
ಚಡಚಣ : ಧುಮಕನಾಳ ಗ್ರಾಮದ ಊರಿನಿಂದ ಹೊರಗಡೆ ಹೋಗಬೇಕಾದರೆ ಎಲ್ಲಾ ಹಳ್ಳಿಗಳ ರಸ್ತೆಯು ತೆಗ್ಗು ಬಿದ್ದು ಹಾಳಾಗಿ ಹೋಗಿವೆ ಮಳೆಯಿಂದು ಕೂಡ ಜನರು ಎಲ್ಲರೂ ಕಂಗಲಾಗಿದ್ದಾರೆ ಇಂತಹ ಪರಿಸ್ಥಿತಿಯಲ್ಲಿ ಟಿಪ್ಪರ ಲಾರಿ ಬಸ್ಸು ಕಾರು ಓಡಾಡುವಂತ ಪರಿಸ್ಥಿತಿಯು ಕೂಡ ಇಲ್ಲ ದ್ವಿಚಕ್ರ ವಾಹನವನ್ನು ತೆಗೆದುಕೊಂಡು ಹೋಗಬೇಕಾದರೆ ಕೈಯಲ್ಲಿ ಜೀವ ಹಿಡಿದು ಹೋಗಬೇಕಾಗುತ್ತದೆ ಕಾರಣ ಮಳೆಯಿಂದಾಗಿ ಎಲ್ಲ ರಸ್ತೆಗಳು ತೆಗ್ಗು ದಿನ್ನಿ ರಸ್ತೆ ಮೇಲೆ ಸಂಪೂರ್ಣ ನೀರು ಹೀಗಾದರೆ ಈ ಗ್ರಾಮದ ಜನರು ಬೇರೆ ಊರಿಗೆ ಹೋಗುವುದಾದರೂ ಹೇಗೆ ಎಂದು ಪ್ರಶ್ನೆಯಾಗಿದೆ ? ಮತ್ತು ಧುಮುಕನಾಳ ದಿಂದ ಸಾತಲಗಾಂವ ಹೋಗುವ ರಸ್ತೆ ಸಂಪೂರ್ಣವಾಗಿ ಹದಗಟ್ಟು ಹೋಗಿದೆ ಮಳೆ ನೀರಿನಿಂದಾಗಿ ಸಿಡಿ ವರ್ಕ್ ಗಳು ಅದರೊಳಗಿನಾ ಪೈಪುಗಳನ್ನು ಒಡೆದು ಹೋಗಿವೆ ನೀರಿನ ರಭಸಕ್ಕೆ ರಸ್ತೆಗಳೆಲ್ಲ ಕೊಚ್ಚು ಹೋಗಿವೆ ಮತ್ತು ಡಂಪರ್ ಮತ್ತು ಟಿಪ್ಪರಗಳು ಹಾವಳಿಯಿಂದ ಸಂಪೂರ್ಣ ರಸ್ತೆ ಹೊಡೆದು ಹಾಳಾಗಿವೆ.

ಇಲ್ಲಿನ ಜನ ಸಾಮಾನ್ಯರಿಗೆ ಹಾಗೂ ವೃದ್ದರಿಗೆ ಚಿಕ್ಕ ಮಕ್ಕಳಿಗೆ ಹಾದು ಹೋಗಲು ಬಹಳಷ್ಟು ಸಮಸ್ಯೆಯಾಗಿದೆ, ಅದರಿಂದ ನಾವು ಮತ್ತು ಗ್ರಾಮಸ್ಥರು ಯುವಕರು ಎಲ್ರು ಸೇರಿ ರಸ್ತೆ ತಡೆ ನಡೆಸಿ ಬಂದ ಮಾಡಲಾಯಿತು ಇಲ್ಲಿವರೆಗೂ ಯಾವ ನಮ್ಮ ಶಾಸಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಸುಳೀವು ಇಲ್ಲ ದಯಮಾಡಿ ಶಾಸಕರು ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಕ್ಕೆ ಬಂದು ಇಂದಿನ ಪರಿಸ್ಥಿತಿ ಆಲಿಸಿ ಜನರಿಗೆ ಅನುಕೂಲ ಮಾಡಿಕೊಡುಬೇಕೆಂದು ಪತ್ರಿಕೆಯವರ ಮುಖಾಂತರ ಆಗ್ರಿಸುತಿದ್ದೇವೆ ಇಲ್ಲವಾದಲ್ಲಿ ಮುಂದೊಂದು ದಿನ ಉಗ್ರ ಹೋರಾಟ ಮಾಡುಲಾಗುವುದು ಎಂದು ಭೀಮನಗೌಡ ಪಾಟೀಲ್ ಚಡಚಣ ಮಂಡಲ ಬಿಜೆಪಿ ಮುಖಂಡ ಸಂದೇಶವನ್ನು ಕೊಟ್ಟರು.
ಈ ಸಂದರ್ಭದಲ್ಲಿ ರಸ್ತೆ ತಡೆ ನಡೆಸಿದವರು ಮಲ್ಲಿಕಾರ್ಜುನ ಘೊರಪಡೆ ಹಾಜೆಸಾಬ ಶೇಖ , ಮಂಜುನಾಥ ಪಾಟೀಲ್ ಮೈಬುಬ ಬಿದರಿ ಗೋಪಾಲ ಅಕ್ಕಲಕೋಟ ಶಿವಪುತ್ರ ಘೋರ್ಪಡೆ ಯೋಗೇಶ್ ಪಾಟೀಲ್ ಸಿದಗೋಂಡ ಪಾಟೀಲ್ ಮತ್ತು ಗ್ರಾಮದ ಜನರು ಉಪಸ್ಥಿತರಿದ್ದರು.
ವರದಿ: ಉಮಾಶಂಕರ ಕ್ಷತ್ರಿ




