ಚನ್ನಮ್ಮನ ಕಿತ್ತೂರು: ಕಿತ್ತೂರಿನ ನವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ವರ್ಷವು ಸಹ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವ ಚನ್ನಮ್ಮನ ವೃತ್ತದಿಂದ ಶ್ರೀ ದುರ್ಗಾ ಮಾತಾ ಮೂರ್ತಿಯನ್ನು ಸಕಲ ವಾದ್ಯ ಮೇಳದೊಂದಿಗೆ ಕಿತ್ತೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗಣಪತಿ ಗಲ್ಲಿ ಸೋಮವಾರ ಪೇಟೆಯ ಶ್ರೀ ಮೌನೇಶ್ವರ ದೇವಸ್ಥಾನಕ್ಕೆ ಬಂದು ಮೆರವಣಿಗೆ ಮುಕ್ತಾಯ ಗೊಂಡಿತ್ತು.
ನಂತರ ದುರ್ಗಾ ಮಾತಾ ಮೂರ್ತಿಯನ್ನು ಮೌನೇಶ್ವರ ದೇವಸ್ಥಾನದಲ್ಧಿ ಸ್ಥಾಪನೆ ಮಾಡಲಾಯಿತು. ಒಂಬತ್ತು ದಿನಗಳ ಕಾಲ ಪೂಜೆ ನಡೆಸಲಾಗುವುದು ಈ ಸಂದರ್ಭದಲ್ಲಿ ಯುವಕರು ಭಾಗವಹಿಸಿದ್ದರು.
ವರದಿ: ಜಗದೀಶ ಕಡೋಲಿ




