ಧಾರವಾಡ: ಶಹರ ಪೊಲೀಸ ಠಾಣೆ ವ್ಯಾಪ್ತಿಯ ಲೈನ ಬಜಾರದಲ್ಲಿರುವ ಶ್ರೀ ಶೀತಲನಾಥ ಜೈನ ಮಂದಿರದಲ್ಲಿ ದಿನಾಂಕ 19 01 2026 20 01 2026 ರ ಬೆಳಿಗ್ಗೆ 05-00 ಗಂಟೆಗೆ ಕೀಲಿ ಹಾಕಿಕೊಂಡು ಹೋದ ವೇಳೆಯಲ್ಲಿ ಮಂದಿರದ ಬಾಗಿಲಿನ ಕೀಲಿ ಕೊಂಡಿಯನ್ನು ಮೀಟಿ ಮುರಿದು ಒಳಗೆ ಪ್ರವೇಶಿಸಿ ನಂತರ ಕಾಣಿಕೆ ಪೆಟ್ಟಿಗೆಯ ಕೀಲಿಗಳನ್ನು ಮೀಟಿ ಮುರಿದು ಅದರಲ್ಲಿಯ ನಗದು ಹಣ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪ್ರಕರಣ ದಾಖಲಾಗಿದ್ದು.

ಪ್ರಕರಣ ಆರೋಪಿಯನ್ನು ಪತ್ತೆ ಹಚ್ಚಲು ಮಾನ್ಯ ಎನ್ ಶಶಿಕುಮಾರ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ಹಾಗೂ ಮಾನ್ಯ ಮಾಹಾನಿಂಗ ನಂದಾಗಾವಿ ಡಿಸಿಪಿ ಕಾವಸು ಹುಬ್ಬಳ್ಳಿ-ಧಾರವಾಡ ಮತ್ತು ಮಾನ್ಯ ಶ್ರೀ ರವೀಶ್ ಸಿ ಆರ್ ಡಿಸಿಪಿ ಅವಸಂ ಹುಬ್ಬಳ್ಳಿ-ಧಾರವಾಡ ಪ್ರಶಾಂತ ಸಿದ್ದನಗೌಡ್ರ ಸಹಾಯಕ ಪೊಲೀಸ ಆಯುಕ್ತರು ಧಾರವಾಡ ಶಹರ ಉಪವಿಭಾಗ ರವರ ಮಾರ್ಗದರ್ಶನದಲ್ಲಿ ಧಾರವಾಡ ಶಹರ ಪೊಲೀಸ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ ರವರಾದ ಗುರುನಾಥ ಚವ್ಹಾಣ ವಿನೋದ್ ಡಿ ಪಿ ಎಸ್ ಐ ಕಾವಸು ಆರ್ ಹೆಚ್ ನಧಾಪ ಪಿ ಎಸ್ ಐ ಅವಿ ಸುನೀಲ ಎಮ್ ಪಿಎಸ್‌ಐ ತಾಂತ್ರಿಕ ವಿಭಾಗ ರವರ ನೇತೃತ್ವದಲ್ಲಿ ಸಿಬ್ಬಂದಿ ಜನರಾದ ಐ ಪಿ ಬುರ್ಜಿ ಆರ್ ಎಸ್ ಪಾಟೀಲ ಡಿ ಕೆ ನದಾಪ್ ಪಿ.ಎಸ್ ತಿರ್ಲಾಪೂರ ಸಂತೋಷ ಪೂಜಾರ ಜಿ.ಎಮ್ ಕೊಪ್ಪದ ಬಿ ಎಲ್ ಹನಮಣ್ಣವರ ಎಮ್ ಆರ್ ಜ್ಯಾಲಿ ಮತ್ತು ತಾಂತ್ರಿಕ ವಿಭಾಗ ಎಮ್ ಎಸ್ ಚಿಕ್ಕಮಠ ಆರ್ ಕೆ ಭಡಂಕರ ಹಾಗೂ ಆರ್ ಎಸ್ ಗೋಮಪ್ಪನವರ ರವರನ್ನು ಒಳಗೊಂಡ ತಂಡವು ಬೆಳಗಾವಿ ಜಿಲ್ಲೆಯ ಹುಣಸಿಕಟ್ಟಿ ನಿವಾಸಿ ಮಲ್ಲಪ್ಪ ಮಲ್ಲೇಶ ಅಕಮಡ್ಡಿ 31 ವರ್ಷ ಎಂಬ ಅಂತರ ಜಿಲ್ಲಾ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಯಿಂದ 1565 ಗ್ರಾಂ ತೂಕದ ಬೆಳ್ಳಿಯ ಆಭರಣಗಳು ಹಾಗೂ ₹30,274 ನಗದು ಸೇರಿ ಒಟ್ಟು ₹3,40,474 ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವರದಿ: ವಿನಾಯಕ ಗುಡ್ಡದಕೇರಿ




