Ad imageAd image

ನೀಲಿ ಸಾಗರದಂತೆ ಯಳಂದೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಸೇರಿದ ಜನಸಾಗರ

Bharath Vaibhav
ನೀಲಿ ಸಾಗರದಂತೆ ಯಳಂದೂರಿನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಗೆ ಸೇರಿದ ಜನಸಾಗರ
WhatsApp Group Join Now
Telegram Group Join Now

ಯಳಂದೂರು : ತಾಲ್ಲೂಕು ಅಂಬೇಡ್ಕರ್ ಜಯಂತಿ ಆಚರಣೆ ಸಮಿತಿ ವತಿಯಿಂದ. ವಿಶ್ವ ಜ್ಞಾನಿ, ಭಾರತದ ಸಂವಿಧಾನದ ಶಿಲ್ಪಿ ಡಾ.ಬಿ. ಆರ್ ಅಂಬೇಡ್ಕರ್ ರವರ 134 ನೇ ಜನ್ಮ ದಿನಾಚರಣೆ ಸಮಾರಂಭವನ್ನು ಶನಿವಾರ ನಡೆಸಲಾಯಿತು.

ಬೆಳಿಗ್ಗೆ 10ಗಂಟೆ ಯಿಂದ ತಾಲ್ಲೂಕು ಕಛೇರಿ ಮುಂಭಾಗ ಬೆಳ್ಳಿರಥದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರವನ್ನು ಇರಿಸಲಾಯಿತು ಜೊತೆಗೆ ಪ್ರತಿ ಗ್ರಾಮದಿಂದಲೂ ಅಂಬೇಡ್ಕರ್ ಬುದ್ದ ಬಸವ, ಕೋರೆಗಾಂವ್ ನೊಳಗೊಂಡ ಸ್ತಬ್ಧ ಚಿತ್ರಗಳು ಹಾಗೂ ಮಂಗಳವಾದ್ಯ, ವಿವಿಧ ಕಲಾತಂಡಗಳು ಆಗಿಮಿಸದವು.

ಮೆರವಣಿಗೆಯು ಮುಖ್ಯರಸ್ತೆಯ ಮುಖಾಂತರ ಎಸ್ ಬಿ ಐ ಸರ್ಕಲ್, ಹಾಗೂ ಬಳೇಪೇಟೆಯ ಅಂಬೇಡ್ಕರ್ ವೃತ್ತ,ತೆರಳಿ ವಾಲ್ಮೀಕಿ ವೃತದ ಮೂಲಕ ನಾಡುಮೇಗಲಮ್ಮ ದೇವಸ್ಥಾನದಿಂದ ಬಸ್ ನಿಲ್ದಾಣದವರಗೆ ಸಾಗಿ ನಂತರ ಅಂಬೇಡ್ಕರ್ ಭವನದಲ್ಲಿ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು.

ಡಿಜೆ ಸಾಂಗ್ಸ್ ಗೆ ಹೆಜ್ಜೆ:

ಸಾಗರದಂತೆ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸಿದರಿಂದ ಬಿ ಆರ್ ಹಿಲ್ಸ್ ರಸ್ತೆ, ಮುಖ್ಯ ರಸ್ತೆಗಳು ಟ್ರಾಫಿಕ್ ಜಾಮ್ ಉಂಟಾಯಿತು ವಾಹನಗಳು ಬೈಪಾಸ್ ಮೂಲಕ ತೆರಳಿದವು.

ಹುಡುಗರು ಯುವಕರು ಕುಣಿದು ಸಂಭ್ರಮಿಸಿದರು

ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಸಚಿವ ಎಚ್ ಸಿ ಮಹದೇವಪ್ಪ ರವರು ಉದ್ಘಾಟಿಸಿದರು.
ನಂಜುಂಡಪ್ಪವರದಿ ಪ್ರಕಾರ ಚಾಮರಾಜನಗರ ಹಿಂದುಳಿದಿದೆ ನಮ್ಮ ಗುರಿ ಈ ಭಾಗವನ್ನು ಅಭಿವೃದ್ಧಿ ಪಡಿಸಬೇಕೆಂದು ಮಹದೇಶ್ವರ ಬೆಟ್ಟದಲ್ಲಿ ಕ್ಯಾಬಿನೆಟ್ ಸಭೆ ನಡೆಸಲಾಗಿದೆ ಏಕೆಂದರೆ ಹೆಚ್ಚು ಅನುದಾನ ಈ ಭಾಗಕ್ಕೆ ಸಿಗಲಿ ಅಂತ.
ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡಬಾರದು. ಡಾ ಬಿ ಆರ್ ಅಂಬೇಡ್ಕರ್ ರವರ ತತ್ವ ಮತ್ತು ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಸಂವಿಧಾನವನ್ನು ಉಳಿಸಿ ಗೌರವಿಸಬೇಕಾಗಿದೆ. ಪ್ರಜಾಪ್ರಭುತ್ವದಿಂದ ಮಾತ್ರ ಸಮಾನತೆ ಸಾಧ್ಯ.
ಸಂವಿಧಾನ ಪರರ್ಮಸೆಗೆ ವಿರೋಧ ಮಾಡಲಾಗಿದೆ. ನಮ್ಮ ಸಂವಿಧಾನ ಮೌಲ್ಯಯತವಾಗಿದೆ.
ನಮಗೆಲ್ಲಾ ಪ್ರೇರಣೆ ಅಂಬೇಡ್ಕರ್ ರವರು . ಸಂವಿಧಾನ ಉಳುವಿಗೋಸ್ಕರ ಸಂವಿಧಾನ ಜಾಗೃತಿ ಕಾರ್ಯಕ್ರಮ ಹಾಗೂ ಶಾಲಾ ಕಾಲೇಜುಗಳಲ್ಲಿ ಪ್ರಸ್ತಾವನೆಯನ್ನು ಓದಿಸಲಾಗಿದೆ
ಜಿಲ್ಲಾ ಅಭಿವೃದ್ಧಿಗೆ ನಾನು ಸದಾ ಸಿದ್ದವೆಂದರು.

