Ad imageAd image

ಮದುವೆಯಾಗೋದಾಗಿ ನಂಬಿಸಿ ಅಕ್ಕನಿಗೆ ಮೋಸ, ತಂಗಿಯ ಮೇಲೆ ಅತ್ಯಾಚಾರ 

Bharath Vaibhav
ಮದುವೆಯಾಗೋದಾಗಿ ನಂಬಿಸಿ ಅಕ್ಕನಿಗೆ ಮೋಸ, ತಂಗಿಯ ಮೇಲೆ ಅತ್ಯಾಚಾರ 
WhatsApp Group Join Now
Telegram Group Join Now

ಬೆಂಗಳೂರು : ಮದುವೆಯಾಗೋದಾಗಿ ನಂಬಿಸಿ ಯುವತಿಯ ಜೊತೆ ಲಿವ್​​ ಇನ್​​ ರಿಲೇಶನ್​​ಶಿಪ್​​ನಲ್ಲಿದ್ದು ವಂಚಿಸಿದ್ದಲ್ಲದೆ, ಆಕೆಯ ಅಪ್ರಾಪ್ತ ಸಹೋದರಿ ಮೇಲೂ ವ್ಯಕ್ತಿಯೋರ್ವ ಅತ್ಯಾಚಾರ ನಡೆಸಿರುವ ಘಟನೆ ಬೆಂಗಳರಲ್ಲಿ ನಡೆದಿದೆ. ಅಷ್ಟೆ ಅಲ್ಲದೇ ಸಂತ್ರಸ್ತೆ ಯುವತಿಯಿಂದ ಲಕ್ಷಾಂತರ ಹಣ ಪಡೆದು ವಂಚನೆ ಎಸಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಆರೋಪಿ ಶುಭಾಂಶು ಶುಕ್ಲಾ(27)ನನ್ನು ಪೊಲೀಸರು ಬಂಧಿಸಿದ್ದಾರೆ. ಮೊದಲು ಸಂತ್ರಸ್ತೆಯ ಸಹೋದರಿಯಾದ ಅಪ್ರಾಪ್ತೆಯನ್ನು ಪರಿಚಯ ಮಾಡಿಕೊಂಡಿದ್ದ ಆರೋಪಿ, ಆಕೆಯ ಕುಟುಂಬಕ್ಕೂ ಬಲ್ಲವನಾಗಿದ್ದ. ಬಳಿಕ ಬಾಲಕಿ ಸಹೋದರಿಯನ್ನ ಪ್ರೀತಿ ಬಲೆಯಲ್ಲಿ ಬೀಳಿಸಿದ್ದ ಈತ, ಮಾಸ್ಟರ್​​ ಪ್ಲ್ಯಾನ್​​ ಮಾಡಿ ಆಕೆಯನ್ನು ತನ್ನ ಜೊತೆ ಕರೆದುಕೊಂಡು ಹೋಗಿದ್ದ. ತನಗೆ ಮುಂಬೈನಲ್ಲಿ ಕೆಲಸ ಸಿಕ್ಕಿದೆ ಎಂದು ಮನೆಯವರನ್ನು ನಂಬಿಸಿದ್ದ ಸಂತ್ರಸ್ತೆ, ಈತನನನ್ನು ನಂಬಿ ಜೊತೆಗೆ ತೆರಳಿದ್ದಳು.

ನಂತರ ಫ್ಲ್ಯಾಟ್​ನಲ್ಲಿ ಶುಭಾಂಶು ಮತ್ತು ಯುವತಿ ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದರು ಎನ್ನಲಾಗಿದೆ. ಈ ವೇಳೆ ಶುಭಾಂಶುಗೆ ಮೊದಲೇ ಮದುವೆಯಾಗಿರುವ ಬಗ್ಗೆ ಸಂತ್ರಸ್ತೆಗೆ ಗೊತ್ತಾಗಿದೆ.

ಮತ್ತೊಂದು ಅಪ್ರಾಪ್ತ ಯುವತಿಗೂ ಶುಭಾಂಶು ಇದೇ ರೀತಿ ವಂಚಿಸುತ್ತಿರೋದು ಸಂತ್ರಸ್ತೆಗೆ ಗೊತ್ತಾಗಿದೆ. ಆಕೆ ಮುಂದೆ ಈತನ ಬಂಡವಾಳವನ್ನು ಸಂತ್ರಸ್ತೆ ಬಯಲು ಮಾಡಿದ್ದಳು.

ಆ ಬಳಿಕ ಶುಭಾಂಶು ಚಿತ್ರಹಿಂಸೆ ಆರಂಭವಾಗಿತ್ತು ಎಂದು ದೂರಲಾಗಿದೆ. ಸಂತ್ರಸ್ತ ಯುವತಿ ಬಳಿ 37 ಲಕ್ಷ ಹಣವನ್ನೂ ಪಡೆದಿದ್ದ ಆರೋಪಿ ಶುಭಾಂಶು, ಯುವತಿ ಮನೆಯಲ್ಲಿ 559 ಗ್ರಾಂ ಚಿನ್ನಾಭರಣ ಸಹ ಕದ್ದಿದ್ದ. ಈ ಬಗ್ಗೆ ದೂರು ನೀಡಿದರೆ ಸಾಯಿಸುತ್ತೇನೆ ಎಂದು ಬೆದರಿಸಿದ್ದ. ಆ ಬಳಿಕ ಸಂತ್ರಸ್ತೆ ಚಿತ್ರಹಿಂಸೆ ತಾಳಲಾರದೆ ಶುಭಾಂಶುನನ್ನು ಬಿಟ್ಟು ಬಂದಿದ್ದಳು.

ಸಂತ್ರಸ್ತೆಯ ಪರಿಚಯಕ್ಕೆ ಮೂಲ ಕಾರಣವಾಗಿದ್ದ ಆಕೆಯ ಅಪ್ರಾಪ್ತ ಸಹೋದರಿಯ ಮೇಲೂ ಶುಭಾಂಶು ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಗ್ರೂಪ್​​ ಸ್ಟಡಿ ಮಾಡಲು ತೆರಳುತ್ತಿದ್ದಾಗ ಪರಿಚಯವಾಗಿದ್ದ ಶುಭಾಂಶು, ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ.

ನಾನು ಕರೆದಾಗೆಲ್ಲ ಬರಬೇಕು ಎಂದು ಬೆದರಿಸಿದ್ದ ಆತ, ನಿನ್ನ ಮನೆಯವರನ್ನು ನನಗೆ ಪರಿಚಯ ಮಾಡಿಸು ಎಂದಿದ್ದ. ಹಾಗಾದರೆ ಮಾತ್ರ ತಾನು ನಿನ್ನ ಬಿಡೋದಾಗಿ ಹೆದರಿಸಿದ್ದ ಎಂದು ಅಪ್ರಾಪ್ತೆಯೂ ದೂರಿದ್ದಾಳೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!