ಸೇಡಂ: ಪಿ, ಎಸ್, ಐ ಮಂಜುನಾಥರೆಡ್ಡಿಯವರು ಇತ್ತೀಚೆಗೆ ಆಟೋಚಾಲಕ ಪ್ರಾಮಾಣಿಕತೆಯಿಂದ ಪೋಲಿಸ್ ಠಾಣೆಗೆ ನೀಡಿದ ಉಂಗುರವನ್ನು ಸಂಬಂಧಪಟ್ಟವರಿಗೆ ಮರಳಿಸಲಾಗಿದೆ ಎಂದು ಸತ್ಯ ಯುಗ ಫೌಂಡೇಷನ್ ಗೆ ಖಚಿತಪಡಿಸಿದರು.
ಇತ್ತೀಚೆಗೆ ಸತ್ಯ ಯುಗ ಫೌಂಡೇಷನ್ ವತಿಯಿಂದ ಬೆಲೆಬಾಳುವ ಉಂಗುರ ಮರಳಿಸಿದ ಪ್ರಾಮಾಣಿಕ ಆಟೋ ಚಾಲಕನಿಗೆ ಸತ್ಯ ಯುಗಕ್ಕೆ ಯೋಗ್ಯ ಸಾಧಕ ಪ್ರಶಸ್ತಿ ಘೋಷಣೆ ಮಾಡಿದಾಗ, ಉಂಗುರ ಕಳೆದುಕೊಂಡವರಿಗೆ ಉಂಗುರ ಮರಳಿ ತಲುಪುವುದು ಸಹ ಅಷ್ಟೆ ಮುಖ್ಯ ಎನ್ನುವ ಅಭಿಪ್ರಾಯ ಸಾರ್ವಜನಿಕರಿಂದ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಸತ್ಯ ಯುಗ ಫೌಂಡೇಷನ್ ವತಿಯಿಂದ ಸೇಡಂ ಪಿ, ಎಸ್, ಐ ಮಂಜುನಾಥರೆಡ್ಡಿಯವರನ್ನು ಸಂಪರ್ಕಿಸಿದಾಗ, ಬಂಗಾರದ ಅಂಗಡಿಯ ಸಿಸಿ ಟಿವಿಯನ್ನು ಪರಿಶೀಲಿಸಿ ಸಂಬಂಧಿಸಿದವರಿಗೆ ಬಂಗಾರದ ಉಂಗುರ ಮರಳಿಸಲಾಗಿದೆ, ಎಂದು ಖಚಿತಪಡಿಸಿದಷ್ಟೆಯಲ್ಲದೆ ಉಂಗುರ ಮರಳಿಸಿದ ಛಾಯಾಚಿತ್ರವನ್ನು ಸಹ ಒದಗಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ವಿಷಯ ತಲುಪಿಸುವ ಟ್ರಸ್ಟ್ ಕೋರಿಕೆಗೆ ಉತ್ತಮವಾಗಿ ಸ್ಪಂದಿಸಿ ಸಹಕರಿಸಿದ ಪಿ, ಎಸ್. ಐ ಯವರಿಗೆ ಸತ್ಯ ಯುಗ ಫೌಂಡೇಷನ್ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಸೂರ್ಯನಾರಾಯಣ ಜಿ. ಚಿಮ್ಮನಚೋಡಕರ್ ಕಾರ್ಯದರ್ಶಿಗಳು ಸತ್ಯ ಯುಗ ಫೌಂಡೇಷನ್ ಬೈ ಯುರೇನ್ ನಮಃ ಟ್ರಸ್ಟ್ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್