ಸಂಸದ ಸುನೀಲ್ ಬೋಸ್ ಮಾತನಾಡಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶಿಕ್ಷಣ ನೀಡುವುದಕ್ಕೆ ಒತ್ತು ನೀಡಿದರು. ಅಂಬೇಡ್ಕರ್ ರವರು ಬರೆದಿರುವ ಸಂವಿಧಾನವನ್ನು ನಾವು ಉಳಿಸಿ ಗೌರವಿಸಬೇಕಾಗಿದೆ. ಇಂದು ಇಂತಹ ಮಹಾನ್ ವ್ಯಕ್ತಿಗೆ ಕೆಲವು ಕಡೆ ಅಪಮಾನಮಾಡುತ್ತಿದ್ದಾರೆ. ಎಷ್ಟೇ ಅಪಮಾನ ಮಾಡಿದರು ಕೀರ್ತಿ ಕಡಿಮೆಯಾಗುವುದಿಲ್ಲ ಎಂದರು.

ಶಾಸಕ ಎ ಆರ್ ಕೃಷ್ಣಮೂರ್ತಿ ಉದ್ಘಾಟಿಸಿ ಮಾತನಾಡಿದರು.ಪರಿಶಿಷ್ಟ ಜಾತಿಯಲ್ಲಿ 101 ಜಾತಿಗಳಿವೆ ಇಲ್ಲಿ ಪೈಪೋಟಿ ಇದೆ ಆದಿ ಕರ್ನಾಟಕ, ಆದಿ ಆಂದ್ರ, ಆದಿ ದ್ರಾವಿಡ ಇದರಲ್ಲಿ ಉಪ ಜಾತಿಗಳನ್ನು ಹೊಲೆಯ ಮಾದಿಗ ಅಂತ ನೋಂದಾಯಿಸಬೇಕು ಇದರಿಂದ ಜಾತಿಗೆ ಅನುಗುಣವಾಗಿ ಸವಲತ್ತುಗಳು ಸಿಗುತ್ತವೆ ದಯವಿಟ್ಟು ಸಮೀಕ್ಷೆ ಗೆ ಸರಿಯಾಗಿ ಮಾಹಿತಿ ನೀಡಬೇಕು.
ನಮ್ಮ‌ಮನೆಗೆ ಸಮೀಕ್ಷೆ ಆಗಮಿಸಿದಾಗ ನಮ್ಮ ಆಧಾರ್ ಕಾರ್ಡ್ ನಂಬರ್ ನ್ನು ನೋಂದಾಯಿಸಿದಾಗ ನಿಮ್ಮ ಸಮೀಕ್ಷೆ ಈಗಾಗಲೇ ನೋಂದಣಿಯಾಗಿದೆ ಅಂದರು.
ಡಾ. ಬಿ ಆರ್ ಅಂಬೇಡ್ಕರ್ ರವರು ವ್ಯಕ್ತಿತ್ವವನ್ನು ಇಡೀ ಜಗತ್ತು ಗೌರವಿಸುತ್ತಾರೆ ಏಕೆಂದರೆ ಅವರು ಬಾಲ್ಯದಲ್ಲಿ ಅನುಭವಿಸಿದ ಶೋಷಣೆಯೇ ಅವರು ಎತ್ತರಕ್ಕೆ ಬೆಳೆಯುವುದಕ್ಕೆ ಕಾರಣವಾಯಿತು. ಶೋಷಣೆ ಮಾಡಿದವರ ವಿರುದ್ದ ಪ್ರತಿಕ್ರಿಯೆ ನೀಡದೆ ಬೆಳದು ಮಹಾನಾಯಕರಾದರು. ಇವರು ನೀಡಿದ ಬೃಹತ್ ಸಂವಿಧಾನದ ಫಲದಿಂದ ಭಾರತ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾದರಿಯಾಗಿದೆ. ಅನೇಕ ಭಾಷೆ, ಧರ್ಮ, ಜಾತಿ, ಸಂಸ್ಕ್ರತಿ ಹೊಂದಿರಿವ ಈ ರಾಷ್ಟ್ರಕ್ಕೆ ಸರ್ವರು ಸಮಾನರು ಎಂಬ ತತ್ವದಡಿ ಸಂವಿಧಾನವನ್ನು ನೀಡಿದರು. ತಲಾ ತಲಾಂತರ ಕಾಲದಿಂದಲೂ ಭಾರತದ ಸಾಮಾಜಿಕ ವ್ಯವಸ್ಥೆ ಜಿಡ್ಡುಗಟ್ಟಿತ್ತು ಇದನ್ನು ಅಂಬೇಡ್ಕರ್ ರವರು ಸಂವಿಧಾನದ ಮೂಲಕ ನಾಶ ಮಾಡಿದರು.

