ನಿಪ್ಪಾಣಿ : ಬೆಳಗಾವಿಯಲ್ಲಿ ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಹಾಗೂ ಪೋಕ್ಸೋ ಪ್ರಕರಣ ದಾಖಲಿಸಿರುವುದನ್ನು ಹಿಂದಕ್ಕೆ ಪಡೆಯುವಂತೆ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಿಪ್ಪಾಣಿ ತಹಶೀಲ್ದಾರ್ ರ ಮೂಲಕ ಮನವಿಯನ್ನು ಸಂಜಯ ಪಾಟೀಲ,ನವ ಕರ್ನಾಟಕ ಯುವಶಕ್ತಿ (ನೋಂ) ಸಂಘಟನೆ ಜಿಲ್ಲಾಧ್ಯಕ್ಷರು ಬೆಳಗಾವಿ, ಹಾಗೂ ಆನಂದ ಜೋಮಾ, ನಿಪ್ಪಾಣಿ ತಾಲೂಕಾ ಅಧ್ಯಕ್ಷರು ,ಇವರ ನೇತೃತ್ವದಲ್ಲಿ ಕನ್ನಡ ಪರ ಹೋರಾಟಗಾರ ರಿಂದ ಮೊನ್ನೆ ಬೆಳಗಾವಿಯಲ್ಲಿ ಬಸ್ಸನಲ್ಲಿ ಪ್ರಯಾಣಿಸುತ್ತಿದ್ದು ಯುವಕ ಮತ್ತು ಯುವತಿ ಇವರಿಗೆ ಆಧಾರ್ ಕಾರ್ಡ್ ತೋರಿಸಿ ಹಾಗೂ ಟಿಕೆಟನ್ನು ಪಡೆಯಲು ಕನ್ನಡ ಭಾಷೆಯಲ್ಲಿ ತಿಳಿಸಿದರೆಂದು ಅವರು ಬಸ್ ಕಂಡಕ್ಟರ್ ಗೆ ಅಂದರೆ ಮಹಾದೇವ ಹುಕ್ಕೇರಿ ನಿರ್ವಾಹಕರ ಮೇಲೆ ಮರಾಠಿ ಬಾಷೆ ಮಾತನಾಡುವ ಗುಂಪೊಂದು ಆಗಮಿಸಿದ ಕನ್ನಡ-ಮರಾಠಿ ಭಾಷೆಯಲ್ ಖ್ಯಾತಿ (ಕಾರಣ) ತೆಗೆದು ಹಲ್ಲೆ ಮಾಡಿದವರನ್ನು ಖಂಡಿಸಿ ಅವರಿಗೆ ಕಠಿಣ ಕಾನೂನ ಶಿಕ್ಷೆಯನ್ನು ನೀಡಬೇಕೆಂದು ಹಾಗೂ ಬಸ್ ಕಂಡಕ್ಷರ್ ಮೇಲೆ ಬೆಳಗಾವಿಯಲ್ಲಿ ಪ್ರೋಕೋ ಪ್ರಕರಣವನ್ನು ಯಾವುದೇ ಸಾಕ್ಷ್ಯ ಕಾರಣಗಳಿಲ್ಲಿದೆ ಸುಮ್ಮ ಸುಮ್ಮನೆ ಪೋಲೀಸರು ದಾಖಲಿಸಿರುತ್ತಾರೆ.

ಪೋಕ್ಸೋ ಕೇಸ್‌ನ್ನು ಈ ಕೂಡಲೇ ಹಿಂದಕ್ಕೆ ಪಡೆಯುವಂತೆ ಸಂಘಟನೆಯಾದ ನವ ಕರ್ನಾಟಕ ಯುವಶಕ್ತಿ ಸಂಘಟನೆ (ನೋಂ), ಜಯ ಕರ್ನಾಟಕ ಸಂಘಟನೆಯ ವತಿಯಿಂದ ಹಾಗೂ ಕನ್ನಡಿಗರು ಹಾಗೂ ಸಾರ್ವಜನಿಕರ ಪರವಾಗಿ ಮಾನ್ಯ ರಾಜ್ಯಪಾಲರು ಕರ್ನಾಟಕ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕದ ಸರ್ಕಾರ ಇವರಿಗೆ ನ್ಯಾಯವನ್ನು ದೊರಕಿಸಿಕೊಡಬೇಕೆಂದು ನಿಪ್ಪಾಣಿ ತಹಶೀಲ್ದಾರ್ ಮುಜಫರ್ ಬಳಿಗಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ನವ ಕರ್ನಾಟಕ ಯುವ ಶಕ್ತಿ ಸಂಘಟನೆ ಬೆಳಗಾವಿ ಜಿಲ್ಲಾ ಅಧ್ಯಕ್ಷರು ಸಂಜಯ ಪಾಟೀಲ,ನಿಪ್ಪಾಣಿ ತಾಲೂಕಾ ಅಧ್ಯಕ್ಷರು ಆನಂದ ಜೋಮಾ, ರಾಜು ಬಾಳಿಕನವರ ನಿಪ್ಪಾಣಿ ತಾಲೂಕಾ ಕಾರ್ಯಧ್ಯಕ್ಸರು, ಜಯ ಕರ್ನಾಟಕ ಸಂಘಟನೆಯ ನಿಪ್ಪಾಣಿ ತಾಲ್ಲೂಕಾ ಅದ್ಯಕ್ಷರು ವಿಠ್ಠಲ ದಾವಳೇ,ರಾಹುಲ ವಾಳಕೆ, ಮಹಾದೇವ ಚಚಡಿ ನಿಪ್ಪಾಣಿ ಶಹರ ಅಧ್ಯಕ್ಷರು,ಬಸ್ಸು ಸಾಜನೆ,ಚಿಕ್ಕೋಡಿ ತಾಲೂಕು ಅಧ್ಯಕ್ಷರು ಶ್ರೀನಾಥ್ ಘಟ್ಟಿ,ಅಮೋಲ ನವಲೆ,ದುಂಡಪ್ಪ ಗುರವ,ಋಷಿ ಶಿಂತ್ರ,ಸಾಹಿಲ್ ಮುಲ್ತಾನಿ,ಸೇರಿದಂತೆ ಕನ್ನಡಪರ ಹೋರಾಟಗಾರರು,ಮತ್ತು ಮಹಿಳೆಯರು, ಕಾರ್ಯಕರ್ತರು, ಉಪಸ್ಥಿತರಿದ್ದರು.
ವರದಿ : ರಾಜು ಮುಂಡೆ




