Ad imageAd image

ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸೇವೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿ

Bharath Vaibhav
ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸೇವೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿ
WhatsApp Group Join Now
Telegram Group Join Now

ಚಾಮರಾಜನಗರ :- ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸೇವೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ಗರ್ಭಿಣಿ ಮಹಿಳೆಯನ್ನ ಸಾಮಾಜಿಕ ಕಾರ್ಯಕರ್ತ ರಾಜು ಎಂಬುವವರು ತಮ್ಮ ಸ್ವಂತ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಮಾನವೀಯತೆ ಮೆರೆದಿದ್ದಾರೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಪೊನ್ನಾಚಿ ಸಮೀಪದ ರಾಮೇಗೌಡನಹಳ್ಳಿಯ ಜಡೆಸಿದ್ದಮ್ಮ ಎಂಬ ಗರ್ಭಿಣಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ, ಪತಿ ಆಂಬುಲೆನ್ಸ್ ಗೆ ಕರೆ ಮಾಡಿದ್ರೆ ಬರಲು ಒಂದು ತಾಸು ಆಗುತ್ತದೆ ಎಂಬ ಹೇಳಿಕೆಯಿಂದ ಗಾಬರಿಯಾಗಿದ್ದಾರೆ.

ತಕ್ಷಣವೇ ವಿಚಾರ ತಿಳಿಯುತ್ತಿದ್ದಂತೆ ಸಾಮಾಜಿಕ ಕಾರ್ಯಕರ್ತ ರಾಜು ಎಂಬುವವರು ತಮ್ಮ ಸ್ವಂತ ವಾಹನದಲ್ಲೇ ಮಹಿಳೆಯನ್ನ ಆಸ್ಪತ್ರೆಗೆ ಕರೆದೊಯ್ದು ಸಹಾಯ ಮಾಡಿದ್ದಾರೆ. ಪೊನ್ನಾಚಿಯು ಕುಗ್ರಾಮವಾಗಿದ್ದು ಇಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರು ಸಹ ಸಿಬ್ಬಂದಿಗಳಿಲ್ಲದೆ ಈ ರೀತಿಯಾಗಿ ಸಮಸ್ಯೆಗಳನ್ನ ಜನರು ಎದುರಿಸುತ್ತಿದ್ದಾರೆ , ಕೂಡಲೇ ಜಿಲ್ಲಾಡಳಿತ ಆಸ್ಪತ್ರೆಗೆ ಸಿಬ್ಬಂದಿ ಮತ್ತು ವೈದ್ಯರನ್ನ ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!