Ad imageAd image

ನೀರಲ್ಲ ತುಪ್ಪದಿಂದ ತಯಾರಾದ ವಿಶ್ವದ ಏಕೈಕ ದೇವಾಲಯ 

Bharath Vaibhav
ನೀರಲ್ಲ ತುಪ್ಪದಿಂದ ತಯಾರಾದ ವಿಶ್ವದ ಏಕೈಕ ದೇವಾಲಯ 
WhatsApp Group Join Now
Telegram Group Join Now

ರಾಜಸ್ಥಾನ : ಭಾರತೀಯ ದೇವಾಲಯಗಳ ನಿರ್ಮಾಣ ಬಹಳಷ್ಟು ವಿಶೇಷತೆಗಳಿಂದ ಕೂಡಿದೆ. ಸಾವಿರಾರು ವರ್ಷಗಳ ಇತಿಹಾಸವಿರುವ ಸುಂದರ ದೇವಾಲಯಗಳು ಇಂದಿಗೂ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ.

ಪುರಾತನ ದೇವಾಲಯಗಳ ನಿರ್ಮಾಣ ವಿಧಾನಗಳು ಬಹಳ ಅದ್ಭುತವಾಗಿವೆ. ರಾಜಸ್ಥಾನದ ಭಂಡಾಸರ್ ದೇವಾಲಯದ ನಿರ್ಮಾಣವಂತೂ ಭಕ್ತರನ್ನು ಅಚ್ಚರಿಗೊಳಿಸುವುದರಲ್ಲಿ ಅನುಮಾನವೇ ಇಲ್ಲ.

ಈ ದೇವಾಲಯದ ನಿರ್ಮಾಣದ ಸಂದರ್ಭದಲ್ಲಿ ನೀರಿನ ಬದಲು ತುಪ್ಪವನ್ನು ಬಳಸಲಾಗಿದೆ. ರಾಜಸ್ಥಾನದಲ್ಲಿರುವ ಭಂಡಾಸರ್ ದೇವಾಲಯವನ್ನು 15ನೇ ಶತಮಾನದಲ್ಲಿ ಬಂದಾ ಶಾ ಓಸ್ವಾಲ್ ಎಂಬ ಶ್ರೀಮಂತ ವ್ಯಾಪಾರಿ ನಿರ್ಮಿಸಿದ. ಈ ದೇವಾಲಯವು ಜೈನ ಧರ್ಮದ ಐದನೇ ತೀರ್ಥಂಕರ ಸುಮತಿನಾಥನಿಗೆ ಸಮರ್ಪಿತವಾಗಿದೆ.

ಈ ದೇವಾಲಯವು ತುಪ್ಪದಿಂದ ಮಾಡಲ್ಪಟ್ಟಿದೆ, ಮಾತ್ರವಲ್ಲ ಅದರ ಒಳಾಂಗಣ ಮತ್ತು ವಾಸ್ತುಶಿಲ್ಪ ಕೂಡ ಕಣ್ಸೆಳೆಯುವಂತಿದೆ. ಅನೇಕ ಜೈನ ದೇವಾಲಯಗಳಂತೆ ಸುಂದರ ಕೆತ್ತನೆಗಳು ಮತ್ತು ವರ್ಣಚಿತ್ರಗಳನ್ನು ಹೊಂದಿದೆ. ಈ ದೇವಾಲಯವನ್ನು ಮೂರು ಮಹಡಿಗಳಲ್ಲಿ ನಿರ್ಮಿಸಲಾಗಿದೆ, ಇದರಲ್ಲಿ ಜೈನ ಸಂಸ್ಕೃತಿಯ ವಿಭಿನ್ನ ಅಂಶಗಳನ್ನು ನೋಡಬಹುದು.

ದೇವಾಲಯವನ್ನು ತುಪ್ಪದಿಂದ ನಿರ್ಮಿಸಿದ್ದೇಕೆ?

ಈ ದೇವಾಲಯವನ್ನು ನೀರಿನ ಬದಲು ತುಪ್ಪದಿಂದ ನಿರ್ಮಿಸಿದ್ದೇಕೆ ಅನ್ನೋದು ಇಂಟ್ರೆಸ್ಟಿಂಗ್‌ ಸಂಗತಿ. ಬಂದಾ ಷಾ ಇಲ್ಲಿ ದೇವಾಲಯ ನಿರ್ಮಾಣಕ್ಕೆ ಮುಂದಾದಾಗ ಗ್ರಾಮಸ್ಥರು ಅದನ್ನು ವಿರೋಧಿಸಿದ್ದರು. ಏಕೆಂದರೆ ಆ ಭಾಗದಲ್ಲಿ ನೀರಿಗಾಗಿ ತೀವ್ರ ಹಾಹಾಕಾರವಿತ್ತು, ಬದುಕುವುದೇ ಕಷ್ಟವೆಂಬ ಪರಿಸ್ಥಿತಿಯಿತ್ತು.

ಅಂಥದ್ರಲ್ಲಿ ದೇವಾಲಯ ನಿರ್ಮಾಣಕ್ಕೆ ಸಾವಿರಾರು ಲೀಟರ್‌ ನೀರು ವ್ಯರ್ಥವಾಗುತ್ತದೆ ಎಂಬುದು ಗ್ರಾಮಸ್ಥರ ವಾದ. ಇದನ್ನು ಆಲಿಸಿದ ಬಂದಾ ಷಾ ದೇವಾಲಯವನ್ನು ನೀರಿನ ಬದಲು ತುಪ್ಪದಿಂದ ನಿರ್ಮಿಸಲು ನಿರ್ಧರಿಸಿದ.

ದೇವಾಲಯದ ಅಡಿಪಾಯ ಸಂಪೂರ್ಣ ತುಪ್ಪದಿಂದ ಮಾಡಲ್ಪಟ್ಟಿದೆ ಎಂಬುದನ್ನು ಅಗೆದು ಪರೀಕ್ಷಿಸಿಲ್ಲ. ಆದರೆ ದೇವಾಲಯ ನಿರ್ಮಾಣದಲ್ಲಿ ತುಪ್ಪವನ್ನು ಬಳಸಿದ್ದರಿಂದ ಸೆಖೆಗಾಲದಲ್ಲಿ ಇಲ್ಲಿ ನೆಲ ಜಾರುತ್ತದೆ, ಸ್ತಂಭಗಳು ಮತ್ತು ನೆಲದಿಂದ ತುಪ್ಪ ಸೋರುತ್ತದೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!