ನವದೆಹಲಿ: 2021 ರಿಂದ 2025ರ ಅವಧಿಯಲ್ಲಿ ಪ್ರಧಾನಿ ಮೋದಿ ಕೈಗೊಂಡಿದ್ದ ವಿದೇಶ ಪ್ರವಾಸಗಳಿಗೆ 362 ಕೋಟಿ ರೂಪಾಯಿ ಖರ್ಚಾಗಿದೆ.
2025ರಲ್ಲಿ ಅಮೆರಿಕ, ಫ್ರಾನ್ಸ್ ಸೇರಿ 5 ದೇಶಗಳ ಭೇಟಿಗೆ ಒಂದೇ ವರ್ಷದಲ್ಲಿ 67 ಕೋಟಿ ರೂಪಾಯಿ ಖರ್ಚು ಆಗಿದೆ ಎಂದು ಕೇಂದ್ರ ಸರ್ಕಾರ ರಾಜ್ಯ ಸಭೆಗೆ ಮಾಹಿತಿ ನೀಡಿದೆ.
ರಾಜ್ಯಸಭೆ ಕಲಾಪದಲ್ಲಿ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯ ಸಚಿವ ಕೀರ್ತಿವರ್ಧನ್ ಸಿಂಗ್ , 2025 ರಲ್ಲಿ ಮೋದಿ ಅತಿ ದುಬಾರಿ ಪ್ರವಾಸವೆಂದರೆ ಫ್ರಾನ್ಸ್ ಭೇಟಿ. ಫ್ರಾನ್ಸ್ ಪ್ರವಾಸಕ್ಕೆ 25 ಕೋಟಿ ರೂಪಾಯಿ ಖರ್ಚಾಗಿದೆ.
ಅಮೆರಿಕ ಭೇಟಿಗೆ 16 ಕೋಟಿ ರೂ. ಖರ್ಚಾಗಿದೆ. ಮಾರಿಷಸ್, ಸೈಪ್ರೆಸ್, ಕೆನಡಾ ಪ್ರವಾಸದ ಲೆಕ್ಕ ಇನ್ನೂ ಬಾಕಿ ಇದೆ ಎಂದು ಹೇಳಿದ್ದಾರೆ.




