ಇಲಕಲ್: ಶಿವಮೊಗ್ಗಾ ಹಾಗೂ ಬೀದರ ಜಿಲ್ಲೆಗಳಲ್ಲಿ ಸಿಇಟಿ ವಿದ್ಯಾರ್ಥಿಗಳು ಹಾಕಿದ್ದ ಜನಿವಾರವನ್ನು ತೆಗೆಸಿದ ಘಟನೆಗಳನ್ನು ಬ್ರಾಹ್ಮಣ ಸಮುದಾಯವು ಉಗ್ರವಾಗಿ ಖಂಡಿಸಿದೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪ್ರತಿನಿಧಿ ಗುರುರಾಜ ಗೊಂಬಿ ಅವರು ಮಾತನಾಡಿ ಪವಿತ್ರವೂ, ಧಾರ್ಮಿಕ ಆಚರಣೆಗಳ ಮೂಲಕವೂ, ಸೂಕ್ತ ಮುಹೂರ್ತದಲ್ಲಿ ಧಾರಣೆ ಮಾಡಿರುವ ಜನಿವಾರವನ್ನು ಡಸ್ಟ್ಬಿನ್‌ನಲ್ಲಿ ಎಸೆದಿರುವ ಕೃತ್ಯವು ಅಮಾನವೀಯವೂ, ಸಂವಿಧಾನವಿರೋಧಿಯೂ ಆಗಿದೆ ಎಂದು ಅಭಿಪ್ರಾಯಪಟ್ಟರು.
ಪರಿಕ್ಷಾ ಸಿಬ್ಬಂದಿಯ ಇಂಥ ಹೀನ ಕೃತ್ಯವನ್ನು ಬ್ರಾಹ್ಮಣ ಮಹಾಸಭಾ ಕ್ಷಮಿಸುವುದಿಲ್ಲ ಎಂದು ಅವರು ಹೇಳಿದರು. ಸರಕಾರವು ತಕ್ಷಣ ಈ ಬಗ್ಗೆ ಕ್ರಮ ಕೈಗೊಂಡು ಸಂಬಂಧಿಸಿದವರನ್ನು ಅಮಾನತ್ತುಗೊಳಿಸಿ ಅವರ ಮೇಲೆ ಮುಕದ್ದಮೆ ಹೂಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.
ವರದಿ: ದಾವಲ್ ಶೇಡಂ