆ ಗೋಪಾಲ್ ಹಾಗೂ ಆತನ ಅಣ್ಣ ಮಾರುತಿ (30) ಎಂಬಾತನಿಗೆ ಆಸ್ತಿಯನ್ನು ಹಂಚಲಾಗಿತ್ತು.ಈ ಬಗ್ಗೆ ಇಬ್ಬರಿಗೂ ಅಸಮಾಧಾನವಿತ್ತು, ಈ ಹಿನ್ನಲೆ ಇಬ್ಬರ ನಡುವೆ ಗಲಾಟೆಯಾಗುತ್ತಿತ್ತು.
ಆದರೆ ಗೋಪಾಲ್ ಅಣ್ಣನ ಪಾಲಿಗೆ ಬಂದಿದ್ದ ಟ್ರಾಕ್ಟರ್ ಅನ್ನು ಮನೆಯಿಂದ ತಂದು ತನ್ನ ಹೆಂಡತಿಯ ಮನೆಯಲ್ಲಿ ಇರಿಸಿದ್ದ, ಅಷ್ಟೇ ಅಲ್ಲದೆ ಇಬ್ಬರ ನಡುವೆ ಈ ಬಗ್ಗೆ ಸಾಕಷ್ಟು ಭಾರೀ ಗಲಾಟೆಯಾಗಿತ್ತು.
ಆದರೆ ನಿನ್ನೆ ಮಾತಿಗೆ ಮಾತು ಬೆಳೆದು ಇಬ್ಬರು ಕೈಕೈ ಮಿಲಾಯಿಸಿದ್ದು, ಸಿಟ್ಟಿನಲ್ಲಿದ್ದ ಅಣ್ಣ ಮಾರುತಿ ಟ್ರಾಕ್ಟರ್ ಹರಿಸಿ ತಮ್ಮ ಗೋಪಾಲ್ ನನ್ನು ಕೊಲೆ ಮಾಡಿದ್ದಾನೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯರಗಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.