ಇಲಕಲ್:- ಕಳೆದ ತಿಂಗಳು ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ ಮುಗಿಸಿ ವಿದ್ಯಾರ್ಥಿಗಳು ಫಲಿತಾಂಶ ನಿರೀಕ್ಷೆಯಲ್ಲಿದ್ದರು, ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯವರು ಫಲಿತಾಂಶ ಬಿಡುಗಡೆ ಮಾಡಿದ್ದಾರೆ, ಅದರಲ್ಲಿ ವಿಶೇಷವೇನೆಂದರೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೆಳ್ಳಿಗೇರಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ 100 ಪ್ರತಿಶತ ಅಂದರೇ 625ಕ್ಕೆ 625 ಅಂಕ ಪಡೆದ ಅಂಕಿತಾ ಬಸಪ್ಪ ಕೊಣ್ಣೂರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ
ಹುನಗುಂದ ಮತ್ತು ಇಳಕಲ್ ಅವಳಿ ತಾಲೂಕಿನ ಫಲಿತಾಂಶ ಗಮನಿಸಿದರೆ ಇಲ್ಲಿಯೂ ಸಹ ಸರಕಾರಿ ಶಾಲೆಗಳ ಮೇಲುಗೈ ಎಂಬುದು ಗೊತ್ತಾಗುತ್ತದೆ. ಅಮಿನಗಡದ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ ವಿದ್ಯಾರ್ಥಿ ಕಾರ್ತಿಕ್ ರುದ್ರಗೌಡ ಬಡಗೌಡರ 98.12 ಪ್ರತಿಶತ 625 ಕ್ಕೆ 617 ಅಂಕ ಪಡೆದು ಅವಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದರೆ
ನಗುಂದದ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳಾದ ವಿಸ್ಮತ ಬೇನಾಳ 616 ಅಂಕ ಪಡೆದು ದ್ವಿತೀಯ,
ಪೂರ್ಣಿಮಾ ಮಹದೇವ ಕಾಂಬಳೆ 615 ಅಂಕ ಪಡೆದು
ತೃತೀಯ ಸ್ಥಾನ ಪಡೆದಿದ್ದಾರೆ, ಹಾಗೆಯೇ ಇಳಕಲ್ ನಗರದ ಶಿದ್ದಾರ್ಥ ಪ್ರೌಢ ಶಾಲೆಯ ವಿದ್ಯಾರ್ಥಿಗಳು ವಿದ್ಯಾ ಎಸ್ ವಂದಾಲ್ 614 ಅಂಕ ಮತ್ತು ದೀಪ್ತಿ ಎಸ್ ವಂದಾಲ್ 613
ಅಂಕ ಪಡೆದು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನ ಪಡೆದಿದ್ದಾರೆ
ನಮ್ಮ ಜನತಾಧ್ವನಿ ಪರವಾಗಿ ಈ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾಭ್ಯಾಸ ನೀಡಿದ ಎಲ್ಲಾ ಶಿಕ್ಷಕರಿಗೆ ಹಾಗೂ ಪೋಷಕರಿಗೆ ವಿಶೇಷವಾಗಿ ಅಭಿನಂದನೆಗಳು ತಿಳಿಸುತ್ತೇವೆ, ಹಾಗೆಯೇ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಾಸದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ತಿಳಿಸುತ್ತೇವೆ, ಫೇಲಾದ ವಿದ್ಯಾರ್ಥಿಗಳಿಗೆ ಒಂದು ಕಿವಿಮಾತು ಪಾಸಾದವರು ನೌಕರಿ ಮಾಡಿದರೆ ಫೇಲಾದವರು ಸಾಧನೆ ಮಾಡತ್ತಾರೆ ಎದೆಗುಂಡದೆ ಸಾಧನೆ ಮಾಡುವವರಲ್ಲಿ ನೀವು ಒಬ್ಬಾರಾಗಿ, ನಿಮ್ಮ ಹೆತ್ತವರು ನಿಮಗಾಗಿ ಹಗಲಿರುಳು ಶ್ರಮಿಸಿದ್ದಾರೆ ನೀವು ಪಾಸಾಗಲಿ ಫೇಲಾಗಲಿ ಜೀವನದಲ್ಲಿ ಸಾಧನೆ ಮಾಡಿ ನಿಮ್ಮ ತಂದೆ ತಾಯಿಗೆ ಆಸರೆಯಾಗಿ ಎಂದು ಹೇಳುತ್ತಾ ಮತ್ತೆ ಸಿಗೋಣ ನಮಸ್ಕಾರ,
ವರದಿ ದಾವಲ್ ಶೇಡಂ