Ad imageAd image
- Advertisement -  - Advertisement -  - Advertisement - 

ಉರುಳಿಬಿದ್ದ ಪೆಟ್ರೋಲ್ ಲಾರಿ,ಅಪಾರ ಪ್ರಮಾಣದಲ್ಲಿ ಸೋರಿಕೆ,ಕೆಲಕಾಲ ರಸ್ತೆ ಸಂಚಾರಕ್ಕೆ ತೊಂದರೆ

Bharath Vaibhav
ಉರುಳಿಬಿದ್ದ ಪೆಟ್ರೋಲ್ ಲಾರಿ,ಅಪಾರ ಪ್ರಮಾಣದಲ್ಲಿ ಸೋರಿಕೆ,ಕೆಲಕಾಲ ರಸ್ತೆ ಸಂಚಾರಕ್ಕೆ ತೊಂದರೆ
WhatsApp Group Join Now
Telegram Group Join Now

ಕಲಘಟಗಿ: -ಚಾಲಕನ ನಿಯಂತ್ರಣ ತಪ್ಪಿದ ಪೆಟ್ರೋಲ್ ತುಂಬಿದ ಟ್ಯಾಂಕರ್ ಒಂದು ಆಯತಪ್ಪಿ ಬಿದ್ದಿದ್ದರಿಂದ ಕೆಲಕಾಲ ಸಂಚಾರಕ್ಕೆ ತೊಂದರೆಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ರವಿವಾರ ಮಧ್ಯಾಹ್ನ ಸಂಭವಿಸಿದೆ.

ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿ ಕಡೆ ಸಾಗುತ್ತಿದ್ದ ಪೆಟ್ರೋಲ್ ತುಂಬಿದ ಟ್ಯಾಂಕರ್ ಎದುರು ಜಾನುವಾರುಗಳು ಬಂದಿವೆ. ಅವುಗಳನ್ನು ತಪ್ಪಿಸಲು ಹೋದಾಗ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಪಕ್ಕದ ತಗ್ಗಿಗೆ ಟ್ಯಾಂಕರ್ ಉರುಳಿದೆ. ಟ್ಯಾಂಕರ್ ಬಿದ್ದ ರಭಸಕ್ಕೆ ಅಪಾರ ಪ್ರಮಾಣದಲ್ಲಿ ಪೆಟ್ರೋಲ್ ಹರಿದು ಹೋಗಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಸಂಭವಿಸಿಲ್ಲ.

ಸಂಚಾರಕ್ಕೆ ತೊಂದರೆ:ಟ್ಯಾಂಕರ್ ಉರುಳಿ ಬಿದ್ದು ಪೆಟ್ರೋಲ್ ಅಪಾರ ಪ್ರಮಾಣದಲ್ಲಿ ಸೋರಿಕೆ ಆಗಿದ್ದರಿಂದ ಒಂದು ತಾಸಿಗೂ ಹೆಚ್ಚು ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ ಕಲಘಟಗಿ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡರು. ಪೆಟ್ರೋಲ್ ಸೋರಿಕೆ ಆಗಿದ್ದರಿಂದ ವಾಹನ ಸಂಚಾರ ತಡೆದು ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು. ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪೆಟ್ರೋಲ್ ಸೋರಿಕೆ ಆದಲ್ಲಿ ನೀರು ಹರಿಸಿ ಅಗ್ನಿ ಕಿಡಿ ಎಳದಂತೆ ತಡೆಯುವಲ್ಲಿ ಯಶಸ್ವಿಯಾದರು.

ಸಿಪಿಐ ಶ್ರೀಶೈಲ್ ಕೌಜಲಗಿ, ಪಿಎಸ್ಐ ಬಸವರಾಜ ಯದ್ದಲಗುಡ್ಡ,ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಚಂದ್ರಕಾಂತ ಬಂಡಾರಿ, ಸಹಾಯಕ ಅಗ್ನಿಶಾಮಕ ಅಧಿಕಾರಿ ಅಶೋಕ ವಡ್ಡರ, ಪ್ರಮುಖ ಅಗ್ನಿ ಶಾಮಕರಾದ ಆನಂದ ಮುದಿಯಣ್ಣವರ, ಅಶೋಕ ಲಮಾಣಿ, ಉಮೇಶ ತಂಬದ, ಹನುಮಂತಸಿಂಗ್ ರಜಪೂತ, ಸಂತೋಷ ಉಗ್ನಿಕೇರಿ, ಸಿದ್ಧಿಕ್ ಬಾಷಾ, ನಾಗರಾಜ ಪಾತ್ರೋಟ, ಲೋಕೇಶ ಬೆಂಡೆಕಾಯಿ ಇತರರಿದ್ದರು.

ವರದಿ : ಶಶಿಕುಮಾರ ಕಲಘಟಗಿ

WhatsApp Group Join Now
Telegram Group Join Now
Share This Article
error: Content is protected !!