ಜ್ಞಾನಪ್ರಕಾಶ್ ಮಾತನಾಡಿ ನಮಗೆ ಧರ್ಮ ಮುಖ್ಯವಲ್ಲ ನಮಗೆ ದೇಶ ಮುಖ್ಯ ನಾವೆಲ್ಲರೂ ಸಮಾನತೆಯಿಂದ ಬದುಕಬೇಕು.
ಡಾ ಬಿ ಆರ್ ಅಂಬೇಡ್ಕರ್ ರವರ ಅಖಂಡ ಭಾರತವನ್ನು ಸಂವಿಧಾನದ ಮೂಲಕ ಕಟ್ಡಿದ್ದಾರೆ.
ನಾವೆಲ್ಲರೂ ಸಹೋದರರಂತೆ ಇರಬೇಕು ನಮಗೆ ಜಾತಿ, ಧರ್ಮ ಮುಖ್ಯವಲ್ಲ.
ಗುಲಾಮರಾಗಿ ಬದುಕಬಾರದು ಸ್ವಾಭಿಮಾನದಿಂದ ಬದುಕಿ ಎಂದು ಅಂಬೇಡ್ಕರ್ ತಿಳಿಸಿದರು.
ಸಮುದಾಯದ ಹಿತಕ್ಕೆ ಪಕ್ಷಬೇದ ಮಾಡಬಾರದು.
ಜಾಗೃತಿ ಮತ್ತು ಜ್ಞಾನಕ್ಕೆ ಆದ್ಯತೆ ನೀಡಬೇಕು.ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಡಬೇಕು.

ಶಾಸಕ ಎನ್ ಮಹೇಶ್ ಮಾತನಾಡಿ ಡಾ ಬಿ ಆರ್ ಅಂಬೇಡ್ಕರ್ ಜ್ಞಾನ ಸಂಕೇತದ ಹಂತಕ್ಕೆ ಹೋಗುವುದಕ್ಕೆ ಕಾರಣ ಅವರು ಜೀವನದಲ್ಲಿ ಅನುಭವಿಸಿದ ನೋವು. ವಿಶ್ವ ಸಂಸ್ಥೆ ಘೋಷಣೆ ಮಾಡಿದೆ ಅಂದರೆ ಅವರ ಮಹತ್ವವನ್ನು ನಾವು ಅರ್ಥಮಾಡಿಕೊಳ್ಳಬೇಕು.
ಸಮಸ್ಯೆ ಮತ್ತು ಪ್ರಶ್ನೆಗಳನ್ನು ಉತ್ತರಗಳನ್ನು ನೀಡುತ್ತಾ ಹೋದರು ಇವರೆ ನಮಗೆ ಪ್ರೇರಣೆ ಎಂದರು.

ವಿದ್ಯಾರ್ಥಿಗಳಿಗೆ ಸನ್ಮಾನ: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎನ್ ಮಹೇಶ್, ಜಿ ಎನ್ ನಂಜುಂಡಸ್ವಾಮಿ, ಪಪಂ ಅಧ್ಯಕ್ಷ ಲಕ್ಷ್ಮೀ, ದಲಿತ ಮುಖಂಡ ವಡೆಗೆರೆ ದಾಸ್, ಕಿನಕಹಳ್ಳಿರಾಚಯ್ಯ, ಹೊನ್ನೂರು ರೇವಣ್ಣ, ಜೆ ಯೋಗೇಶ್, ಸೇವಾ ಸಮಿತಿಯ ಪದಾಧಿಕಾರಿಗಳಾದ ಕೆಸ್ತೂರು ಸಿದ್ದರಾಜು, ಗುಂಬಳ್ಳಿ ಮಹದೇವ್, ಯರಿಯೂರು ರಾಜಣ್ಣ, ಯರಿಯೂರು ನಾಗೇಂದ್ರ, ಶ್ರೀನಿವಾಸ್ , ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಕಾಂತ್. ಡಾ ಶ್ರೀಧರ್, ಕಮಲ್ ನಾಗರಾಜು, ಸಾಹಿತಿ ಶಂಕನಪುರ ಮಹದೇವ್ ಹಾಗೂ ಅಂಬೇಡ್ಕರ್ ಸೇವಾ ಸಮಿತಿಯ ಎಲ್ಲಾ ಪದಾಧಿಕಾರಿಗಳು, ಎಲ್ಲಾ ಗ್ರಾಮದ ಯಜಮಾನರು, ಮುಖಂಡರು, ಯುವಕರು ಹಾಜರಿದ್ದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!