Ad imageAd image
- Advertisement -  - Advertisement -  - Advertisement - 

ಕಲುಷಿತ ನೀರು ರಸ್ತೆ ಮೇಲೆ : 06 ನೇ ವಾರ್ಡ್‌ನ ಜನರ ಸಮಸ್ಯೆ ಕೇಳ್ಳೋರಿಲ್ಲ!

Bharath Vaibhav
ಕಲುಷಿತ ನೀರು ರಸ್ತೆ ಮೇಲೆ : 06 ನೇ ವಾರ್ಡ್‌ನ ಜನರ ಸಮಸ್ಯೆ ಕೇಳ್ಳೋರಿಲ್ಲ!
WhatsApp Group Join Now
Telegram Group Join Now

ಮುದಗಲ್ಲ :- ಮಸ್ತಿ ಪೇಟೆಯ ವಾರ್ಡ್‌ನಂಬರ್ :-06 ಜನರ ಸಮಸ್ಯೆ ಕೇಳ್ಳೋರಿಲ್ಲ ತಿಂಗಳಿನಿಂದ ರಸ್ತೆ ಬದಿಯ ತ್ಯಾಜ್ಯ ಹಾಗೂ ಮಣ್ಣು ತುಂಬಿಕೊಂಡಿದ್ದು ಕಲುಷಿತ ನೀರು ರಸ್ತೆ ಮೇಲೆ ಹರಿಯುತ್ತಿದೆ. ಚರಂಡಿ ಇಲ್ಲದೇ ನೀರು ನಿಂತಲ್ಲೇ ನಿಂತಿ ರುವುದರಿಂದ ಕಸವು ಸೇರಿ ಕೊಳೆಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ.ಸುತ್ತಮುತ್ತಲಿನ ಮನೆಗಳ ವೃದ್ಧರು ಹಾಗೂ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿ ನಿರ್ಮಾಣ ವಾಗುವಂತಿದೆ.

ಇದಕ್ಕೆ ಪುರಸಭೆ ಅಧಿಕಾರಿಗಳು ಹಾಗೂ ಪಟ್ಟಣ ಪುರಸಭೆ ಸದಸ್ಯರ ಬೇಜವಾಬ್ದಾರಿತನವೇ ಕಾರಣ ಎಂದು 06ನೇ ವಾರ್ಡಿನ ನಿವಾಸಿ ಗಳು ಹಾಗೂ ಮಾನವ ಬಂಧತ್ವ ವೇದಿಕೆ ಮುದಗಲ್ಲ ಘಟಕ ಅಧ್ಯಕ್ಷರು ದೂರಿದ್ದಾರೆ. ಹಾಗೂ ಅದಷ್ಟು ಬೇಗನೆ ಸ್ವತ್ಛತೆಗೆ ಮುಂದಾಗುವಂತೆ ಒತ್ತಾಯಿಸಿದ್ದಾರೆ.

ಸಾಂಕ್ರಾಮಿಕ ರೋಗ ಭೀತಿ: ನಿತ್ಯ ಇದೇ ರಸ್ತೆ ಮೇಲೆ ಪಟ್ಟಣದ ಸದಸ್ಯರು ಓಡಾಡುತ್ತಾರೆ. ಆದರೆ ಅವರಿಗೆ ಈ ಸಮಸ್ಯೆಯನ್ನು ಬಗೆಹರಿಸುವ ಮನಸ್ಸಿಲ್ಲದಾಗಿದೆ.ಸಿಸಿ ನಿರ್ಮಾಣ ಮಾಡಿದ್ದರೂ ಚರಂಡಿ ವ್ಯವಸ್ಥೆ ಇಲ್ಲ ಸರಿಯಾದ ನಿರ್ವಹಣೆ ಇಲ್ಲದೇ ಕಲುಷಿತ ನೀರು ಸೇರಿ ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದಾಗಿ ಸ್ಥಳೀಯರಲ್ಲಿ ಸಾಂಕ್ರಾಮಿಕ ರೋಗ ಹರಡುವ ಭೀತಿ ಸೃಷ್ಟಿಸಿದೆ. ಪುರಸಭೆ ಅಧಿಕಾರಿಗಳು ಸ್ವತ್ಛತಾ ಕಾರ್ಯ ಮಾಡಿಲ್ಲ. ಔಷಧ ಸಿಂಪಡಿಸಿಲ್ಲ. ಚರಂಡಿ ಕೊಳಚೆ ನೀರಿನಿಂದಾಗಿ ಸೊಳ್ಳೆಗಳ ಕಾಟ ವಿಪರೀತವಾಗಿದೆ.

ದುರ್ವಾಸನೆ ಬೀರುತ್ತಿದ್ದು, ನಿವಾಸಿಗಳು ತೊಂದರೆ ಪಡುವಂತಾಗಿದೆ. ತಿಂಗಳು ಕಳೆದರೂ ಸ್ವತ್ಛಗೊಳ್ಳದ ಚರಂಡಿಗಳಿಂದ ರೋಗ ಭೀತಿ ಎದುರಾಗಿದೆ. ಇದರಿಂದಾಗಿ ನಿವಾಸಿಗಳು ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.ಈ ಸಂದರ್ಭದಲ್ಲಿ,ಹುಲಗಮ್ಮ ,ರಾಮಣ್ಣ ಮಾರುತಿ, ರವಿ ,ದ್ರವ, ಕುಶಲಾ, ದುರಗಪ್ಪ, ಬಸವರಾಜ ದೊಡ್ಡಮನಿ, ಮೌನೇಶ, ಹಾಗೂ ಮಾನವ ಬಂಧತ್ವ ವೇದಿಕೆ ಮುದಗಲ್ಲ ಘಟಕ ಅಧ್ಯಕ್ಷ ರಾದ
ಸಂಜುಕುಮಾರ, ಆರೋಪಿದ್ದಾರೆ

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!