ಹಾವೇರಿ: ಕಳೆದ ಆರು ತಿಂಗಳಿನಿಂದ ಬ್ಯಾಡಗಿ ಪಟ್ಟಣದ ಅನೇಕ ಕಾಲೊನಿಗಳಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಹಾಡಹಗಲಿನಲ್ಲಿಯೂ ಕೋಟ್ಯಂತರ ರೂ ದೋಚಿದ ಘಟನೆಗಳು ನಡೆದಿವೆ. ಈವರೆಗೂ ಕಳ್ಳರನ್ನು ಬಂಧಿಸುವುದು ಪೊಲೀಸರಿಗೆ ಸಾಧ್ಯವಾಗಿಲ್ಲ ಹೀಗಾಗಿ ಜನರೇ ಗುಂಪು ಕಟ್ಟಿಕೊಂಡು ರಾತ್ರಿ ವೇಳೆ ಗಸ್ತು ತಿರುಗಲು ಆರಂಭಿಸಿದ್ದಾರೆ.
ಕಳೆದ 6 ತಿಂಗಳಿನಿಂದ ಪಟ್ಟಣದಲ್ಲಿ ಹೆಚ್ಚಾಗಿರುವ ಕಳ್ಳತನ ಪ್ರಕರಣಗಳಿಂದ ಬೇಸತ್ತಿರುವ ಸ್ಥಳೀಯ ಸಾರ್ವಜನಿಕರು ರಾತ್ರಿ ಹೊತ್ತಲ್ಲಿ ತಾವೇ ಗಸ್ತು ತಿರುಗುವ ಮೂಲಕ ಕಳ್ಳರ ಹಾವಳಿಗೆ ಬ್ರೇಕ್ ಹಾಕಲು ಪ್ರಯತ್ನ ನಡೆಸಿದ್ದಾರೆ.
ಮೆಣಸಿನಕಾಯಿ ವಹಿವಾಟಿನಿಂದ ಗುರುತಿಸಿಕೊಂಡಿರುವ ಬ್ಯಾಡಗಿ ಪಟ್ಟಣ ಕಳೆದ ಆರು ತಿಂಗಳಿನಿಂದ ಮನೆ ಕಳ್ಳತನ ಪ್ರಕರಣಗಳಿಂದ ಚರ್ಚೆಗೆ ಗ್ರಾಸವಾಗಿದೆ. ಕಳ್ಳತನ ಪ್ರಕರಣಗಳಿಂದ ಹೈರಾಣಾಗಿರುವ ಜನತೆ ಮನೆ ಬಿಟ್ಟು ಎಲ್ಲಿಗೂ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರಕ್ಕೆ ಕಂಡುಕೊಳ್ಳಲು ತಾವೇ ಗಸ್ತಿಗೆ ಮುಂದಾಗಿದ್ದಾರೆ.
ರಾತ್ರಿ ಹೊತ್ತಲ್ಲಿ ಮಾತ್ರ ಕಳ್ಳತನವಾಗುತ್ತದೆ ಎಂಬ ಹಣೆಪಟ್ಟಿಯನ್ನು ಕಳ್ಳರ ತಂಡವೊಂದು ಅಳಿಸಿದ್ದು, ಹಾಡಹಗಲೇ ಜನನಿಬಿಡ ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗಿ ಕೋಟ್ಯಂತರ ರೂ. ದೋಚಿದೆ. ಈ ಕಳ್ಳತನ ಪ್ರಕರಣಗಳೇ ಇದೀಗ ಸಾರ್ವಜನಿಕರ ನಿದ್ದೆಗೆಡಿಸಿದೆ. ಕಳ್ಳರ ಪತ್ತೆಗೆ ಪೊಲೀಸ್ ಇಲಾಖೆ ಕರಪತ್ರ ಹಂಚಿಕೆ ಸೇರಿದಂತೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಿ ಎಂದು ಜಾಗೃತಿ ಕೈಗೊಂಡಿದೆ. ಆದರೆ ಇಲ್ಲಿಯವರೆಗೂ ಯಾವೊಬ್ಬ ಕಳ್ಳನನ್ನು ಬಂಧಿಸಲು ಸಾಧ್ಯವಾಗಿಲ್ಲ. ಇದರೊಟ್ಟಿಗೆ ಬ್ಯಾಡಗಿ ಪಟ್ಟಣದ ಕೆಲವು ಜನರು ಸಹ ಕಳ್ಳರ ತಂಡಕ್ಕೆ ಪರೋಕ್ಷವಾಗಿ ಕೈಜೋಡಿಸಿದ್ದಾರೆ ಎಲ್ಲವನ್ನೂ ಪೊಲೀಸ್ ಇಲಾಖೆ ಮಾಡಲಿ ಎಂದು ಕಾಯುತ್ತಾ ಕುಳಿತುಕೊಳ್ಳುವುದು ಸರಿಯಲ್ಲ. ನಮ್ಮ ಕೈಲಾದಷ್ಟು ನಾವು ಕೂಡ ವಾರ್ಡ್ ರಕ್ಷಣೆ ಮಾಡುವುದು ಇಂತಹ ಸಮಯದಲ್ಲಿಅನಿವಾರ‍್ಯ. ಈ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಂಡಿದ್ದೇವೆ” ಎಂದು ಸಾರ್ವಜನಿಕರು ಹೇಳಿದ್ದಾರೆ
ವರದಿ : ರಮೇಶ್ ತಾಳಿಕೋಟಿ