Ad imageAd image

ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಸೂರಣ್ಣವರ ತೋಟದ ಚನ್ನದಾಸರ ಕೋಡಿ ಸಮುದಾಯದ ಜನ.

Bharath Vaibhav
ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಸೂರಣ್ಣವರ ತೋಟದ ಚನ್ನದಾಸರ ಕೋಡಿ ಸಮುದಾಯದ ಜನ.
WhatsApp Group Join Now
Telegram Group Join Now

ರಾಯಬಾಗ :- ಹಿಡಕಲ್ಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಸೂರಣ್ಣವರ ತೋಟದ ದಾಸರ ಕಾಲೊನಿಯ ವಾರ್ಡ ನಂಬರ 5 ಮತ್ತು 6 ನೇಯ ವಾರ್ಡಿನಲ್ಲಿ ವಾಸವಾಗಿರುವ ಚನ್ನದಾಸರ ಸಮುದಾಯದ ಜನರು, ಇಲ್ಲಿ ಸುಮಾರು 1000 ರಿಂದ1500 ಜನರು ವಾಸವಾಗಿರುತ್ತಾರೆ.ಕೆಂದ್ರ ಹಾಗೂ ರಾಜ್ಯ ಸರ್ಕಾರ ಪ್ರತಿಯೊಂದು ಮನೆಗಳಿಗೆ ಶೌಚಾಲಯವನ್ನು ನಿರ್ಮಿಸಿದ್ದೆವೆ ಎಂದು ಗ್ರಾಮ ಪಂಚಾಯಿತಿಯವರು ಹೆಳುತ್ತಾರೆ.

ಆದರೆ ಕೇಂದ್ರ ಹಾಗೂ ರಾಜ್ಯ ಸರಕಾರ ದಿಂದ ಯಾವುದೆ ಮನೆ,ಶೌಚಾಲಯ ಕುಡಿಯುವ ನೀರು,ವಿದ್ಯುತ್ ಇನ್ನೂ ಹಲವು ಮೂಲಭೂತ ಸೌಲಭ್ಯ ದಿಂದ ನಾವು ವಂಚಿತರಾಗಿದ್ದೇವೆ ಎಂದು ಅಲ್ಲಿಯ ಜನರು ತಿಳಿಸಿದರು.ಈ ಕಾಲೋನಿಯಲ್ಲಿ ಗ್ರಾಮ ಪಂಚಾಯತಿ ವತಿಯಿಂದ ಎರಡು ಕೊಳವೆ ಬಾವಿ ಕೋರಸಿದ್ದರು ,ಇಲ್ಲಿಯವರಿಗೆ ಮಾತ್ರ ಕೂಡಿಯಲು ಒಂದು ಹನಿ ನಿರಿಲ್ಲ,

ನೀರಿಗಾಗಿ ಬೇರ ಬೇರೆ ಹೋಲಗದ್ದೆಗಳಿಗೆ‌ ಮೋರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿಯ ಸಾರ್ವಜನಿಕರು ತಮ್ಮ ಅಳಲನ್ನು ಹಂಚಿಕೊಂಡರು.ಕಾಲೊನಿಯಲ್ಲಿ ಎಲ್ಲಿ ನೋಡಿದರಲ್ಲಿ ಪತ್ರಾಸಿನ ಶೆಡ್ಡು ಮಾತ್ರ ಕಾಣುತ್ತಿವೆ.ತಮ್ಮ ಸ್ವಂತ ಜಾಗ ಆದಾರ ರೇಷನ ಕಾರ್ಡ ಹೊಂದಿದ್ದರು ಇನ್ನೂ ವರೆಗೆ ಇವರಿಗೆ ಸರಿಯಾದ ಸೂರಿಲ್ಲಾ,ನೀರಿಗಾಗಿ ಕೊಡಗಳನ್ನ ಹಿಡಿದು ನಿಂತ ಈ ಕಾಲೋನಿಯ ‌ಮಹೀಳೆಯರು,

ಇದಷ್ಟೆ ಅಲ್ಲಾ ಗ್ರಾಮದಲ್ಲಿ ಗ್ರಾಮ ಪಂಚಾಯತಿ ಸುಮಾರು ಜಲಕುಂಬಗಳು ನಿರ್ಮಿಸಿದ್ದಾರೆ ಆದರೆ‌ ಈ ಜಲ ಕುಂಬಗಳಲ್ಲಿ ಎಷ್ಟೋ ವರ್ಷಗಳೇ ಕಳೆದರು ಒಂದೇ ಒಂದು ಹನಿ ನೀರು ಬಂದಿಲ್ಲಾ ,ಪಂಚಾಯತಿಯಲ್ಲಿ ಬಿಲ್ಲನ್ನ ತಗೆದಿದ್ದಾರೆ ಎಂಬುವುದು‌ ಈ ಕಾಲೋನಿಯ ಜನರು ಆರೋಪ,

ಇನ್ನೂ ವಯೋವೃದ್ದ ಇಬ್ಬರ ದಂಪತಿಗಳ ಅನಾರೋಗ್ಯ ದಿಂದ ಬಳಲುತ್ತಿದ್ದು‌ ಇವರ ಗೋಳು ನೋಡಿದರೆ‌ ಎಂತವರ ಕರಳು‌ ಚುರುಕ್ಕ ಅನ್ನುತ್ತೆ,ಸ್ವಂತ ಜಾಗ ಇದ್ದರು ಇವರೆಗೆ ಮನೆ‌,ಶೌಚಾಲಯದ ‌ಸೌಲಭ್ಯವಿಲ್ಲಾ ಇವರು ಶೌಚಕ್ಕೆ ಹೋಗ ಬೇಕಾದರೆ ಎರಡು ಜನರು ಎತ್ತಿಕೊಂಡ ಹೋಗಬೇಕು.

ಈ‌ ಕಾಲೋನಿಯ ಪಂಚಾಯತಿ ಸದ್ಯರು ಇಲ್ಲಿ ಯಾವದೆ ಕೇಲಸ ಮಾಡಿಲ್ಲ ಎಂದು ನಾ‌ವು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕೇಳಿದರೆ ನೀಮ್ಮ ವಾರ್ಡಿನ ಸದಸ್ಯರು ನಮ್ಮ ವಾರ್ಡಿಗೆ ಬರುವುದಾದರೆ ನಮ್ಮನ ಕೇಳಿ ಬರಬೇಕು‌ ಎಂದು ಅಧಿಕಾರಿಗೆ‌ ಅವಾಜ ಹಾಕತಾರಂತೆ, ಇಷ್ಟೆಲ್ಲ ಮಾಹಿತಿಯನ್ನು ದಾಸರ ಕಾಲೋನಿ ಸಾರ್ವಜನಿಕರು ನಮ್ಮ ವಾಹಿನಿಯ ಮುಂದೆ ಮಾತನಾಡಿದ್ದು

ವರದಿ :-ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!