ಬೈಲಹೊಂಗಲ: ತಾಲೂಕಿನ ನಯಾ ನಗರದ ಮಲಪ್ರಭಾ ನದಿಯ ದಂಡೆಯ ಮೇಲೆ ಸುಮಾರು ವರ್ಷಗಳಿಂದ ಗೋಕಾಕ್ ತಾಲೂಕಿನ ಮಧುವಾಲ ಗ್ರಾಮದ ದೇವರುಗಳಾದ. ಮೂರು ಮುಖದೇವಿ, ದುರ್ಗಾದೇವಿ , ಹನುಮಂತ ದೇವರು, ಇರಲೆಪ್ಪ ಈ ನಾಲ್ಕು ಪಲ್ಲಕ್ಕಿಗಳು ಪ್ರತಿವರ್ಷ ಪದ್ಧತಿಯಂತೆ ಈ ವರ್ಷವೂ ಕೂಡ ದೀಪಾವಳಿ ಅಮಾವಾಸ್ಯೆ ದಿವಸ ಗೋಕಾಕ್ ತಾಲೂಕಿನ ಮಧುವಾಲ ಗ್ರಾಮ ದವರು ಪಲ್ಲಕ್ಕಿಯೊಂದಿಗೆ ದೀಪಾವಳಿ ಅಮಾವಾಸ್ಯೆಯಂದು ಪಾದಯಾತ್ರೆ ಕೈಗೊಂಡು ದೀಪಾವಳಿ ಪಾಡ್ಯ ದಿನದಂದು ಮಲಪ್ರಭಾ ನದಿಗೆ ಆಗಮಿಸಿ ದೇವರುಗಳ ಸ್ನಾನ ಮಾಡಿಸಿ ಒಂದು ತಿಂಗಳುಗಳ ಕಾಲ ನದಿ ಪಕ್ಕದಲ್ಲಿ ವಾಸವಿರುತ್ತಾರೆ.
ಪ್ರತಿದಿನ ಅನ್ನಪ್ರಸಾದ, ಭಜನೆ, ಡೊಳ್ಳಿನ ವಾಲಗ, ದೇವರುಗಳಿಗೆ ವಿಶೇಷ ಪೂಜೆ, ಅನ್ನ ಸಂತರ್ಪಣೆ ಮಂತಾದ ಸಕಲ ಪೂಜಾ ಕಾರ್ಯಕ್ರಮಗಳು ಜರುಗಿರುತ್ತವೆ.

ಈ ದೇವರಲ್ಲಿ ನ ವಿಶೇಷತೆ ಎಂದರೆ ಮಕ್ಕಳ ಭಾಗ್ಯ ಇಲ್ಲದವರಿಗೆ ಮಕ್ಕಳ ಭಾಗ್ಯಕರ್ಣಿಸುವ ತಾಯಿ ಶ್ರೀ ಮೂರು ಮುಖದ ದೇವಿಯೆಂದು ಇತಿಹಾಸ ಪ್ರಸಿದ್ಧವಾಗಿದೆ. ಈ ತಾಯಿ ಹತ್ತಿರ ಬೇಡಿಕೊಂಡು ತಮ್ಮ ಕಷ್ಟಕಾರ್ಪಣ್ಯವನ್ನು ಬೇಡಿಕೊಂಡರೆ ತಮ್ಮ ಬೇಡಿಕೆ ಇಷ್ಟಾರ್ಥಿಸಿದ್ಧಿಯಾಗುತ್ತದೆ. ಹರಕೆ ತೀರಿಸಿಕೊಂಡ ಭಕ್ತರು ಪ್ರತಿದಿನ ಒಬ್ಬರಾಗಿ ಅನ್ನಪ್ರಸಾದ ಸೇವೆ ಮಾಡುತ್ತಾರೆ. ಮಕ್ಕಳ ಭಾಗ್ಯ ಕರುಣಿಸಲೆಂದು ಈ ದೇವಿ ಹತ್ತಿರ ಊಡಿ ತುಂಬುತ್ತಾರೆ. ಈ ತಾಯಿ ಹತ್ತಿರ ಬೇಡಿಕೊಳ್ಳಲು ನಾನ ಗ್ರಾಮಗಳಿಂದ ಮಹಿಳೆಯರು ಆಗಮಿಸುತ್ತಾರೆ.

