ಬಾದಾಮಿ:-ಚೊಳಚಗುಡ್ಡ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಗ್ರಾಮದೇವತೆ ದುರ್ಗಾದೇವಿ ಗೆ ಪ್ರತಿ ಮಂಗಳವಾರ ವಾರ ಹಿಡಿದು ಇಡೀ ಗ್ರಾಮವೇ ಭಕ್ತಿ ಭಾವದಿಂದ ದುರ್ಗಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಉಡಿ ತುಂಬಿ ಊರಿನಲ್ಲಿ ಶಾಂತಿ ನೆಲೆಸಿ ಸಮೃದ್ಧಿಯಿಂದ ಇರಲೆಂದು ಬೇಡಿಕೊಂಡು ನಮಿಸುವುದು ಕಾಲಕಾಲಂತರದಿಂದಲೂ ವಾರ ಹಿಡಿಯುತ್ತ ಬಂದಿರುವುದು ವಾಡಿಕೆ.
ಗ್ರಾಮದ ಮಹಿಳೆಯರು ಆರತಿ ಹಿಡಿದು ಗ್ರಾಮದಲ್ಲಿರೋ ಗ್ರಾಮ ದೇವತೆಗಳ ದೇವಸ್ಥಾನಗಳಿಗೆ ಡೊಳ್ಳು ವಾದ್ಯಗಳೊಂದಿಗೆ ಸಾಗುತ್ತಾ ಉಡಿ ತುಂಬಿ ಪೂಜೆ ಸಲ್ಲಿಸಿ ಕೊನೆಗೆ ಬಾಲಗಲ್ಲ ಗುಡ್ಡದಲ್ಲಿರುವ ಅಮ್ಮನವರ ಮಠಕ್ಕೆ ಪೂಜೆ ಸಲ್ಲಿಸಿ ಶ್ರೀ ವೀರಭಧ್ರೆಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಮೆರವಣಿಗೆಗೆ ಮಂಗಲ ಹಾಡಿ ಮೆರವಣಿಗೆ ಮುಕ್ತಾಯ ಮಾಡುವರು.
ಇಂದು ಕೊನೆಯ ವಾರ ಇರುವುದರಿಂದ ಗ್ರಾಮದ ಗುರುಹಿರಿಯರು ಗುರುಪಾದಪ್ಪ ವಾಲಿ, ಎಂ. ಟಿ ಗಾರವಾಡ, ವಿ. ಎನ್. ಸಾತಣ್ಣವರ ಗುರುಗಳು,ಮುತ್ತಣ್ಣ ಹುಂಬಿ,,ಕುಬೇರಗೌಡ ಪಾಟೀಲ, ಪ್ರಕಾಶ ಧನ್ನೂರ, ಮನೋಹರ ಈಳಗೇರ,ಇರಸಂಗಪ್ಪ ನಾಗೂರ ಗುರುಗಳು, ಮಾಜಿ ಸೈನಿಕ ಸಂಗಪ್ಪ ಹೂಗಾರ,,ಈರಪ್ಪ ನಾಗೂರ,ರಾಜು ಹಟ್ಟಿ,ವಿನೋದ ವಾಲಿ,,ಕಿರಣ್ ಕುಲಕರ್ಣಿ, ಸೇರಿದಂತೆ ಇನ್ನೂ ಅನೇಕ ಯುವ ಮುಖಂಡರು ಮೆರವಣಿಗೆಯ ಸುಮಂಗಳೆಯರು ಆರತಿಯೊಂದಿಗೆ ದುರ್ಗಾದೇವಿ ಡೊಳ್ಳಿನ ಸಂಘದ ನಾಗನಗೌಡ ಪಾಟೀಲ ಸಾರತ್ಯದಲ್ಲಿ ಡೊಳ್ಳಿನ ವಾದ್ಯಗಳೊಂದಿಗೆ ಗ್ರಾಮದ ದೇವತೆಗಳಿರುವ ದೇವಸ್ಥಾಗಳಿಗೆ ಮೆರವಣಿಗೆ ಮೂಲಕ ಸಾಗುತ್ತಾ ಉಡಿ ತುಂಬಿ ಪೂಜೆ ಸಲ್ಲಿಸಿ ಗ್ರಾಮ ದೇವತೆ ಕೃಪೆಗೆ ಪಾತ್ರರಾದರು.
ವರದಿ:- ರಾಜೇಶ್. ಎಸ್. ದೇಸಾಯಿ