ಬೆಂಗಳೂರು : ಕಳೆದ ಕೆಲವು ದಿನಗಳಿಂದ ಸತತವಾಗಿ ಕುಸಿಯುತ್ತಿದ್ದ ಚಿನ್ನದ ಬೆಲೆಯಲ್ಲಿ ಇಂದು ಅನಿರೀಕ್ಷಿತ ಚೇತರಿಕೆ ಕಂಡುಬಂದಿದೆ.
ಮಾರ್ಚ್ ಆರಂಭದಿಂದ ಈವರೆಗೆ ಸುಮಾರು ಶೇ. 12 ರಿಂದ 17 ರಷ್ಟು ಕುಸಿದಿದ್ದ ಚಿನ್ನ ಮತ್ತು ಬೆಳ್ಳಿ ದರಗಳು, ಇಂದು ಹೂಡಿಕೆದಾರರಿಗೆ ಕೊಂಚ ಸಮಾಧಾನ ತಂದಿವೆ.
ಇರಾನ್ ಮೇಲಿನ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಸುಳಿವು ಮಾರುಕಟ್ಟೆಯಲ್ಲಿ ಧನಾತ್ಮಕ ಬದಲಾವಣೆಗೆ ಕಾರಣವಾಗಿದೆ.
10 ಗ್ರಾಂ ಚಿನ್ನದ ದರ: ಇಂದು ಒಂದೇ ದಿನದಲ್ಲಿ 3,760 ರೂ. ಏರಿಕೆಯಾಗಿದ್ದು, ಒಟ್ಟು ಬೆಲೆ 1,46,670 ರೂಪಾಯಿಗೆ ತಲುಪಿದೆ.
1 ಗ್ರಾಂ ಚಿನ್ನದ ದರ: ಪ್ರತಿ ಗ್ರಾಂ ಚಿನ್ನದ ಮೇಲೆ 376 ರೂ. ಏರಿಕೆಯಾಗಿದ್ದು, ಇಂದಿನ ದರ 14,667 ರೂಪಾಯಿ ದಾಖಲಾಗಿದೆ.
ಇಂದಿನ ಚಿನ್ನದ ದರ (ಮಾರ್ಚ್ 25, 2026):
ಭಾರತೀಯ ಮಾರುಕಟ್ಟೆಯಲ್ಲಿ ಇಂದಿನ ಬೆಲೆ ವಿವರಗಳು ಹೀಗಿವೆ:
24 ಕ್ಯಾರೆಟ್ ಚಿನ್ನ (ಶುದ್ಧ ಬಂಗಾರ): ಪ್ರತಿ ಗ್ರಾಂಗೆ ₹14,667 (ನಿನ್ನೆಗಿಂತ ₹376 ಏರಿಕೆ).
22 ಕ್ಯಾರೆಟ್ ಚಿನ್ನ (ಆಭರಣ ಬಂಗಾರ): ಪ್ರತಿ ಗ್ರಾಂಗೆ ₹13,445 (ನಿನ್ನೆಗಿಂತ ₹345 ಏರಿಕೆ).
18 ಕ್ಯಾರೆಟ್ ಚಿನ್ನ: ಪ್ರತಿ ಗ್ರಾಂಗೆ ₹11,001 (ನಿನ್ನೆಗಿಂತ ₹282 ಏರಿಕೆ).
ಬೆಳ್ಳಿ ಬೆಲೆಯೂ ಜಿಗಿತ
ಚಿನ್ನದ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ಬೆಲೆಯೂ ಇಂದು ಗಣನೀಯವಾಗಿ ಏರಿಕೆಯಾಗಿದೆ. ಇಂದು ಬೆಳ್ಳಿ ಪ್ರತಿ ಕೆಜಿಗೆ ₹2,36,338 ಕ್ಕೆ ತಲುಪಿದ್ದು, ಒಂದೇ ದಿನದಲ್ಲಿ ₹11,881 ರಷ್ಟು ಭಾರಿ ಜಿಗಿತ ಕಂಡಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಮತ್ತು ಹೂಡಿಕೆದಾರರ ಬೇಡಿಕೆ ಹೆಚ್ಚಾಗಿರುವುದು ಈ ಬೆಲೆ ಏರಿಕೆಗೆ ಪ್ರಮುಖ ಕಾರಣ ಎನ್ನಲಾಗಿದೆ.
ಕಳೆದ ಕೆಲವು ವಾರಗಳಿಂದ ಕುಸಿತ ಕಂಡಿದ್ದ ಚಿನ್ನದ ದರವು ಈಗ ಪ್ರಬಲ ಚೇತರಿಕೆಯ ಹಾದಿಯಲ್ಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.