ಕಾರ್ತಿಕ ಅಮಾವಾಸ್ಯೆಯ ಮರುದಿನ ಈ ದೇವರುಗಳ ದೊಡ್ಡ ಜಾತ್ರೆ ಜರುಗುತ್ತದೆ .ಅದೇ ದಿನ ಅಂದರೆ 21/11/2025 ರಂದು ಸಾಯಂಕಾಲ ಮರಳಿ ತಮ್ಮ ಗ್ರಾಮದ ಕಡೆ ಹೋಗುತ್ತಾರೆ. ಈ ಸಂದರ್ಭದಲ್ಲಿ ಮಧುವಾಲ್ ಗ್ರಾಮದ ದೇವಸ್ಥಾನದ ಕಮಿಟಿಯ ಅಧ್ಯಕ್ಷರಾದ ಶ್ರೀ ನಿಂಗಪ್ಪ ಜಾಡರ್ , ಖಜಾಂಚಿಯಾದ ಮಲ್ಲಪ್ಪ ವನ್ನೂರ್, ಲಕ್ಕಪ್ಪ ದೇವರ, ಅಜ್ಜಪ್ಪ ಪಾಟೀಲ್, ಬಾಳೇಶ್ ತಿಮ್ಮಗೋಳ, ಗೌಡಪ್ಪ ಪಾಟೀಲ್, ಬಸವರಾಜ ಸನದಿ, ನೀಲಪ್ಪ ಉದ್ಘಾನಾಯಕ, ಭೀಮನಗೌಡ ಪೊಲೀಸ್ ಗೌಡ್ರು, ಭೀಮಣ್ಣ ಕೊಡುಸೋಮಣ್ಣವರ್, ಶಂಕರ ವನ್ನೂರ್, ಬಾಳನಗೌಡ ನಿಂದೆನವರು, ಅಶೋಕ್ ಶಿಗ್ಗಾವಿ, ಮಲ್ಲಪ್ಪ ನಾಯಕ್, ಶ್ರೀಮತಿ ಅನ್ನಪೂರ್ಣ ನಿರವಣಿ, ಅಪ್ಪಣ್ಣ ಜಾಡರ್, ಸಿದ್ದನಗೌಡ ಪಾಟೀಲ್, ಚೇರ್ಮನ್ ರವರಾದ ಮಾರುತಿ ಆಲೂರು ಹಾಗೂ ಸಹಸ್ರಾರು ಭಕ್ತರು ಮಹಿಳೆಯರು ಯುವಕರು ಈ ಒಂದು ಪಲ್ಲಕ್ಕಿ ಉತ್ಸವ ಕೊನೆಯ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು . ಈ ಸಂದರ್ಭದಲ್ಲಿ ಮಾತನಾಡಿದ ಗೌಡಪ್ಪ ಶಂಕರಗೌಡ ಪಾಟೀಲ್ ಅವರು ಬ್ರಿಟಿಷರ ಕಾಲದಿಂದ ನಾವು ಮದುವಾಲ ಗ್ರಾಮದಿಂದ ಪಾದಯಾತ್ರೆಯೊಂದಿಗೆ ಪಲ್ಲಕ್ಕಿ ಮುಖಾಂತರ ಈ ನದಿಗೆ ಆಗಮಿಸುತ್ತಿದ್ದೇವೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಇಷ್ಟಾರ್ಥವನ್ನು ಕಲ್ಪಿಸುವ ತಾಯಿ ಮೂರು ಮುಖ ತಾಯಿಯಾಗಿದ್ದಾಳೆ ಎಂದು ಹೇಳಿದರು.

ತದನಂತರ ಬಸವರಾಜ್ ಶಂಕರ್ ಸನದಿಯವರು ಮಾತನಾಡಿ ಮಕ್ಕಳ ಭಾಗ್ಯ ಕರುಣಿಸುವ ತಾಯಿ, ಈ ತಾಯಿಯಾಗಿದ್ದಾಳೆ ಈ ದೇವರುಗಳಲ್ಲಿ ಬೇಡಿಕೊಂಡರೆ ತಮ್ಮ ಇಷ್ಟಾರ್ಥ ಸಿದ್ಧಿಯಾಗುವುದು ಅನೇಕ ಗ್ರಾಮಗಳಿಂದ ಈಗಾಗಲೇ ಭಕ್ತರು ಆಗಮಿಸಿದ್ದಾರೆ ಹಾಗೂ ಮಹಿಳೆಯರಿಗೆ ಊಡಿ ತುಂಬವ ಕಾರ್ಯಗಳನ್ನು ಕೈಗೊಂಡಿವೆ ಎಂದು ಹೇಳಿದರು.
ವರದಿ : ದುಂಡಪ್ಪ ಹೂಲಿ




